ಶಿವಮೊಗ್ಗದ ಡೇರ್ ಡೆವಿಲ್ ಇಸ್ಮಾಯಿಲ್ ಖಾನ್ ಸಾಹೇಬರಿಗೆ 38 ನೇ ವಿವಾಹ ವಾಷಿ೯ಕೋತ್ಸವದ ಶುಭಹಾರೈಕೆ ಕಳೆದ ವರ್ಷದ ಈ ಪೋಸ್ಟಿನೊಂದಿಗೆ.
#ಶಿವಮೊಗ್ಗದ_ಕಾಂಗ್ರೇಸ್_ಮುಖಂಡ_ಇಸ್ಮಾಯಿಲ್_ಖಾನ್_ಸಾಹೇಬರ_ನಾನು_ಮರೆಯುವಂತಿಲ್ಲ.
#ಭ್ರಷ್ಟಾಚಾರ_ವಿರೋದಿ_ಹೋರಾಟದಲ್ಲಿ_ಜೈಲು_ಸೇರಿದ್ದ_ನನ್ನ_ಪರವಾಗಿ_ಹೋರಾಟ_ರೂಪಿಸಿದವರು
#ಇವತ್ತು_ಇವರ_37ನೇ_ವಿವಾಹ_ವಾರ್ಷಿಕೋತ್ಸವ.
#ಕಾನೂನು_ಬಿಬಿಎಂ_ಪದವೀರರು
#ರಾಜ್ಯ_ಅರಣ್ಯಾಭಿವೃದ್ಧಿ_ಕಾಪೋ೯ರೇಷನ್
#ಶಿವಮೊಗ್ಗ_ಭದ್ರಾವತಿ_ನಗರಾಭಿವೃದ್ಧಿ_ಪ್ರಾಧಿಕಾರದ_ಅದ್ಯಕ್ಷರಾಗಿದ್ದರು.
https://arunprasadhombuja.blogspot.com/2022/07/blog-number-903-37.html
ಶಿವಮೊಗ್ಗ ಜಿಲಾ ಪಂಚಾಯತ್ ಸದಸ್ಯನಾಗಿದ್ದಾಗ ಜಿಲ್ಲಾ ಪಂಚಾಯತ್ ಖರೀದಿಸಿದ ಔಷದಿ ಕಳಪೆ ಅಂತ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಡಿಸ್ಟ್ರಿಕ್ಟ್ ಸರ್ಜನ್ ನೀಡಿದ ಸಣ್ಣ ಸುಳಿವು ಜಿಲ್ಲಾ ಪಂಚಾಯತ್ ಸಭೆಯಲ್ಲಿ ತನಿಖೆಗೆ ಒತ್ತಾಯಿಸಿದ್ದೆ ಆ ಸಭೆಯಲ್ಲಿ ಈಶ್ವರಪ್ಪ, ಆರಗ ಜ್ಞಾನೇಂದ್ರ, ಹೊಸನಗರ ವಿದಾನ ಸಭಾ ಕ್ಷೇತ್ರದಿಂದ ಶಾಸಕರಾಗಿದ್ದ ಅಯನೂರು ಮಂಜುನಾಥರೂ ಇದ್ದರು.
ಅದೇ ದಿನ ರಾತ್ರಿ ಔಷದಿ ಗೋದಾಮು ವಿದ್ಯುತ್ ಅವಘಡದಿಂದ ಭಸ್ಮ ಆಯಿತು (ಅಧಿಕಾರಿಗಳೆ ಸುಟ್ಟು ಹಾಕಿದ್ದು) ಅಂತ ಅದರ ಮರುದಿನ ಪತ್ರಿಕೆಯಲ್ಲಿ ಬಂತು ನಾನು ಜಿಲ್ಲಾ ಪಂಚಾಯತ್ ನಲ್ಲಿ ಪತ್ರಿಕಾಗೋಷ್ಟಿ ಕರೆದು ಇದು ಕಳಪೆ ಔಷದಿ ಖರೀದಿ ಮಾಡಿದ ಅಧಿಕಾರಿಗಳು ತನಿಖೆ ಆದರೆ ಸಿಕ್ಕಿಬೀಳುವ ಭಯದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಮುಚ್ಚಲು ಮಾಡಿದ ನಾಟಕ ಇದು ಸಿಬಿಐ ತನಿಖೆ ಆಗಬೇಕೆಂದು ಒತ್ತಾಯಿಸಿದೆ.
ಮುಂದಿನ ಜಿಲ್ಲಾ ಪಂಚಾಯತ್ ಸಭೆಯಲ್ಲಿ ತನಿಖೆಗೆ ಒತ್ತಾಯಿಸಿ ಸಭೆ ಸರಿಯಾಗಿ ನಡೆಸಲಾಗದೇ ಮುಂದೂಡಲಾಯಿತು ಆದರೆ ನನ್ನ ಮೇಲೆ ಜಿಲ್ಲಾ ಪಂಚಾಯತ್ ಮುಖ್ಯ ಕಾಯ೯ನಿರ್ವಾಹಕ ಅಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿಗಳು ಸಭೆಯಲ್ಲಿ ಅವ್ಯಾಚ ನಿಂದನೆ, ಹಲ್ಲೆಯತ್ನ ಎಂಬ ದೂರು ನೀಡಿದರು ಅವರಿಗೆ ಇಡೀ ಜಿಲ್ಲೆಯ ಸಕಾ೯ರಿ ನೌಕರರ ಸಂಘ ಬೆಂಬಲಿಸಿತು, ಜಿಲ್ಲಾ ರಕ್ಷಣಾಧಿಕಾರಿಗಳು ಅಧಿಕಾರಿಗಳ ಪರವಾಗಿದ್ದರು, ಕಾಗೋಡು ತಿಮ್ಮಪ್ಪನವರೂ ಆಗ ರಾಜಕೀಯವಾಗಿ ನನಗೆ ವಿರುದ್ದ,ಆಗಿನ ಸಂಸದ ಡಿ.ಬಿ.ಚಂದ್ರೇಗೌಡರೂ ವಿರುದ್ಧವಾಗಿದ್ದರಿಂದ ನನಗೆ ಜೈಲಿಗೆ ಕಳಿಸಿದರು.
ಮೊದಲ ಬಾರಿಗೆ ಒಬ್ಬಂಟಿ ಆಗಿ ಜೈಲಿಗೆ ಹೋದಾಗ ಆಗುವ ಎಲ್ಲಾ ಆಸಹಾಯಕತೆ, ನ್ಯಾಯ ಕೇಳಿದ್ದು ತಪ್ಪಾ ಎಂಬ ನನ್ನಲ್ಲೇ ಪದೇ ಪದೇ ಪ್ರಶ್ನಿಸುವ ನನ್ನ ಮನಸ್ಸು, ಕೈಗೆ ಬೇಡಿ ತೊಡಿಸಿದ ಪೋಲಿಸರು ಇವೆಲ್ಲ ಸಹಜವಾಗಿ ನನಗೆ ಒ0ದು ರೀತಿ ಶಾಕ್ ಆಗಿತ್ತು (ನಂತರ ಈ ರೀತಿ ಅನೇಕ ಹೋರಾಟದಲ್ಲಿ ಜೈಲು ಸೇರಿದಾಗ ಹೀಗೆ ಅನ್ನಿಸುತ್ತಿರಲಿಲ್ಲ) ರಾತ್ರಿ ನಿದ್ದೆ ಇಲ್ಲ, ಹೊಸ ಪರಿಸರ ಸುತ್ತಲೂ ಅಪರಿಚಿತರು, ಬೆಳಿಗ್ಗೆ ಹೊರಬಿಟ್ಟಾಗ ತಣ್ಣೀರಲ್ಲಿ ಸ್ನಾನ ಮಾಡಿ ಸೆಲ್ ಒಳಗೆ ಬಂದಾಗ ಅಲ್ಲಿನ ಒಬ್ಬ ಖೈದಿ ನನಗೆ ಗುಡಿಸುವ ಕೆಲಸ ಹೇಳಿದ (ಒಂದು ತರ ರಾಗಿಂಗ್) ಸರಿ ಅಂತ ಗುಡಿಸಲು ಹೋದಾಗ ಅಲ್ಲಿ ಕೊಲೆ ಪ್ರಯತ್ನದ ಗ್ಯಾಂಗ್ ವಾರ್ ನಲ್ಲಿ ಜೈಲು ಸೇರಿದವರು ಅವನಿಗೆ ಜೋರು ಮಾಡಿ ನಾನ್ಯಾರೆಂದು ತಿಳಿಸಿದರು (ಮುಂದೆ ಇಂತಹದೇ ಗ್ಯಾಂಗ್ ವಾರ್ ನಲ್ಲಿ ಅವರು ಕೊಲೆ ಆದರು) "ನಿಮಗೆ ನನ್ನ ಪರಿಚಯ ಹೇಗೆ?" ಅಂದಾಗ ಅವರು ನನ್ನ ಹೋರಾಟಗಳನ್ನು ಪತ್ರಿಕೆಯಲ್ಲಿ ಓದುತ್ತಿದ್ದರಂತೆ ಮತ್ತು ಜೈಲರ್ ನಾನು ಜೈಲಿಗೆ ಬರುವ ಸುದ್ದಿ ಹಿಂದಿನ ದಿನ ಸಂಜೆ ಮೊದಲೇ ತಿಳಿಸಿದ್ದರೆಂದರು.
ಅಷ್ಟರಲ್ಲಿ ಜೈಲರ್ ರಿಂದ ಕರೆ ಬಂತು ಅಲ್ಲಿ ಹೋದರೆ ಅವತ್ತಿನ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದ ಇಸ್ಮಾಯಿಲ್ ಖಾನ್ ಸಾಹೇಬರು, ಹಿರಿಯ ಕಾಂಗ್ರೇಸ್ ಮುಖಂಡರಾದ ರಾಮೇಗೌಡರು ಮತ್ತು ಜಿಲ್ಲೆಯ ಪ್ರಸಿದ್ಧ ಮಲ್ಲಿಕಾರ್ಜುನ ಟ್ರಾನ್ಸ್‌ಪೋರ್ಟ್ ಮಾಲಿಕರಾದ ವೈ.ಹೆಚ್.ನಾಗರಾಜ್ ನನಗಾಗಿ ಅವರ ಮನೆಯಿಂದ ಉಪಹಾರದ ಟಿಪನ್ ಕ್ಯಾರಿಯರ್ ಜೊತೆಗೆ ಬಂದಿದ್ದರು.
ಜಿಲ್ಲೆಯ ಕಾಂಗ್ರೇಸ್ ಅತಿರಥ ಮಹಾರಥರಾದ ಕಾಗೋಡು, ಡಿ.ಬಿ.ಚಂದ್ರೇಗೌಡರ ವಿರೋದವಿದ್ದರೂ ಇಡೀ ಜಿಲ್ಲಾ ಕಾಂಗ್ರೇಸ್ ಪಕ್ಷ ನನ್ನ ಪರವಾಗಿ ಬ್ರಷ್ಟಾಚಾರದ ವಿರೋದದ ನನ್ನ ಹೋರಾಟದ ಪರವಾಗಿ ದೊಡ್ಡ ಆಂದೋಲನವೇ ರೂಪಿಸಲು ಇವರುಗಳು ಕಾರಣರಾದರು. ಈ ನನ್ನ ಹೋರಾಟಕ್ಕೆ ನೆಹರೂ ರಸ್ತೆಯ ವಸತಿ ಗೃಹದ ಮಾಲಿಕರಾದ ನರೇಂದ್ರ ಕುಮಾರ್ ಆಗಿನ ಯುವ ಹೋರಾಟಗಾರರಾಗಿದ್ದ ರವಿಕುಮಾರ್, ಎಸ್.ಪಿ ದಿನೇಶ್, ವೆಂಕಟೇಶ್ ಗೌಡ, ದೇವೇಂದ್ರಪ್ಪ,ರಂಗನಾಥ್ ಸೇರಿ (ಎಲ್ಲರ ಹೆಸರೂ ಬರೆಯಲಾಗುತ್ತಿಲ್ಲ) ಜಿಲ್ಲೆಯ ಪತ್ರಕರ್ತರೂ, ಜನಪರ ಸಂಘಟನೆಗಳೂ ಸೇರಿ ದೊಡ್ಡ ಹೋರಾಟವೇ ಆಯಿತು.
ಮುಖ್ಯಮಂತ್ರಿಗಳಾಗಿದ್ದ ಜೆ.ಹೆಚ್.ಪಟೇಲರು ಅವರ ಗೃಹ ಕಚೇರಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು ಅಂತೆ, ತಕ್ಷಣ ಅವರನ್ನು, ಜಿಲ್ಲಾ ಪಂಚಾಯತ್ ಮುಖ್ಯ ಕಾಯ೯ನಿವಾ೯ಹಣಾಧಿಕಾರಿಗಳನ್ನು ವರ್ಗಾಯಿಸಿ, ಜಿಲ್ಲಾ ಆರೋಗ್ಯಾಧಿಕಾರಿ ಅಮಾನತ್ತು ಮಾಡಿದ್ದರು.
ನನ್ನನ್ನು ಬಂದಿಸಿ ಟಾರ್ಚರ್ ಮಾಡಿಸಲು ಅಧಿಕಾರಿಗಳಿಗೆ ನನ್ನ ವಿರುದ್ದವಿದ್ದ ರಾಜಕಾರಣಿಗಳ ಬೆಂಬಲವೂ ಇತ್ತು ಆದರೆ ನಾನು ಅವರ ಕೈಗೆ ಸಿಗಲಿಲ್ಲ, ನನ್ನ ಮನೆ ಎದರು ರಿಸರ್ವ್ ವ್ಯಾನ್ ನಾಕಾರು ಪೋಲಿಸ್ ಜೀಪ್ ಗಳು ಮತ್ತು ನಾನು ಬಂದನಕ್ಕೆ ಸಿಗದೆ ತಪ್ಪಿಸಿಕೊಳ್ಳಲು ಆನಂದಪುರಂ ASI ಜಯರಾಂ ಮಾಹಿತಿ ನೀಡಿದರೆಂದು ಅನುಮಾನದಿಂದ ಅಮಾನತ್ತು ಮಾಡಿದ್ದರು.
ಶಿವಮೊಗ್ಗ ಪೇಟೆಯ ಜಯನಗರ ಠಾಣೆ ಎದರು ಪೋಲಿಸರ ದೌರ್ಜನ್ಯ ವಿರೋದಿಸಿ ರಾತ್ರೋ ರಾತ್ರಿ ಶಿವಮೊಗ್ಗದ ಯುವ ಮುಖಂಡರು ಕೋಟ್ಯಾಂತರ ಮೌಲ್ಯದ ಬಡವರ ಔಷದಿ ಸುಟ್ಟರುವ ಭ್ರಷ್ಟಾಚಾರಿಗಳ ಪರವಾಗಿ ಇದನ್ನು ವಿರೋದಿಸಿದ ಜನಪ್ರತಿಯನ್ನು ಪೋಲಿಸ್ ಬಲ ಬಳಸಿ ಹತ್ತಿಕ್ಕುವುದನ್ನು ವಿರೋದಿಸಿ ಧರಣಿ ನಡೆಸಿದಾಗ ಅನಿವಾಯ೯ವಾಗಿ ನನ್ನ ಮನೆ ಎದರು ಜಮಾಯಿಸಿದ ಪೋಲಿಸ್ ಪಡೆ ವಾಪಾಸಾಯಿತು ಮತ್ತು ASI ಜಯರಾಂ ಅಮಾನತ್ತು ವಾಪಾಸು ಪಡೆದರು ಆಗೆಲ್ಲ ಈಗಿನ ರೀತಿ TV ಮಾಧ್ಯಮ, ಸೋಷಿಯಲ್ ಮೀಡಿಯ ಇಲ್ಲದ ಕಾಲ.
ಹೀಗೆ ಹತಾಶೆಯಿಂದ ಜೈಲಲ್ಲಿ ಮೊದಲ ದಿನದ ಬೆಳಗು ನೋಡುವಾಗ ಬಂದ ಈ ತ್ರೀಮೂರ್ತಿಗಳಾದ #ಇಸ್ಮಾಯಿಲ್_ಖಾನ್,#ರಾಮೇಗೌಡರು ಮತ್ತು #ವೈಹೆಚ್_ನಾಗರಾಜ್ ನಾನು ಜೀವಮಾನದಲ್ಲಿ ಮರೆಯದಂತ ವ್ಯಕ್ತಿಗಳು ಇವರು ಜಿಲ್ಲಾ ಕಾಂಗ್ರೇಸ್ ಮುಖಂಡರನ್ನೆ ಎದುರು ಹಾಕಿಕೊಂಡೂ ಬ್ರಷ್ಟಾಚಾರದ ವಿರುದ್ದ ಹೋರಾಟ ಮಾಡಿದ ನನ್ನನ್ನು ಜೈಲಿಗೆ ಹಾಕಿದ ಅವತ್ತಿನ ಅಧಿಕಾರಶಾಹಿಗೆ ಸರಿಯಾದ ತಿರುಗೇಟು ನೀಡಿದ್ದರು.
ಮುಂದಿನ ದಿನಗಳಲ್ಲಿ ಇಸ್ಮಾಯಿಲ್ ಖಾನ್ ಸಾಹೇಬರು ಕನಾ೯ಟಕ ರಾಜ್ಯ ಅರಣ್ಯಾಭಿವೃದ್ದಿ ನಿಗಮದ ಅಧ್ಯಕ್ಷರಾಗಿದ್ದರು, ಶಿವಮೊಗ್ಗ - ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು, ಶಿವಮೊಗ್ಗ ವಿದಾನ ಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸಿದ್ದರು, ಸ್ವತಃ ಬಿಬಿಎಂ ಮತ್ತು ಕಾನೂನು ಪದವೀದರರಾದ ಇಸ್ಮಾಯಿಲ್ ಖಾನ್ ರವರಿಗೆ ದೆಹಲಿಯ ಕಾಂಗ್ರೇಸ್ ನಾಯಕರ ಸಂಪರ್ಕ ಜಾಸ್ತಿ ಇದೆ.
ಇವರ ಪುತ್ರಿ ವೈದ್ಯರಾಗಿದ್ದಾರೆ.
ಇವತ್ತು ಅವರ 37ನೇ ವಿವಾಹ ವಾರ್ಷಿಕೋತ್ಸವ ಈ ಸಂದಭ೯ದಲ್ಲಿ ದೇವರು ದಂಪತಿಗಳಿಗೆ ಆಯುರಾರೋಗ್ಯ, ಆಯುಸ್ಸು ಮತ್ತು ಐಶ್ವಯ೯ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.
Comments
Post a Comment