"ದಿನಪತ್ರಿಕೆಗಳು ಏಕೆ ಬೇಕೆಂದರೆ ಇದಕ್ಕೆ?!"
ಇತ್ತೀಚೆಗೆ ಕನ್ನಡ ಟಿವಿ ಮಾಧ್ಯಮಗಳು ಜನರನ್ನ ಮುಖ೯ರಾಗಿಸುವ ಇಂತಹ ಅನೇಕ ವಿಷಯಗಳಿಗೆ ವಿಪರೀತ ಪ್ರಾಮುಖ್ಯತೆ ನೀಡಿ ಸಾವ೯ಜನಿಕರಲ್ಲಿ ಸನ್ನಿ ರೋಗಕ್ಕೆ ಕಾರಣವಾಗಿತ್ತು, ವಿಜ್ಞಾನ ಇಷ್ಟಲ್ಲ ಮುಂದುವರಿದಿದ್ದು ಸುದ್ದಿಯ ಮೂಲ ಹಾಗು ಪರೀಕ್ಷಿಸುವ ಗೋಜಿಗೆ ಹೋಗದೆ ಸುಳ್ಳು ವರದಿಯನ್ನ ರೋಚಕದತ್ತ ಸಾಗಿಸುವ ಕೆಲಸ ಮಾಡುತ್ತಿತ್ತು.
ಇದರಿ೦ದ ನಮ್ಮ ಹಳ್ಳಿಗಳಲ್ಲಿ ಅವರು ತ೦ದ ಅಕ್ಕಿ ಪ್ಲಾಸ್ಟಿಕ್ ಆಗಿತ್ತ೦ತೆ ಹಾಗೆ ಊಟ ಮಾಡದೆ ಚೆಲ್ಲಿದರಂತೆ, ಮೊನ್ನೆ ಇವರು ತಂದ ಮೊಟ್ಟೆ ಆಮ್ಲಟ್ ಮಾಡಿದ ಮೇಲೆ ಅದ೯ ತಿಂದ ಮೇಲೆ ಪ್ಲಾಸ್ಟಿಕ್ ಅಂತ ಗೊತ್ತಾಗಿ ವಾಂತಿ ಆಯಿತಂತೆ ಅಂತ ಶುರುವಾಗಿ ಮೊನ್ನೆ ನಮ್ಮ ಮನೇಲಿ ಮಾಡಿದ ಆಮ್ಲಟ್ ತಿನ್ನಲು ನನಗೇ ಮನೋರೋಗದ ಶಂಕೆ ಆಗಿತ್ತು.
ಇವತ್ತಿನ ದಿನ ಪತ್ರಿಕೆಯಲ್ಲಿ ಪ್ಲಾಸ್ಟಿಕ್ ಮೊಟ್ಟೆ ತಯಾರಿಸಿದರೆ ನೋಬಲ್ ಪ್ರಶಸ್ತಿ ಕೊಡಬಹುದೆಂಬ ತಲೆಬರಹದಲ್ಲಿ ಆಹಾರ ತಜ್ಞ ರಘುರವರ ವರದಿ ಈ ಎಲ್ಲಾ ಮೌಡ್ಯತೆಗೆ ಒಂದು ರೀತಿ ಮುಕ್ತಾಯ ಹಾಡಿದೆ.
ದಿನಪತ್ರಿಕೆಗಳು ಆದಷ್ಟು ಸಮಾಜ ಮುಖಿಯಾಗಿ ಕೆಲಸ ಮಾಡುವುದಕ್ಕೆ ಇದೊ೦ದು ಉದಾಹರಣೆ.
Comments
Post a Comment