Blog number 1584. ರುದ್ರಾಕ್ಷಿ ಹಲಸಿನ ಹಣ್ಣು 50 ವಷ೯ದ ನಂತರ ತಿಂದ ಅನುಭವ ಮತ್ತು ಆ ದಿನದ ನೆನಪುಗಳ ಸರಣಿಯ ಪುನರ್ ಸ್ಮರಣೆ
https://youtu.be/5dKMcBzRLP8
#ಐವತ್ತು_ವರ್ಷದ_ನಂತರ_ಸವಿದ_ಈ_ತಳಿ.
#ಬಾಲ್ಯದಲ್ಲಿ_ಬಿದನೂರು_ನಗರದಲ್ಲಿನ
#ದೇವಗಂಗೆ_ಮನೆಯಲ್ಲಿ_ದೊಡ್ದಮ್ಮ_ತಿನ್ನಿಸಿದ_ನೆನಪು
ಪ್ರತಿ ವರ್ಷ ತೀರ್ಮಾನ ಮಾಡುವುದು ಈ ವರ್ಷ ಹಲಸಿನ ಹಣ್ಣಿನ ಸೀಸನ್ ನಲ್ಲಿ ರುದ್ರಾಕ್ಷಿ ಹಲಸು ಹುಡುಕಿ ತರಬೇಕು ಅಂತ ಅದಕ್ಕ ಕಾರಣ ನನ್ನ ತಾಯಿಯ ಅಕ್ಕನ ಅಂದರೆ ನನ್ನ ದೊಡ್ಡಮ್ಮ ಮತ್ತು ದೊಡ್ಡಪ್ಪರ ಮನೆ ಕೃಷಿ ಭೂಮಿ ಬಿದನೂರು ನಗರದ ಐತಿಹಾಸಿಕ ಕೆಳದಿ ರಾಜವಂಶಸ್ಥರ ನೈಸರ್ಗಿಕ ಈಜು ಕೊಳದ ಪಕ್ಕದಲ್ಲಿಯೆ ಇದೆ.
ಅಲ್ಲಿ ನನ್ನ ಬಾಲ್ಯದ ಸಿಹಿಯಾದ ಸವಿಯಾದ ನೆನಪುಗಳಿದೆ ಅದರಲ್ಲಿ ನೂರಾರು ರುಚಿ ಸ್ವಾದದ ಮಾವಿನ ಹಣ್ಣು, ಹಲಸಿನ ಹಣ್ಣುಗಳ ತಿಂದ ನೆನಪುಗಳು ಆದರೆ ಮುಂಗಾರು ಪೂರ್ವದ ಮತ್ತು ನಂತರದ ದಿನಗಳಲ್ಲಿ ಅದೆಂತಹದ್ದೋ ಆದ ಗಡಿಬಿಡಿಯ ಬೇರೆ ಕೆಲಸಗಳ ತಯಾರಿ ಮತ್ತು ಅದನ್ನು ಮುಗಿಸುವಲ್ಲಿ ಹಲಸಿನ ಸೀಸನ್ ಮುಕ್ತಾಯವಾಗಿರುತ್ತದೆ ಮತ್ತೆ ಹೊಸ ಪ್ಲಾನ್ ಮುಂದಿನ ವರ್ಷಕ್ಕೆ ಅಂತ ಮಾಡುವುದು ಈ ರೀತಿ 50 ವರ್ಷದಿಂದ ರುದ್ರಾಕ್ಷಿ ಹಲಸು ತಿಂದೇ ಇರಲಿಲ್ಲ.
ರುದ್ರಾಕ್ಷಿ ಹಲಸಿನಲ್ಲೂ ಹಲವು ಬಗೆಯಿದೆ, ಇದು ಸಣ್ಣ ಪುಟ್ ಬಾಲ್ ಗಾತ್ರಕ್ಕಿಂತ ಕೊಂಚ ಸಣ್ಣದೆ, ಮುಳ್ಳುಗಳು ಅತಿ ಕಡಿಮೆಯ ನುಣ್ಣನೆ ಕವಚ ಮತ್ತು ದಾಕ್ಷಿ ಗೊಂಚಲು ನೆನಪಿಸುವಂತೆ ಹಲಸಿನ ಮರದ ಬುಡದಿಂದ ತಲೆ ತನಕ ಹಲಸಿನ ಹಣ್ಣುಗಳು, ದ್ರಾಕ್ಷಿಗಿಂತ ದೊಡ್ಡದಿರುವುದರಿಂದ ರುದ್ರಾಕ್ಷಿ ಆ೦ತ ಕರೆಯುತ್ತಾರೇನೋ ಗೊತ್ತಿಲ್ಲ.
ಪತ್ರಕರ್ತ ಗೆಳೆಯರು, ನವೀನ ರೀತಿಯ ಕೃಷಿಕರು ಮತ್ತು ಕೃಷಿಯ ಆಸಕ್ತಿಯಿಂದ ತಿರುಗಾಟ ಮಾಡುವ ಶೃಂಗೇಶ್ ಈ ಒಂದು ರುದ್ರಾಕ್ಷಿ ಹಲಸಿನ ಹಣ್ಣು ಕಳಿಸಿದ್ದರು ಇದು ಪುಟ್ ಬಾಲ್ ನ ಅರ್ದ ಗಾತ್ರದ್ದು ಇವತ್ತು ತುಂಬಾ ಆಸಕ್ತಿ ಮತ್ತು ಆಶೆಯಿಂದ 50 ವರ್ಷದ ಹಿಂದಿನ ದೊಡ್ಡಮ್ಮನ ಮನೆ ಪರಿಸರಗಳ ನೆನಪು ಮಾಡುತ್ತಾ ನಾನೇ ಕತ್ತರಿಸಿದೆ.
Comments
Post a Comment