Blog number 1630. ಆನಂದಪುರಂ ಇತಿಹಾಸ ಸಂಖ್ಯೆ 102.ನಿತ್ಯ ಕನ್ನಡ ದಿನ ಪತ್ರಿಕೆ ಪ್ರೇಮಿ ಕೇರಳಿಗ ಕೆ. ಮೊಯಿದ್ದೀನ್ ಕಾಕ
ಕೇರಳಿಗ ಕೆ.ಮೊಹಿದೀನ್ ಕಾಕ ಕನ್ನಡದ ಎಲ್ಲಾ ಪತ್ರಿಕೆ ಪ್ರತಿ ನಿತ್ಯ ಓದಿಯೇ ಮುಂದಿನ ಕೆಲಸ ಮಾಡುವವರಾಗಿದ್ದರು.
ಆನಂದಪುರಂಗೆ ಮೊದಲು ಬಂದ ಮಲೆಯಾಳದ ವಲಸಿಗರಲ್ಲಿ ಮೊಹಿದೀನ್ ಕಾಕ ಕನ್ನಡ ಕಲಿತು ಎಲ್ಲಾ ಪತ್ರಿಕೆ ಓದಿ ಮುಂದಿನ ಕೆಲಸ ಪ್ರಾರಂಬಿಸುವ ನಿತ್ಯ ಕಾಯಕ ಹೊಂದಿದ್ದರು.
ಶುಂಠಿ ವ್ಯಾಪಾರಿ ರಾಮಟ್ಟ, ಪ೦ಚಾಯಿತಿ ಸದಸ್ಯರಾದ ಕರುಣಾಕರನ್, ಮಿಲ್ಟ್ರಿ ಹೋಟೆಲ್ ನಾಯರ್, ನಾಟಾ ಕೊಯ್ಯುವ ಲೋಹಿತಾಶ್ವಾ, ಲಾರಿ ಮಾಲಿಕರಾದ ಅಚ್ಚುತಾಚಾರ್, ಗಾರೆ ಕೆಲಸದ ಗೋಪಿ ಮೇಸ್ತ್ರಿ ಇವರೆಲ್ಲ ಅವರ ಬಾಷೆ, ಆಚರಣೆ ಮತ್ತು ಅವರ ಆಹಾರ ಪದ್ಧತಿಯಿಂದ ನಾವು ಚಿಕ್ಕವರಿದ್ದಾಗ ಬಿನ್ನರಾಗಿ ಕಾಣುತ್ತಿದ್ದರು, ಇವರೆಲ್ಲರ ಮಲೆಯಾಳಿ ಎಕ್ಸೆ೦ಟ್ ನ ಕನ್ನಡ ಬೇರೆ ಅಥ೯ ನೀಡಿ ನಗು ಸುರಿಸುತ್ತಿತ್ತು.
ಮೊಯಿದಿನ್ ಕಾಕ ಆನಂದಪುರಂ ಬಸ್ ಸ್ಟ್ಯಾ೦ಡ್ ಹತ್ತಿರ ಅನೇಕ ವಷ೯ ಎಳನೀರು ಅಂಗಡಿ ನಡೆಸಿದರು ಆಗ ಎದುರಿನ ಸಕಾ೯ರಿ ಕನಕಮ್ಮಳ ಆಸ್ಪತ್ರೆಯಲ್ಲಿ ಒಳ್ಳೆಯ ಸೇವಾ ಮನೋಭಾವದ ವೈದ್ಯರು ಇರುತ್ತಿದ್ದರು ಇಡೀ ಆಸ್ಪತ್ರೆ ರೋಗಿಗಳಿಂದ ತುಂಬಿರುತ್ತಿತ್ತು, ರೋಗಿಗಳನ್ನ ನೋಡಲು ಬರುವ ಅಂದು ಬಂದುಗಳು ಕೈಯಲ್ಲಿ ಎಳನೀರು ಒಯ್ಯುವ ಪದ್ದತಿ ಇತ್ತು ಹಾಗಾಗಿ ಕಾಕನ ಎಳನೀರು ವ್ಯಾಪಾರ ಜೋರಿತ್ತು.
ಮಕ್ಕಳನ್ನ ಕನ್ನಡ ಮಾಧ್ಯಮದಲ್ಲೇ ಓದಿಸಿದರು ಅವರೂ ಅತ್ಯುತ್ತಮವಾಗಿ ಓದಿದರು, ಮಗ ಮೊಹಮದ್ ನನ್ನ ಕ್ಲಾಸ್ ಮೇಟ್ ಅವರು ಸಾಗರದ ಪ್ರಖ್ಯಾತ ಉದ್ದಿಮೆದಾರ, ರಾಜಕಾರಣಿ ಆಗಿದ್ದ ಕೋಯಾ ಸಾಹೇಬರ ಅಳಿಯ ಈಗ ಕ್ಯಾಲಿಕಟ್ ನಲ್ಲಿದ್ದಾರೆ ಒಳ್ಳೆಯ ಬರಹಗಾರ ಕೂಡ.
ಇತ್ತೀಚೆಗೆ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ.
ಮಗಳು ಮರಿಯಮ್ ನನ್ನ ಊರಾದ ಯಡೇಹಳ್ಳಿಯ ಸಕಾ೯ರಿ ಶಾಲೆಯ ಮುಖ್ಯಪಾದ್ಯಾನಿ, ಕಾಕ ಎಲ್ಲಾ ವ್ಯವಹಾರದಿ೦ದ ನಿವೃತ್ತರಾಗಿ ನಿತ್ಯ ನಮಾಜು, ಎಲ್ಲಾ ಪತ್ರಿಕೆಗಳ ಓದು, ಚಹಾ ಸಿಗರೇಟು ಸೇದುತ್ತಾ ಸೈಕಲ್ ನಲ್ಲೆ ತಿರುಗುತ್ತಿದ್ದರು.
ಕಮ್ಯುನಿಸ್ಟ್ ಸಿದ್ದಾoತ ಒಪ್ಪಿದ್ದ ಕಾಕ ಜಾತ್ಯಾತೀತ ಜನತಾದಳದ ಅಭಿಮಾನಿ ಮತ್ತು ಪ್ರಾಮಾಣಿಕ ಕಾಯ೯ಕತ೯ರಾಗಿದ್ದರು.ಪ್ರತಿ ಚುನಾವಣೆಯಲ್ಲಿ ಪ್ರತಿ ಮನೆಗೆ ಜಾತ್ಯಾತಿತ ಜನತಾದಳದ ಕರ ಪತ್ರ ತಲುಪಿಸುವ ಕೆಲಸ ಇವರದ್ದು ಈ ಸೇವೆಗೆ ಪಕ್ಷದ ಹಣ ಕೊಟ್ಟರೆ ನಯವಾಗಿ ನಿರಾಕರಿಸುತ್ತಿದ್ದರು.
ಇವರ ಜೀವನದ ಕಥೆ ಒಮ್ಮೆ ಕೇಳಿದ್ದೆ, ಅವರು ಹೇಳಿದ ಪ್ರಕಾರ ಸಣ್ಣ ವಯಸ್ಸಲ್ಲಿ ತಂದೆ ತಾಯಿ ಕಳೆದುಕೊಳ್ಳುತ್ತಾರೆ, ಇವರ ಸಹೋದರ ಮತ್ತು ಸಹೋದರಿ ಕಷ್ಟದ ಜೀವನ ನಡೆಸಿದ್ದಾಗಿ ಹೇಳಿದ್ದರು.
ಎಲ್ಲ ದಮ೯ದವರೊಂದಿಗೆ ಸಹಜೀವನ ಸಹಬಾಳುವೆ ನಡೆಸಿ ಕನ್ನಡಿಗರೆ ಕನ್ನಡ ಪತ್ರಿಕೆ ಓದದ ಈ ದಿನದಲ್ಲಿ ನಿತ್ಯ ಆನಂದಪುರಂ ಗೆ ಬರುವ ಎಲ್ಲಾ ಪತ್ರಿಕೆ ಓದಿ ವಿಮಶೆ೯ ಮಾಡುತ್ತಿದ್ದ ಕಾಕ ಒಂದು ನೆನಪು ಮಾತ್ರ.
Comments
Post a Comment