Skip to main content

Blog number 1601. ಕೊರಾನಾ ಲಾಕ್ ಡೌನ್ ಡೈರಿ - 2020 ಲೆಟರ್ ನಂಬರ್ 47 (16 - ಜೂನ್-2020)

ಕೊರಾನಾ ಲಾಕ್ ಡೌನ್ ಡೈರಿ -2020
 ಲೆಟರ್ ನಂಬರ್- 47.
   ದಿನಾ೦ಕ: 16-ಜೂನ್ -2020.

#ಕೊರಾನಾ_ಲಾಕ್_ಡೌನ್_ಸಂದಭ೯ದಲ್ಲೇ_ರಕ್ತದಾನದ_ಶತಕ_ಬಾರಿಸಿದ_ದರಣೇoದ್ರದಿನಕರ್


 ರಕ್ತದಾನಕ್ಕೆ ಜನರನ್ನ ಸಂಘ ಸಂಸ್ಥೆಯನ್ನ ಪ್ರೇರೇಪಿಸಿ ರಕ್ತ ಸಂಗ್ರಹಿಸಿ ದಿನದ 24 ಗಂಟೆ ರಕ್ತ ಬೇಕಾದವರಿಗೆ ಆಪತ್ಕಾಲಕ್ಕೆ ಜೀವ ಉಳಿಸುವ ಸಾಥ೯ಕ ಸೇವೆ ಸುಮಾರು 35 ವಷ೯ದಿಂದ ನಡೆಸಿಕೊಂಡು ಬಂದಿರುವ ಸ್ಟತಃ ರಕ್ತದಾನಿ ಆಗಿರುವ ಜೈನ ಸಮುದಾಯದ ಶ್ರೀ ದರಣೇOದ್ರ ದಿನಕರ್ ಜಿಲ್ಲೆಯಲ್ಲಿ ಒಂದು ದಾಖಲೆ ಮಾಡಿದ್ದಾರೆ.
    ಅದು ದಿನಾಂಕ 14 ಜೂನ್ 2020 ರ ರಕ್ತದಾನಿಗಳ ದಿನಾಚಾರಣೆಯ೦ದು ಮತ್ತು ರೆಡ್ ಕ್ರಾಸ್ ಸಂಸ್ಥೆಯ ಶತಮಾನೋತ್ಸವದ ದಿನ ಇವರು ಮಾಡಿದ ರಕ್ತದಾನ 100 ನೇ ರಕ್ತದಾನ.
   ಶಿವಮೊಗ್ಗ ಜಿಲ್ಲೆಯ ರೆಡ್ ಕ್ರಾಸ್‌ ಸಂಸ್ಥೆ ನಿದೇ೯ಶಕರಾಗಿರುವ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಸಂಜೀವಿನಿ ಬ್ಲಡ್ ಬ್ಯಾಂಕ್ ನ ಉಸ್ತುವಾರಿ ಹೊಂದಿರುವ ದಿನಕರ್ ಪರಿಚಯ ಇಲ್ಲದವರೆ ಇಲ್ಲ.
  ಮಧ್ಯರಾತ್ರಿಗೂ ಆಸ್ಪತ್ರೆಯಲ್ಲಿರುವವರ ರಕ್ತ ಬೇಕಾದವರ ಅಂದು ಬಂದುಗಳು ಇವರಿಗೆ ಪೋನಾಯಿಸಿ ಬೇಕಾದ ಗ್ರೂಪಿನ ರಕ್ತ ಪಡೆಯುತ್ತಾರೆ.
  ಸಂಜೀವಿನಿ ಬ್ಲಡ್ ಬ್ಯಾಂಕ್ ಗೋಪಿ ಸಕ೯ಲ್ ನಿಂದ ಜ್ಯೂವೆಲ್ ರಾಕ್ ಹೋಟೆಲ್ ರಸ್ತೆಯಲ್ಲಿರುವ ಆಭರಣ ಜ್ಯೂವೆಲ್ಸ್ ನ ಕೆಳ ಅಂತಸ್ತಿನಲ್ಲಿದೆ ಅಲ್ಲಿ ದಿನದ ಹೆಚ್ಚು ಹೊತ್ತು ದಿನಕರ್ ಇರುತ್ತಾರೆ.
  ದಿನಕರ್ ರಕ್ತದ ಗುಂಪು AB+ , ಇವರ ಸೆಲ್ ನಂಬರ್9844101866.
ಜಿಲ್ಲೆಯ ಜನರ ಜೀವ ಕಾಪಾಡುವ ರಕ್ತದಾನಕ್ಕೆ ಪ್ರೇರೇಪಿಸುವ ದರಣೇ೦ದ್ರ ದಿನಕರ್ ರ 100 ನೇ ವೈಯಕ್ತಿಕ ರಕ್ತದಾನದ ಸಂದರ್ಭದಲ್ಲಿ ಅವರನ್ನ ಅಭಿನಂದಿಸುತ್ತೇನೆ ಮತ್ತು ದೇವರು ಅವರಿಗೆ ಆಯುರಾರೋಗ್ಯ - ಆಯಸ್ಸು- ಯಶಸ್ಸು ದಯಪಾಲಿಸಲಿ ಎಂದು ಹಾರೈಸುತ್ತೇನೆ.

Comments