#ತಾಲಿಪಟ್ಟು_ಒಡಪೆ_ತರಕಾರಿರೊಟ್ಟಿ_ಹೆಂಚಿನದೊಸೆ
ಮುಂತಾದ ಹೆಸರಲ್ಲಿ ಪ್ರಾದೇಶಿಕವಾಗಿ ಕರೆಯಬಹುದಾದ ಇದರಲ್ಲೂ ವೈವಿದ್ಯ ಬಗೆಯಲ್ಲಿ ಅಕ್ಕಿಹಿಟ್ಟಿಗೆ ತರಕಾರಿ, ಸೌತೆ, ನೀರುಳ್ಳಿ, ಹಸಿಮೆಣಸು, ಸಿಹಿ ತಾಲಿಪಟ್ಟು ಬೇಕೆಂದರೆ ಬೆಲ್ಲ ಸಕ್ಕರೆ ಜೊತೆಗೂ ಸೀಸನ್ ಗೆ ತಕ್ಕ ಹಾಗೆ ಆಯ್ಕೆ ಮಾಡಿ ಎಣ್ಣೆ ಅಥವ ತುಪ್ಪ ಸವರಿದ ಕಾವಲೆ ಮೇಲೆ ತಿರುವಿ ಹಾಕಿದರೆ ಬರುವ ವಿಶೇಷ ಸುವಾಸನೆ (Aroma) ಎಂತಹ ರುಚಿ ಗೊತ್ತಾಗದವರ ಮೂಗು ಅರಳಿಸಿ ಬಾಯಲ್ಲಿ ನೀರು ತರಿಸುತ್ತದೆ.
ನಿನ್ನೆ ಗೆಳೆಯ #ನಾಗೇಂದ್ರ_ಸಾಗರ್ ಅವರ ಮನೆಯ ಉಪಹಾರದ ತಾಲಿಪಟ್ಟು ಅವರ ಮಗಳು ತಯಾರಿಸುತ್ತಿದ್ದ ಚಿತ್ರ ಹಾಕಿದ್ದು ನೋಡಿ ಇವತ್ತು ನನ್ನ ಉಪಹಾರ ತಾಲಿಪಟ್ಟು, ಬದನೆಕಾಯಿ ಎಣ್ಗಾಯಿ, ಜವಾರಿ ಕ್ಯಾಪ್ಸಿಕಂ ಹಸಿರು ಪಲ್ಯೆ, ಚಟ್ನಿ ಪುಡಿ ಮೊಸರು, ಎಮ್ಮೆ ಬೆಣ್ಣೆ ಮತ್ತು ಚಹಾ ಆಯಿತು.
Comments
Post a Comment