Skip to main content

Blog number 1602.Champaka The Forgotten Queen of Keladi Kingdom (Tragic Love story) ಕನ್ನಡದಲ್ಲಿ ನಾನು ಬರೆದ "ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ" #ಬೆಸ್ತರರಾಣಿ ಚಂಪಕಾ ಕಾದಂಬರಿಯ ಇಂಗ್ಲೀಷ್ ಅವತರಿಣಿಕೆ.

#ಬರಹಗಾರನಿಗೆ_ಇದಕ್ಕಿಂತ_ಸಂತೋಷ_ಬೇರೆ_ಉಂಟಾ?

#ನನ್ನ_ಚೊಚ್ಚಲ_ಕಾದಂಬರಿ_ಇಂಗ್ಲೀಷನಲ್ಲಿ_ಮುದ್ರಣವಾಗಿ_ಬಂದಿದೆ

#ಅಮೇಜಾನ್_ಪ್ಲಿಪ್_ಕಾರ್ಡ್_ಮುಖಾಂತರ_ಪುಸ್ತಕ_ಎಲ್ಲಾ_ದೇಶದಲ್ಲಿ_ಲಭ್ಯವಿದೆ.

#ಕನ್ನಡದಿಂದ_ಇಂಗ್ಲೀಷ್_ಭಾಷಾಂತರಿಸಿದವರು_ಶಿವಮೊಗ್ಗದ_ಪ್ರತಿಷ್ಠಿತ_ಕರ್ನಾಟಕ_ಸಂಘದ_ಅದ್ಯಕ್ಷರಾದ
#ಎಂ_ಎನ್_ಸುಂದರ್_ರಾಜ್

#ಪಬ್ಲಿಷರ್_IIP_ITERATIVE_INTERNATIONAL_PUBLISHER.

#ವಿಶ್ವದಾದ್ಯಂತ_150_ದೇಶಗಳಲ್ಲಿ_ನಮ್ಮ_ಊರಿನ_ರಂಗೋಲಿ_ಪ್ರವೀಣೆ_ಬೆಸ್ತರ_ರಾಣಿ_ಚಂಪಕಾ_ಕಾದಂಬರಿ_ಲಭ್ಯ.

#ಇಂಗ್ಲೀಷ್_ಕಾದಂಬರಿ_ಹೆಸರು_Champaka_The_Forgotten_Queen_of_Keladi_Kingdom.


  2020ರಲ್ಲಿ ಮೊದಲ ಮುದ್ರಣವಾದ "ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ" #ಬೆಸ್ತರ_ರಾಣಿ_ಚಂಪಕಾ ನಮ್ಮ ಊರಿನ ನಿಜ ಜನಪದ ಕಥೆ, ಇವರ ವಂಶಸ್ಥರು ಇದ್ದಾರೆ, ಸ್ಮಾರಕವಾದ ಚಂಪಕ ಸರಸ್ಸುವಿದೆ, ಇಟಲಿ ಪ್ರವಾಸಿ ಇತಿಹಾಸಕಾರ ಪಿಯೋತ್ರ ಡಲ್ಲಾ ವಲ್ಲೆ 1624 ನವೆಂಬರ್ 8 ರಂದು (ಸುಮಾರು 400 ವರ್ಷದ ಹಿಂದೆ) ಕೆಳದಿ ರಾಜ ವೆಂಕಟಪ್ಪ ನಾಯಕರನ್ನು ರಾಜದಾನಿ ಇಕ್ಕೇರಿಯಲ್ಲಿ ಬೇಟಿ ಮಾಡಿ ದಾಖಲಿಸಿದ ಪತ್ರದಲ್ಲಿ ಈ ದುರಂತ ಪ್ರೇಮ ಕಥೆಯ ಉಲ್ಲೇಖವಿದೆ.
   ಇದರ ಕಥಾ ಎಳೆಯನ್ನು ಇಟ್ಟುಕೊಂಡು ನಾನು ಬರೆದ ಕಾಲ್ಪನಿಕ ಕನ್ನಡ ಕಾದಂಬರಿ ಇಂಗ್ಲೀಷ್ ಗೆ ಅನುವಾದಿಸಿ ಕೊಟ್ಟವರು ಶಿವಮೊಗ್ಗದ ಪ್ರತಿಷ್ಠಿತ ಸಂಸ್ಥೆ ಕರ್ನಾಟಕ ಸಂಘದ ಅಧ್ಯಕ್ಷರಾದ ಎಂ.ಎನ್. ಸುಂದರ್ ರಾಜ್.    
   ಇವರಿಂದ ನಮ್ಮ ಊರಿನ ರಂಗೋಲಿ ಪ್ರವೀಣೆ ಚಂಪಕಾ ಚರಿತ್ರೆ ವಿಶ್ವದಾದ್ಯಂತ 150 ದೇಶಗಳಿಗೆ ಇಂಗ್ಲೀಷ್ ಭಾಷೆಯಲ್ಲಿ ತಲುಪಲಿದೆ,ಈ ಮಹಾನ್ ಕಾರ್ಯಕ್ಕಾಗಿ ಎ೦.ಎನ್. ಸುಂದರ್ ರಾಜ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

   ನನ್ನ ಕನ್ನಡದ " ಸಾಮ್ರಾಜ್ಯ ಇತಿಹಾಸ ಮರೆತಿರುವ"
 #ಬೆಸ್ತರ_ರಾಣಿ_ಚಂಪಕಾ ಈಗ ಇಂಗ್ಲೀಷ್ ನಲ್ಲಿ #ಚಂಪಕಾ_ದಿ_ಪಾರ್ಗಟನ್_ಕ್ವೀನ್_ಆಫ್_ಕೆಳದಿ_ಕಿಂಗಡಮ್ (ಟ್ರಾಜಿಕ್ ಲವ್ ಸ್ಟೋರಿ) #Champaka_The_Forgotten_Queen_of_Keladi_Kingdom (Tragic love story) ಆಗಿ ಓದುಗರಿಗೆ ನೀಡುತ್ತಿರುವ ಸಂಸ್ಥೆ, ಈಗಾಗಲೇ 55 ಸಾವಿರಕ್ಕೂ ಹೆಚ್ಚು ಪುಸ್ತಕ ಮುದ್ರಿಸಿ ಮಾರಾಟ ಮಾಡುತ್ತಿರುವ, ಕಳೆದ 10 ವರ್ಷದಲ್ಲಿ ಪುಸ್ತಕ ಮಾರಾಟದಲ್ಲಿ 100 ಕೋಟಿಗೂ ಹೆಚ್ಚಿನ ಹಣದ ವಹಿವಾಟು ನಡೆಸಿರುವ ಐಐಪಿ ಇಟರೇಟಿವ್ ಇಂಟರ್ ನ್ಯಾಷನಲ್ ಪಬ್ಲಿಷರ್ಸ್ (IIP ITERATIVE INTERNATIONAL PUBLISHER) ಇವರಿಗೂ ಅಭಿನಂದನೆಗಳನ್ನು ಅಪಿ೯ಸುತ್ತೇನೆ.
 ಇದೇ ಸಂಸ್ಥೆ ಈ ಕಾದಂಬರಿಗೆ International standard Book number ನೊಂದಾವಣಿ ಮಾಡಿಸಿದೆ ಮತ್ತು ಈ ಕಾದಂಬರಿ e- book ಕಿಂಡಲ್ ನಲ್ಲಿ ಓದಲು ಅನುವೂ ಮಾಡಿದೆ. 
  ಈ ಪುಸ್ತಕ ಈ ಕೆಳಕಂಡ ಲಿಂಕ್ ಮುಖಾಂತರ ಆರ್ಡರ್ ಮಾಡಿದರೆ ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತಾರೆ.

  ಅಮೇಜಾನ್ ನಲ್ಲಿ.
https://www.amazon.in/dp/935747126X?ref=myi_title_dp.

   ಪ್ಲಿಪ್ ಕಾರ್ಟ್ ನಲ್ಲಿ https://www.flipkart.com/champaka-forgotten-queen-keladi-kingdom-tragic-love-story-hiriya-venkatappa-nayaka-popular-king-dynasty/p/itm93d9cbd69c72c?pid=9789357471268.

ಇಸ್ಟಾ ಮೋಜೋ ಲಿಂಕ್ ನಲ್ಲಿ
https://iip.stores.instamojo.com/product/3846671/champaka-the-forgotten-queen-of-keladi-kingd/.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...