Blog number 1624. ರಾಜ್ಯದ ಪ್ರಖ್ಯಾತ ಶೈಲಿ ಹ್ಯಾಂಡ್ ಲೂಂ ರೆಡಿಮೆಡ್ ಕ್ಲಾತ್ ಸಂಸ್ಥೆ ಯಶಸ್ಸಿನ ಸಾದಕರಾದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡಿನ ಸುಂದರ್ ಮತ್ತು ವಿಜಯ ಲಕ್ಷ್ಮಿ ದಂಪತಿಗಳು ನನ್ನ ಅತಿಥಿ.
#ಶಿವಮೊಗ್ಗ_ಜಿಲ್ಲೆಯ_ಹೆಗ್ಗೋಡಿನ_ಕೈಮಗ್ಗದ_ಸಿದ್ಧಉಡುಪುಗಳ_ಶೈಲಿ_ಸಂಸ್ಥೆ
#ಈ_ಸಂಸ್ಥೆಯ_ಹಿಂದಿನ_ಶ್ರಮಜೀವಿ_ದಂಪತಿಗಳು
#ಸುಂದರ್_ವಿಜಯಲಕ್ಷ್ಮಿ_ದಂಪತಿಗಳು.
#ರಾಜ್ಯದಾದ್ಯಂತ_ಮಾರಾಟ_ಆಗುತ್ತಿರುವ_ಶೈಲಿ_ಬ್ರಾಂಡ್_ಕೈಮಗ್ಗದ_ಸಿದ್ದಉಡುಪು
#ಯಶಸ್ವಿ_ಉದ್ದಿಮೆಯ_ದಂಪತಿಗಳು_ನನ್ನ_ಅತಿಥಿಗಳು.
1996ರಲ್ಲಿ ಹೆಗೋಡಿನಲ್ಲಿ ಖ್ಯಾತ ರಂಗ ನಿರ್ದೇಶಕ ಪ್ರಸನ್ನರು ಪ್ರಾರಂಭ ಮಾಡಿದ ಚರಕ ಸಂಸ್ಥೆಯಲ್ಲಿ ಈ ಸುಂದರ್ ಪ್ರಾರಂಭದಿಂದ ಇದ್ದವರು.
ಆಗ ನಾನು ಚರಕ ಸಂಸ್ಥೆಯಲ್ಲಿ ನನ್ನ ಅಳತೆಯ ಶರ್ಟ್ ಮತ್ತು ಜುಬ್ಬಾಗಳು ನನಗೆ ಸರಿ ಹೊಂದುವುದಿಲ್ಲ ಎಂದು ಪ್ರಸನ್ನರಲ್ಲಿ ಹೇಳಿದಾಗ ಅವರು ನಮ್ಮಲ್ಲಿರುವ ಸುಂದರ್ ಎ೦ಬ ಯುವಕ ತುಂಬಾ ಪರಿಣಿತರಿದ್ದಾರೆ ಅವರನ್ನು ಪರಿಚಯಿಸುತ್ತೇನೆಂದು ಪರಿಚಯ ಮಾಡಿದ ಸುಂದರ್ ಹೆಸರಿಗೆ ತಕ್ಕ ಸುಂದರಾಂಗನೇ ಆಗಿದ್ದರು.
ಸದಾ ಹಸನ್ಮುಖಿ, ಮಿತ ಭಾಷಿ ಹಾಗೂ ಶ್ರಮಜೀವಿ ಆದ ಸುಂದರ್ ಪ್ರಸನ್ನ ಒಮ್ಮೆ ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ಕೆ.ವಿ.ಸುಬ್ಬಣ್ಣ ಚೆಕ್ ಕೇಸ್ ದಾಖಲಿಸಿದ್ದನ್ನು ವಿರೋದಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಾಗ ಸಂದಾನಕ್ಕೆ ಮತ್ತಿಕೊಪ್ಪದ ಹರನಾಥ ರಾಯರ ಜೊತೆ ಹೋದಾಗ ಪ್ರಸನ್ನರ ಜೊತೆ ಈ ಸುಂದರ್ ಇದ್ದರು.
ನಂತರ ಕೆಲ ವರ್ಷ ನನಗೆ ಬೇಕಾದ ಶರ್ಟ್ ಮತ್ತು ಜುಬ್ಬಾಕ್ಕೆ ನಾನು ಸುಂದರ್ ಅವರನ್ನು ಅವಲಂಬಿಸಿದ್ದೆ ಅದು 2013ರ ವರೆಗೆ ಹೆಗ್ಗೋಡಿನ ಮುಖ್ಯ ರಸ್ತೆಯ ಚರಕ ಮಳಿಗೆಯಲ್ಲೂ ಖರೀದಿಸುತ್ತಿದ್ದೆ.
2014ರಿಂದ ಚರಕ ಸಂಸ್ಥೆಯಿಂದ ಹೊರಬಂದ ಸುಂದರ್ ಶೈಲಿ ಹ್ಯಾಂಡ್ ಲೂಂ ರೆಡಿಮೇಡ್ ಕ್ಲಾತ್ ಎಂಬ ಸಂಸ್ಥೆ ಪ್ರಾರಂಬಿಸಿ ಹೆಗ್ಗೋಡಿನ ನಾಲ್ಕು ರಸ್ತೆ ವೃತ್ತದ ಅವರ ಸ್ವಂತ ಮನೆಯಲ್ಲಿ ಉಡುಪು ತಯಾರಿ ಮತ್ತು ಮಾರಾಟ ಪ್ರಾರಂಬಿಸಿದರು, ಸುಂದರ್ ಅವರ ಈ ಸಾಹಸಕ್ಕೆ ಬೆಂಗಾವಲಾಗಿ ನಿಂತ ಇವರ ಪತ್ನಿ ವಿಜಯಲಕ್ಷ್ಮಿ ಈ ಉದ್ಯಮದ ಯಶಸ್ವಿನ ವಿಜಯಕ್ಕೆ ಪತಿಯ ಜೊತೆ ಹೆಗಲಿಗೆ ಹೆಗಲು ನೀಡಿದರು.
ಇವತ್ತು ಶೈಲಿ ಸಂಸ್ಥೆ ರಾಜ್ಯದ ಪ್ರಖ್ಯಾತ ಕೈಮಗ್ಗದ ಸಿದ್ಧ ಉಡುಪು ಬ್ರಾಂಡ್ ಆಗಿದೆ, ಜಿಲ್ಲೆಗೆ ಬರುವ ಪ್ರವಾಸಿಗಳು ಇಲ್ಲಿಗೆ ಹುಡುಕಿ ಕೊಂಡು ಬರುತ್ತಾರೆ ಇವರ ಖಾಯಂ ಆದ ಗ್ರಾಹಕರು ಸಾವಿರಾರು ಜನ ಇದ್ದಾರೆ.
ರಾಜ್ಯದ ರಾಜಧಾನಿ ಬೆಂಗಳೂರು ಸೇರಿ ಅನೇಕ ಜಿಲ್ಲಾ ಕೇಂದ್ರದಲ್ಲಿ ಶೈಲಿ ಸಿದ್ದ ಉಡುಪು ಮಾರಾಟದ ಕೇಂದ್ರಗಳಿದೆ.
ಶಿವಮೊಗ್ಗದಿಂದ ಬರುವಾಗ ನಮ್ಮ ಮಲ್ಲಿಕಾ ವೆಜ್ ನಲ್ಲಿ ಉಪಹಾರ ಸೇವಿಸಿ ನಂತರ ನಮ್ಮ ಚಂಪಕಾ ಪ್ಯಾರಾಡೈಸಿನಲ್ಲಿ ಮಡಕಾ ದಮ್ ಬಿರಿಯಾನಿಗೆ ಆರ್ಡರ್ ಮಾಡಿ ನನ್ನ ಆಫೀಸಿಗೆ ಬಂದಿದ್ದರು.
ನನ್ನ ಸಹೋದರ ಮತ್ತು ನಮ್ಮ ಸಂಸ್ಥೆಯ ವ್ಯವಸ್ಥಾಪಕರು ಹೆಗ್ಗೋಡಿನ ಸುಂದರ್ ದಂಪತಿಗಳ ಶೈಲಿ ಸಂಸ್ಥೆಯ ಖಾಯ೦ ಗ್ರಾಹಕರು, ನಮ್ಮ ಕುಟು೦ಬದ ಅನೇಕರು ಇವರಲ್ಲಿ ಖರೀದಿಗೆ ಹೋಗುತ್ತಾರೆ, ನಮ್ಮ ಲಾಡ್ಜ್ ಗೆ ಬರುವ ಪ್ರವಾಸಿಗಳಿಗೂ ಇವರಲ್ಲಿ ದೊರೆಯುವ ಉಡುಪಿನ ಮಾಹಿತಿ ನೀಡುವುದರಿಂದ ಅವರೂ ಅಲ್ಲಿಗೆ ಹೋಗುತ್ತಾರೆ, ನವ ನವೀನವಾದ ಹೊಸ ಹೊಸ ವಿನ್ಯಾಸದ ಮಹಿಳೆಯರ ಮತ್ತು ಪುರುಷರ ಹಾಗೂ ಮಕ್ಕಳ ಸಿದ್ದ ಉಡುಪು ಗ್ರಾಹಕರನ್ನು ಆಕರ್ಷಿಸುತ್ತದೆ ಇದು ಶೈಲಿ ಸಂಸ್ಥೆಯ ಯಶಸ್ಸಿನ ಗುಟ್ಟು.
ನನ್ನ ಡೊಳ್ಳು ಹೊಟ್ಟೆಯ ಪಿಟಿಂಗ್ ಸರಿ ಹೊಂದುವ ಶರ್ಟ್ ಸಿಗದ ಬಗ್ಗೆ ಸುಂದರ್ ನನಗಾಗಿ ಅವರ ಸಂಸ್ಥೆಯ ಪರಿಣಿತರಿಂದ ತಯಾರಿಸಿ ಕೊಡುವ ಭರವಸೆ ನೀಡಿದ್ದಾರೆ.
ಸ್ಥಳಿಯ ನೂರಾರು ಜನರಿಗೆ ಇವರ ಸಂಸ್ಥೆ ಉದ್ಯೋಗ ನೀಡಿದೆ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಉಡುಪು ತಯಾರಿಕಾ ಘಟಕ ಸ್ಥಾಪನೆಯ ಕನಸು ಈ ದಂಪತಿಗಳದ್ದು ಅವರ ಕನಸು ನನಸಾಗಲಿ ಎಂದು ಹಾರೈಸಿ ನಾನು ಬರೆದ ಪುಸ್ತಕಗಳನ್ನು ನೀಡಿ ಶುಭ ಹಾರೈಸಿದೆ.
ಹೆಗ್ಗೋಡು ಎ೦ಬ ಈ ಸಣ್ಣ ಊರಿನ ಶೈಲಿ ಸಂಸ್ಥೆ ಹತ್ತು ವರ್ಷಗಳಲ್ಲಿ ಮಾಡಿದ ಸಾಧನೆ ಸ್ವಯಂ ಉದ್ಯೋಗ ಮಾಡುವವರಿಗೆ ಒಂದು ರೋಲ್ ಮಾಡೆಲ್ ಆಗಿದೆ.
ಹೆಗ್ಗೋಡಿನ ಶೈಲಿ ಹ್ಯಾಂಡ್ ಲೂಂ ರೆಡಿಮೇಡ್ ಕ್ಲಾತ್ ಸಂಸ್ಥೆ ಸಂಪರ್ಕಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ
https://g.co/kgs/HqqATc.
ಶೈಲಿ ಸಂಸ್ಥೆ ಮಾಲಿಕರಾದ ಸುಂದರ್ ಸಂಪರ್ಕ ಸಂಖ್ಯೆ +91 99002 57649.
Comments
Post a Comment