https://youtu.be/rqEuOX2cGzA
#ನಮ್ಮ_ಶಂಭೂರಾಮ_ತಿನ್ನುವಾಗ_ಎಷ್ಟು_ನಿಯಂತ್ರಣದಲ್ಲಿದ್ದಾನೆ_ನೋಡಿ
#ಆಹಾರ_ಸೇವನೆಯಲ್ಲಿ_ಗಡಿಬಿಡಿ_ಅವಸರ_ಹಪಾಹಪಿ_ಸರಿಯಲ್ಲ
#ಸಣ್ಣ_ಮರಿ_ಇದ್ದಾಗಲೇ_ಕಲಿಸ_ಬೇಕು.
ತನ್ನ ತಟ್ಟೆ ಯಾರೂ ಮುಟ್ಟ ಬಾರದು, ಕ್ಷಣಾರ್ದದಲ್ಲಿ ಪೂರ್ತಿ ನುಂಗುವುದು, ಊಟದ ಸಮಯದಲ್ಲಿ ವ್ಯಗ್ರತೆ ಅವುಗಳ ಅಬ್ಯಾಸವಾದರೆ ಅವುಗಳ ಜೀವಿತಾವದಿ ಪೂರ್ತಿ ಈ ಕೆಟ್ಟ ಅಭ್ಯಾಸಗಳು ತಿದ್ದಲು ಸಾಧ್ಯವಿಲ್ಲ.
ಆದರೆ ಎಲ್ಲಾ ಸಾಕು ಪ್ರಾಣಿಗಳಲ್ಲಿ ಅವುಗಳಿಗೆ ಹುಟ್ಟಿದ 3 ತಿಂಗಳ ಒಳಗೆ ಸ್ಲೋ ಫೀಡಿಂಗ್ ಸುಲಭದಲ್ಲಿ ಕಲಿಸುವಂತ ಸ್ಲೋ ಫೀಡಿಂಗ್ ಊಟದ ತಟ್ಟೆಗಳು ಪೆಟ್ ಶಾಪ್ ಗಳಲ್ಲಿ ಲಭ್ಯವಿದೆ.
ಜೊತೆಗೆ ಅನುಮತಿ ಇಲ್ಲದೆ ತಿನ್ನುವಂತೆ ಇಲ್ಲ ಎಂಬ ಸಂದೇಶದ ಸುಲಭ ತರಬೇತಿ ನೀಡ ಬೇಕು ಈಗ ಸಾಕು ನಾಯಿಗೆ ತರಬೇತಿ ನೀಡುವ ನೂರಾರು Youtube ಕ್ಲಿಪ್ಪಿಂಗ್ ಗಳನ್ನು ಸರ್ಚ್ ಮಾಡಿ ನೋಡ ಬಹುದು.
https://www.jiomart.com/p/groceries/petvogue-dog-slow-feeding-and-iq-training-tog-toy/592276236
ಪ್ರತಿ ದಿನ ಬೆಳಿಗ್ಗೆ ವಾಕಿಂಗ್ ನಲ್ಲಿ ನಮ್ಮ ಶಂಭೂರಾಮನಿಗೆ ಸೌತೆ ಕಾಯಿ ಲಂಚ ನೀಡುತ್ತೇನೆ, ಸೌತೆಕಾಯಿ ಅಂದರೆ ಅವನಿಗೆ ಬಲು ಇಷ್ಟ ಆದರೆ ಅವನ ಎದುರು ಇಡುವ ಸೌತೆಕಾಯಿ ತಟ್ಟೆ ಅವನಿಗೆ ಅನುಮತಿ ನೀಡುವ ತನಕ ತನ್ನದಲ್ಲ ಎಂದೇ ಬಾವಿಸಿಕೊಂಡು ಕಾಯುತ್ತಾನೆ.
ಸಾಕುಪ್ರಾಣಿ ಮಾತ್ರ ಅಲ್ಲ ಮನುಷ್ಯನೂ ನಿಧಾನವಾಗಿ ಆಹಾರ ಸೇವಿಸಿದರೆ ಅದು ಆರೋಗ್ಯಕ್ಕೆ ಒಳ್ಳೆಯದು.
ಸಾಕು ನಾಯಿಗಳು ಇದನ್ನು ಕಲಿತರೆ ಅಪರಿಚಿತರು ನೀಡುವ ಯಾವುದೇ ಆಹಾರ ಸೇವಿಸುವುದಿಲ್ಲ ಅವರೊಡನೆ ಗೆಳೆತನ ಮಾಡುವುದಿಲ್ಲ ಕೇವಲ ತನ್ನ ಸಾಕುವ ಕುಟುಂಬದವರ ಜೊತೆ ಮಾತ್ರ ಆಹಾರ ಸಂಬಂದ ಇಟ್ಟು ಕೊಳ್ಳುತ್ತವೆ.
Comments
Post a Comment