Blog number 1025. ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆ ಕರ್ನಾಟಕದಲ್ಲಿ ಮುಕ್ತಾಯವಾಯಿತು ಅದರ ಪರಿಣಾಮ ಮತ್ತು ವಿಶ್ಲೇಷಣೆ
ರಾಹುಲ್_ಗಾಂಧಿ_ಪಾದಯಾತ್ರೆ #ವ್ಯವಸ್ಥಿತವಾಗಿ_ಆಯೋಜಿಸಿದ್ದಾರೆ #ಇದರ_ಹಿಂದೆ_ಪ್ರಶಾಂತ್_ಕಿಶೋರ್_ಇರಬಹುದು. #ಕಾಂಗ್ರೇಸ್_ಪಕ್ಷದ_ಕಾಯ೯ಕರ್ತರಲ್ಲಿ_ಸಂಚಲನೆ_ಉಂಟುಮಾಡಿದೆ #ಆಟಗಾರರ_ಮನಸ್ಥಿತಿಯಲ್ಲಿ_ಟೀಕಿಸದೆ_ವೈಯಕ್ತಿಕವಾಗಿ_ಅವಹೇಳನಕಾರಿ_ಟೀಕೆ_ಸರಿಯಾ? ಪಾದಯಾತ್ರೆ ಮಾಡದಿದ್ದವರಿಗೆ ಪಾದಯಾತ್ರೆಯ ಆನಂದದ ಅನುಭವ ಸಿಗುವುದಿಲ್ಲ. ಟ್ರೆಕಿಂಗ್ - ದೇವಾಲಯಗಳಿಗೆ ನಡೆದು ಹೋಗುವಾಗ ಸಿಗುವ ಅನುಭೂತಿಯೇ ಬೇರೆ. ಹಾಗಂತ ಬಸ್ಸು ತಪ್ಪಿಸಿಕೊಂಡೋ, ಕಾಸಿಲ್ಲದೆ ನಡೆದು ಮನೆ ಮುಟ್ಟುವ ಕಷ್ಟ ಬೇರೆ. ಏಸು ಕ್ರಿಸ್ತರ ಯಾತ್ರೆ, ಶಂಕರಾಚಾಯ೯ರ ಪಾದಯಾತ್ರೆ, ಗಾಂದೀಜಿ ದಂಡಿ ಯಾತ್ರೆ, ವಿನೋಬಾಜಿ ಭೂದಾನ ಚಳವಳಿಯ ಯಾತ್ರೆ, ಭಾರತ ಯಾತ್ರೆ,ಎನ್.ಟಿ.ಆರ್.ಪಾದಯಾತ್ರೆ, ರಾಜಶೇಖರ ರೆಡ್ಡಿ ಪಾದಯಾತ್ರೆ, ಜಗನ್ ರೆಡ್ಡಿ ಪಾದಯಾತ್ರೆ ...... ಹೀಗೆ ಈ ಎಲ್ಲಾ ಪಾದಯಾತ್ರೆಗಳ ಜೊತೆ ರಾಹುಲ್ ಗಾಂಧಿ ಅವರ ಪಾದಯಾತ್ರೆ ಕೂಡ ಸೇರಿದೆ. ಸೆಪ್ಟೆಂಬರ್ 2022 ರಿಂದ 10 ಜನವರಿ 2023ಕ್ಕೆ ಕನ್ಯಾಕುಮಾರಿಯಿಂದ ಪಂಜಾಬ್ ತನಕ ಪಾದಯಾತ್ರೆಯ ಕಾರ್ಯಕ್ರಮ ನಿಗದಿ ಆಗಿ ಪ್ರಕಟವಾಗಿದೆ, ಜನವರಿ 10 ರ ನಂತರ ಕಾಶ್ಮೀರದ ತನಕದ ಕಾಯ೯ಕ್ರಮ ಇನ್ನೂ ಅಂತಿಮವಾಗಿಲ್ಲ. ...