Skip to main content

Posts

Showing posts with the label Shimoga Talaguppa Broadgauge and Tumari Bridge two major important works done by Yadurappa

Blog number 1229. ಶಿವಮೊಗ್ಗ ಜಿಲ್ಲೆಗೆ ಯಡೂರಪ್ಪನವರ ಎರೆಡು ಮಹತ್ವದ ಕೊಡುಗೆ, ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಮತ್ತು ತುಮರಿ ಸೇತುವೆ.

# ಶಿವಮೊಗ್ಗ ಜಿಲ್ಲೆಯ ಇತಿಹಾಸದಲ್ಲಿ ಯಡೂರಪ್ಪರ ಈ ಎರೆಡು ಮಹಾನ್ ಕಾಯ೯ಕ್ಕೆ ಜಿಲ್ಲೆಯ ಜನರ ಪರ ಅಭಿನಂದನೆಗಳು#     ಒಂದು ಹಂತದಲ್ಲಿ ಶಿವಮೊಗ್ಗದಿಂದ ತಾಳಗುಪ್ಪದ ಮೀಟರ್ ಗೇಜ್ ರೈಲು ಮಾಗ೯ ಬ್ರಾಡ್ ಗೇಜ್ ಪರಿವತ೯ನೆಗಾಗಿ ರೈಲು ಸಂಚಾರ ನಿಲ್ಲಿಸಿದ್ದು ನಂತರ ಈ ಮಾಗ೯ ಲಾಭದಾಯಕವಲ್ಲ ಎಂದು ಕೇಂದ್ರ ಸಕಾ೯ರ ಅನುದಾನ ನೀಡದೆ ಮುಂದೆ ಈ ರೈಲು ಮಾಗ೯ ರದ್ದಾಗುವ ಮಟ್ಟ ತಲುಪಿತ್ತು ಆಗ ಮುಖ್ಯಮಂತ್ರಿ ಆಗಿದ್ದ ಯಡೂರಪ್ಪನವರು ರಾಜ್ಯ ಸಕಾ೯ರದಿಂದ ಅನುದಾನ ನೀಡಿ, ರೈಲ್ವೆ ಇಲಾಖೆಯ ಹಣ ಪಡೆದು ಶಿವಮೊಗ್ಗದಿಂದ ತಾಳಗುಪ್ಪಕ್ಕೆ ಬ್ರಾಡ್ ಗೇಜ್ ನಿಮಾ೯ಣಕ್ಕೆ ಕಾರಣಕತ೯ರಾಗಿ ಈ ರೈಲ್ ಮಾಗ್೯ದ ಉಳಿವಿಗೆ ಜಿಲ್ಲೆಯ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದರು.    ತುಮರಿ ಸೇತುವೆಗಾಗಿ ಜನರ ಬೇಡಿಕೆ ಕೆಲವು ದಶಕದ್ದು, ಶರಾವತಿ ನದಿಗೆ ವಿದ್ಯುತ್ ಉತ್ಪಾದನೆಗಾಗಿ ಹಿರೇಬಾಸ್ಕರ ಎಂಬಲ್ಲಿ ಮೊದಲ ಆಣೆಕಟ್ಟು ಕಟ್ಟಿದಾಗಿನಿಂದ ಶುರುವಾಗಿ ನಂತರ ಲಿಂಗನಮಕ್ಕಿಯಲ್ಲಿ ದೊಡ್ಡ ಆಣೆಕಟ್ಟು ನಿಮಾ೯ಣವಾದರು ನದಿಯ ಆ ಬಾಗದ ಜನತೆಗೆ ಸಂಚಾರಕ್ಕೆ ಪೆರಿ ಒಂದನ್ನ ಒದಗಿಸಲಾಗಿತ್ತು, ಕಾಲ ಕ್ರಮೇಣ ಜನಸಂಖ್ಯೆ ಹೆಚ್ಚು ಆಯಿತು.ಈ ಬಾಗದ ಸಿಗಂದೂರು ದೇವಾಲಯ ಪ್ರಖ್ಯಾತಿಗೊಂಡಂತೆ ವಿಪರೀತ ಪ್ರವಾಸಿಗರ ಸಂಖ್ಯೆಯಿ೦ದ ಸ್ಥಳಿಯರಿಗೆ ಸಂಚಾರ ಕಷ್ಟಸಾಧ್ಯವಾಯಿತು.   ಜೆ.ಹೆಚ್.ಪಟೇಲರು ಮುಖ್ಯಮಂತ್ರಿ ಆದಾಗ ಹೆಚ್ಚುವರಿ ಪೆರಿ ನೀಡಿದರು, ನಂತರ ಕುಮಾರಸ್ವಾಮಿ ಮುಖ...