Blog number 1229. ಶಿವಮೊಗ್ಗ ಜಿಲ್ಲೆಗೆ ಯಡೂರಪ್ಪನವರ ಎರೆಡು ಮಹತ್ವದ ಕೊಡುಗೆ, ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಮತ್ತು ತುಮರಿ ಸೇತುವೆ.
ಒಂದು ಹಂತದಲ್ಲಿ ಶಿವಮೊಗ್ಗದಿಂದ ತಾಳಗುಪ್ಪದ ಮೀಟರ್ ಗೇಜ್ ರೈಲು ಮಾಗ೯ ಬ್ರಾಡ್ ಗೇಜ್ ಪರಿವತ೯ನೆಗಾಗಿ ರೈಲು ಸಂಚಾರ ನಿಲ್ಲಿಸಿದ್ದು ನಂತರ ಈ ಮಾಗ೯ ಲಾಭದಾಯಕವಲ್ಲ ಎಂದು ಕೇಂದ್ರ ಸಕಾ೯ರ ಅನುದಾನ ನೀಡದೆ ಮುಂದೆ ಈ ರೈಲು ಮಾಗ೯ ರದ್ದಾಗುವ ಮಟ್ಟ ತಲುಪಿತ್ತು ಆಗ ಮುಖ್ಯಮಂತ್ರಿ ಆಗಿದ್ದ ಯಡೂರಪ್ಪನವರು ರಾಜ್ಯ ಸಕಾ೯ರದಿಂದ ಅನುದಾನ ನೀಡಿ, ರೈಲ್ವೆ ಇಲಾಖೆಯ ಹಣ ಪಡೆದು ಶಿವಮೊಗ್ಗದಿಂದ ತಾಳಗುಪ್ಪಕ್ಕೆ ಬ್ರಾಡ್ ಗೇಜ್ ನಿಮಾ೯ಣಕ್ಕೆ ಕಾರಣಕತ೯ರಾಗಿ ಈ ರೈಲ್ ಮಾಗ್೯ದ ಉಳಿವಿಗೆ ಜಿಲ್ಲೆಯ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದರು.
ತುಮರಿ ಸೇತುವೆಗಾಗಿ ಜನರ ಬೇಡಿಕೆ ಕೆಲವು ದಶಕದ್ದು, ಶರಾವತಿ ನದಿಗೆ ವಿದ್ಯುತ್ ಉತ್ಪಾದನೆಗಾಗಿ ಹಿರೇಬಾಸ್ಕರ ಎಂಬಲ್ಲಿ ಮೊದಲ ಆಣೆಕಟ್ಟು ಕಟ್ಟಿದಾಗಿನಿಂದ ಶುರುವಾಗಿ ನಂತರ ಲಿಂಗನಮಕ್ಕಿಯಲ್ಲಿ ದೊಡ್ಡ ಆಣೆಕಟ್ಟು ನಿಮಾ೯ಣವಾದರು ನದಿಯ ಆ ಬಾಗದ ಜನತೆಗೆ ಸಂಚಾರಕ್ಕೆ ಪೆರಿ ಒಂದನ್ನ ಒದಗಿಸಲಾಗಿತ್ತು, ಕಾಲ ಕ್ರಮೇಣ ಜನಸಂಖ್ಯೆ ಹೆಚ್ಚು ಆಯಿತು.ಈ ಬಾಗದ ಸಿಗಂದೂರು ದೇವಾಲಯ ಪ್ರಖ್ಯಾತಿಗೊಂಡಂತೆ ವಿಪರೀತ ಪ್ರವಾಸಿಗರ ಸಂಖ್ಯೆಯಿ೦ದ ಸ್ಥಳಿಯರಿಗೆ ಸಂಚಾರ ಕಷ್ಟಸಾಧ್ಯವಾಯಿತು.
ಜೆ.ಹೆಚ್.ಪಟೇಲರು ಮುಖ್ಯಮಂತ್ರಿ ಆದಾಗ ಹೆಚ್ಚುವರಿ ಪೆರಿ ನೀಡಿದರು, ನಂತರ ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗ ಇನ್ನೊಂದು ಮಂಜೂರಾಗಿತ್ತು.
ಆದರೆ ಇದಾವುದು ಖಾಯO ಪರಿಹಾರ ಆಗಲಿಲ್ಲ ಈ ಮಧ್ಯೆ ಮುಖ್ಯಮಂತ್ರಿ ಆಗಿದ್ದ ಯಡೂರಪ್ಪನವರು ಸಾಗರದಲ್ಲಿ ಚುನಾವಣ ಪೂವ೯ದಲ್ಲಿ ತುಮರಿ ಸೇತುವೆಗೆ ಶುOಕು ಸ್ಥಾಪನೆ ಕಲ್ಲು ಹಾಕಿದರಾದರೂ ಇದು ಕಾಯ೯ಗತ ಆಗಲಿಲ್ಲ.
ನಂತರ ಬಂದ ಸಕಾ೯ರದಲ್ಲಿ ಮಂಜೂರಾಯಿತು ಎಂದರೂ ಮರೀಚಿಗೆ ಆಯಿತು ಈಗ ಸಂಸದರಾದ ಯಡೂರಪ್ಪರ ಪ್ರಯತ್ನದಿ೦ದ ಕೇಂದ್ರ ಸಕಾ೯ರ 600 ಕೋಟಿ ಮಂಜೂರು ಮಾಡಿ ಕೇಂದ್ರ ಸಚಿವರಾದ ಗಡ್ಕರಿ ಇದೇ ಫೆಬ್ರುವರಿ 19ಕ್ಕೆ ಇನ್ನೊಂದು ಶಂಕು ಸ್ಥಾಪನೆ ಮಾಡುತ್ತಿದ್ದಾರೆ, ಎಲ್ಲರ ಇಚ್ಚಾ ಶಕ್ತಿಯಿ೦ದ ತಕ್ಷಣ ಟೆಂಡರು ಕರೆದು ಅತಿ ಶೀಘ್ರವಾಗಿ ಸೇತುವೆ ನಿಮಾ೯ಣವಾಗಬೇಕು ಈ ರೀತಿ ಜಿಲ್ಲೆಗೆ ಈ ಎರೆಡು ಪ್ರಮುಖವಾದ ಯಾರಿಂದಲೂ ಸಾಧ್ಯವಾಗದ ಕೆಲಸ ಯಡೂರಪ್ಪ ಮಾಡಿ ತೋರಿಸಿದ್ದಾರೆ ಪಕ್ಷಾತೀತವಾಗಿ ಈ ಮಹಾನ್ ಕಾಯ೯ಕ್ಕಾಗಿ ಜಿಲ್ಲೆಯ ಜನತೆ ಅವರನ್ನ ಅಭಿನಂದಿಸುತ್ತದೆ.
ತುಮರಿ ಸೇತುವೆಗಾಗಿ ಅನೇಕರು ಅನೇಕ ರೀತಿಯಲ್ಲಿ ಪ್ರಯತ್ನಿಸಿದ್ದಾರೆ ಅವರೆಲ್ಲರಿಗೂ ಕೃತಜ್ಞತೆಗಳ ಜೊತೆ ಬೇಡಿಕೆ ಈಡೇರಿದ ಸಂಭ್ರಮದ ಸಿಹಿ ನೀಡಿದ್ದಾರೆ ಯಡೂರಪ್ಪ.
2003ರಲ್ಲಿ ನಾನು ಸಾಗರ ತಾಲ್ಲೂಕಿನಾದ್ಯಂತ 11 ದಿನ ನಡೆಸಿದ ಪಾದಯಾತ್ರೆಯಲ್ಲಿ ತುಮರಿ ಸೇತುವೆ ಮುಖ್ಯ ಬೇಡಿಕೆ ಆಗಿತ್ತು, 200O ನೇ ಇಸವಿಯಲ್ಲಿ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪರ ನೇತೃತ್ವದ ದೆಹಲಿ ಚಲೋದ ಮುಖ್ಯ ಬೇಡಿಕೆ ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್, ತುಮರಿ ಸೇತುವೆ , ಹಂದಿಗೋಡು ಕಾಯಿಲೆ ಪೀಡಿತರ ಸಮಸ್ಯೆ ಪರಿಹಾರ ಮತ್ತು ಸಾಗರ ರೈಲು ನಿಲ್ದಾಣಕ್ಕೆ ರಾಮಮನೋಹರ ಲೋಹಿಯಾರ ಹೆಸರ ನಾಮಕರಣ.
ಈ ನಿಯೋಗದಲ್ಲಿ ಆಗ ರಾಜ್ಯಸಭಾ ಸದಸ್ಯರಾದ ಹಾಸನದ ಜವರೇಗೌಡರು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಜಿ.ಮಾದಪ್ಪ, ಸಾಹಿತಿ ಕೋಣಂದೂರು ವೆಂಕಪ್ಪ ಗೌಡರು, ಕಲ್ಲೂರು ಮೇಘರಾಜ್, ಕಬಸೆ ಅಶೋಕ ಮೂತಿ೯ ಮುಂತಾದವರಿದ್ದರು.
Comments
Post a Comment