Blog number 1221. ನಮ್ಮೂರ ಜಾತ್ರೆಯಲ್ಲಿ ಹೋಳಿಗೆ ತುಪ್ಪದ ಅನ್ನ ಸಂತರ್ಪಣೆಯ ಅಡುಗೆ ನಿರ್ವಹಿಸುವ ಅಡುಗೆ ತಂಡದ ನಾಯಕ ನಿಧಿಗೆ ಮಂಜಣ್ಣ.
#ಈ_ವರ್ಷದ_ವರಸಿದ್ದಿವಿನಾಯಕ_ದೇವರ_ಜಾತ್ರೆಗೆ_4500_ಹೋಳಿಗೆ.
#ಪ್ರತಿವರ್ಷದ_ಜಾತ್ರಾ_ಅಡುಗೆ_ನಿದಿಗೆ_ಮಂಜಣ್ಣ
#ಎಷ್ಟು_ಸಾವಿರ_ಜನ_ಆದರೂ_ಬೇಸರಿಸದೆ_ಅಡುಗೆ_ಮಾಡುವ_ಸಜ್ಜನರು.
#ಶುಚಿ_ರುಚಿಯ_ಅಡುಗೆ.
https://youtu.be/TR8EYLHl5x4
ನಮ್ಮ ಊರಿನ ಶ್ರೀ ವರಸಿದ್ಧಿ ವಿನಾಯಕ ದೇವರ ಪ್ರತಿ ವರ್ಷದ ರಥೋತ್ಸವದ ಅಡುಗೆ ಶಿವಮೊಗ್ಗದ ನಿದಿಗೆ ಮಂಜಣ್ಣ ಮತ್ತು ತಂಡದವರದ್ದು.
ನಿದಿಗೆ ಮಂಜಣ್ಣರ ಅಡುಗೆ ಯಾವತ್ತೂ ಪೇಲ್ ಆಗಿಲ್ಲ, ಕೆಲವು ನೂರರಿಂದ ಕೆಲವು ಸಾವಿರ ಜನರ ಮದುವೆ ಜಾತ್ರೆಗಳಲ್ಲೂ ಅದೇ ರುಚಿ - ಶುಚಿ.
ಟೇಸ್ಟಿಂಗ್ ಪೌಡರ್, ಕೃತಕ ಬಣ್ಣ, ನೀರುಳ್ಳಿ - ಬೆಳ್ಳುಳ್ಳಿ ಇಲ್ಲದೆ ರಥೋತ್ಸವದ ಅನ್ನ ಸಂತರ್ಪಣೆ ಅಡುಗೆ ಮಾಡಬೇಕು.
ಮದ್ಯಾಹ್ನ 12 ಗಂಟೆಗೆ ದೇವರ ರಥೋತ್ಸವದ ಸಮಯದಲ್ಲಿ ಕೆಲವೇ ನೂರು ಜನರಿರುತ್ತಾರೆ ಮದ್ಯಾಹ್ನ 2ಕ್ಕೆ ಅದು ಮೂರು ಸಾವಿರಕ್ಕೂ ಮಿಕ್ಕುತ್ತದೆ ಅಷ್ಟು ಜನರ ನಿರೀಕ್ಷೆ ಇರಲಿ ಇಲ್ಲದಿರಲಿ ಬಂದವರೆಲ್ಲರಿಗೂ ಸಂತೃಪ್ತ ಬೋಜನ ಮಾಡಿಸುವ ಕೆಲಸ ಅಷ್ಟು ಸುಲಭವಲ್ಲ.
ಪ್ರತಿವರ್ಷ ನಮ್ಮ ಜಾತ್ರೆಯಲ್ಲಿ ಅನ್ನ ಸಂತರ್ಪಣೆಯಲ್ಲಿ ಹೋಳಿಗೆ ತುಪ್ಪ ಬಡಿಸುವುದು ನಮ್ಮ ಪದ್ಧತಿ ಅದರಂತೆ ಈ ವರ್ಷ ಸುಮಾರು 4500 ಹೋಳಿಗೆ ತಯಾರಿಸಿ ಭಕ್ತರಿಗೆ ಬಡಿಸುವ ಜವಾಬ್ದಾರಿ ಅಡುಗೆ ತಂಡದ ಮುಖ್ಯಸ್ಥ ನಿಧಿಗೆ ಮಂಜಣ್ಣನವರದ್ದು ಅದನ್ನು ಯಶಸ್ವಿಯಾಗಿ ನಿರ್ವಹಿಸಿ ಜಾತ್ರಾ ಸಮಿತಿಯಿಂದ ದೇವಾಲಯದಲ್ಲಿ ಸನ್ಮಾನ ಸ್ವೀಕರಿಸಿದರು.
ನಮ್ಮ ಕಲ್ಯಾಣ ಮಂಟಪದಲ್ಲಿ ಅನೇಕ ಮದುವೆಗಳು ನಿಧಿಗೆ ಮಂಜಣ್ಣರಿಗೆ ಸಿಗುತ್ತದೆ, ನನ್ನ ಮಗಳ ಮದುವೆ ಅಡುಗೆ ಕೂಡ ನಿಧಿಗೆ ಮಂಜಣ್ಣರದ್ದೆ ಆಗಿತ್ತು.
ಅಡುಗೆ ಕಂಟ್ರಾಕ್ಟರ್ ನಿಧಿಗೆ ಮ೦ಜಣ್ಣರ ಸಂಪರ್ಕ ಸಂಖ್ಯೆ 99723 77295,ಕಡಿಮೆ ಬಜೆಟ್ ನಲ್ಲಿ ಅತ್ಯಂತ ರುಚಿಕಟ್ಟಾದ ಅಡುಗೆಗೆ ಇವರನ್ನು ಸಂಪರ್ಕಿಸಬಹುದು.
Comments
Post a Comment