Blog number 1251. ಸಾಗರದ ಖ್ಯಾತ ಉದ್ದಿಮೆದಾರರು ಮತ್ತು ಒಂದು ಕಾಲದ ಅಬಕಾರಿ ಗುತ್ತಿಗೆದಾರರೂ ಆಗಿದ್ದ ಡೇರ್ & ಡೆವಿಲ್ ಆಗಿದ್ದ ಆತ್ಮೀಯರಾದ ನಾರಾಯಣ ರಾವ್ ರನ್ನು ನಿನ್ನೆ ಬೇಟಿ ಆಗಿದ್ದೆ.
#ಅಪರೂಪದ_ಬೇಟಿಯಲ್ಲಿ_ಅನೇಕ_ನೆನಪುಗಳು.
#ಅಬಕಾರಿ_ಗುತ್ತಿಗೆದಾರರಾಗಿದ್ದವರು
#ಸಾಗರದ_ಇಕ್ಕೇರಿರಸ್ತೆಯಲ್ಲಿ_ತಾಳಗುಪ್ಪದಲ್ಲಿ_ಪೆಟ್ರೋಲ್_ಬಂಕ್_ಮಾಡಿದ್ದಾರೆ.
#ತಾಳಗುಪ್ಪದ_ಪೇಪರ್_ಮಿಲ್_ಜಾಗ_ಖರೀದಿಸಿದ್ದಾರೆ.
2019ರ ನವೆಂಬರ್ ತಿಂಗಳಲ್ಲಿ ನನ್ನ ಮಗಳ ಮದುವೆ ಆಹ್ವಾನ ನೀಡಲು ಸಾಗರದ ನಾರಾಯಣ ರಾವ್ ಬೇಟಿ ಮಾಡಿದ್ದೆ ಈಗ ನಾಲ್ಕು ವರ್ಷದ ನಂತರ ನಿನ್ನೆಯ ಅವರ ಬೇಟಿ ಆಯಿತು.
ಸರಾಯಿ ರದ್ದು ಆಗುವ ಮೊದಲು ಪ್ರತಿ ತಾಲ್ಲೂಕುಗಳಲ್ಲಿ ಸರಾಯಿ ಗುತ್ತಿಗೆ ಹರಾಜು ಹಿಡಿದು ಕಡಿಮೆ ದರದಲ್ಲಿ ಸರಾಯಿ ಸರಬರಾಜು ಮಾಡುವ ಸಾವಿರಾರು ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗ ನೀಡುತ್ತಿದ್ದ ಸರಾಯಿ ಉದ್ಯಮ ಈಗಿಲ್ಲ.
ಆಗ ಕಡಿಮೆ ದರದ ಸರಾಯಿ ಕಾಲದಲ್ಲಿ ಬಡವರು ಕೂಲಿ ಕಾರ್ಮಿಕರಿಗಿದ್ದ ಆರೋಗ್ಯ ಈಗಿನ ಹೊಸ ಲಿಕ್ಕರ್ ವ್ಯವಸ್ಥೆಯಲ್ಲಿ ಇಲ್ಲ ಮತ್ತು ದುಬಾರಿ ಬೆಲೆ ಇದರಿಂದ ಕೂಲಿ ಕಾರ್ಮಿಕರ ಜೀವನ ವ್ಯವಸ್ಥೆ ಸಮತೋಲನವೂ ತಪ್ಪಿದೆ.
ದೊಡ್ಡ ಸಂಖ್ಯೆಯ ಸರಾಯಿ ಮಾರಾಟಗಾರರು ನಿರುದ್ಯೋಗಿಗಳಾದರು, ಸಕಾ೯ರ ಸರಾಯಿ ರದ್ದು ಮಾಡಲು ನೀಡಿದ ಕಾರಣ ಬಡವರಿಗೆ ಗುಣಮಟ್ಟದ ಮಧ್ಯ ಸರಬರಾಜು ಮಾಡುವ ಭರವಸೆ!!... ಅದು ಈಡೇರಿತಾ? ಬಡವರ ಕಿಡ್ನಿ ಸುರಕ್ಷಿತವಾಯಿತಾ?..... ಹೀಗೆ ಅನೇಕ ವಿಚಾರಗಳು ನಮ್ಮ ಮಾತಿನಲ್ಲಿ ಬಂದು ಹೋಯಿತು.
ಒಂದು ಕಾಲದ ತಾಳಗುಪ್ಪದ ಪ್ರಸಿದ್ದ ಪೇಪರ್ ಪ್ಯಾಕ್ಟರಿಯ 9 ಎಕರೆ ಪ್ರೈಮ್ ಪ್ರಾಪರ್ಟಿ ಜಾಗ ಈಗ ನಾರಾಯಣ ರಾವ್ ಅವರು ಖರೀದಿಸಿದ್ದಾರೆ ಅದರಲ್ಲಿ ಪೆಟ್ರೋಲ್ ಬಂಕ್ ಕೂಡ ಮಾಡಿದ್ದಾರೆ.
ಶಿವಮೊಗ್ಗದ ಮಲ್ಲಿಗೇನಹಳ್ಳಿಯ ಇವರ ಲೇಔಟ್ ತಾಗಿ ಬೈಪಾಸ್ ರಸ್ತೆ ಪ್ಲೇ ಒವರ್ ಕಾಮಗಾರಿ ನಡೆಯುತ್ತಿದೆ.
2001ರಲ್ಲಿ ಸಾಗರ ನಗರಸಭೆ ಆದಾಗ ಶಿವಪ್ಪ ನಾಯಕ ಬಡಾವಣೆಯಲ್ಲಿ ಕಾಂಗ್ರೇಸ್ ನಿಂದ ಪುತ್ತೂರಾಯರ ಎದರು ಯಾರೂ ಚುನಾವಣೆಗೆ ಸ್ಪರ್ಧಿಸಲು ದೈರ್ಯ ಮಾಡದ ಕಾಲದಲ್ಲಿ ನಾನು ಮತ್ತು ಬಿ.ಆರ್. ಜಯಂತ್ ರು ಸೇರಿ ಮಾಡಿದ್ದ ಜನತಾ ರಂಗ ಎಂಬ ಒಕ್ಕೂಟದಲ್ಲಿ ನಾವೆಲ್ಲ ಒತ್ತಾಯದಿಂದ ನಾರಾಯಣ ರಾವ್ ರನ್ನು ಚುನಾವಣೆಗೆ ನಿಲ್ಲಿಸಿದ್ದೆವು, ಆಗ ಈ ಚುನಾವಣೆ ಸಾಗರ ತಾಲ್ಲೂಕಿನಲ್ಲಿ ದೊಡ್ಡ ಸುದ್ದಿ ಆಗಿತ್ತು.
ನನ್ನ ವಿದ್ಯಾರ್ಥಿ ಜೀವನದಲ್ಲಿ ಅನೇಕ ರೀತಿಯ ಬೆಂಬಲ ನಾರಾಯಣ ರಾವ್ ನೀಡಿದ್ದಾರೆ, ಅನೇಕ ಪೋಲಿಸ್ ಕೇಸ್ ಗಳಿಂದ ನನಗೆ ರಕ್ಷಣೆ ಕೊಡಿಸಿದ್ದು ನಾರಾಯಣ ರಾವ್ ಅವರೆ,ಆಗೆಲ್ಲ ಅಬಕಾರಿ ಗುತ್ತಿಗೆದಾರರೆಂದರೆ ತಾಲ್ಲೂಕಿನಲ್ಲಿ ಡಿವೈಎಸ್ಪಿ ಅಷ್ಟೇ ಪ್ರಬಾವ ಇರುತ್ತಿತ್ತು.
ಆ ಕಾಲದಲ್ಲಿ ನಾರಾಯಣ ರಾವ್ ಒಂದು ರೀತಿ ಡೇರ್ & ಡೆವಿಲ್ ಆಗಿದ್ದರು, ಅವರ ಬಾರ್ ಮೀಸೆ, ಮಹಿಂದ್ರಾ ಜೀಪ್, ರಿವಾಲ್ವಾರ್ ತರಹೇವಾರಿ ರೈಪಲ್ ಗಳು ಅವರ ಅಬಕಾರಿ ಗುತ್ತಿಗೆದಾರರ ನೂರಾರು ಜನ ರೈಡರ್ ತಂಡ ಮತ್ತು ಅವರುಗಳ ತಿರುಗಾಟದ ಹತ್ತಾರು ಜೀಪುಗಳು, ಸರಾಯಿ ಮಾರಾಟದ ಲೈನ್ ಮ್ಯಾನೇಜರ್ ಗಳು ಅವರ ನಾಕಾರು ತಂಡದ ಜೀಪು ಮತ್ತು ಸಿಬ್ಬಂದಿ, ಒಂದು - ಎರೆಡು - ಐದು-ಹತ್ತು ರೂಪಾಯಿಗಳ ಬಂಡಲ್ ಮಾಡಿ ಅದನ್ನು ದಾರದಲ್ಲಿ ಹೊಲಿಯುವ ಅದನ್ನೆಲ್ಲ ಲೆಖ್ಖ ಮಾಡಿ ಬ್ಯಾಂಕಿಗೆ ಜಮೆ ಮಾಡುವ ತಂಡ, ನೂರಾರು ಜನ ಸಿಬ್ಬಂದಿ ಊಟ ವಸತಿ ವ್ಯವಸ್ಥೆ ಹೀಗೆ ಒಂದು ಕಾರ್ಖಾನೆಯಂತೆ ತಾಲ್ಲೂಕಿನ ಸರಾಯಿ ಉದ್ಯಮ ನಡೆಯುತ್ತಿತ್ತು.
ಒಮ್ಮೆ ನಾರಾಯಣ ರಾವ್ ನನಗೆ ಪೋನ್ ಮಾಡಿ "ನನಗೆ ತಕ್ಷಣ ಮಣಿಪಾಲಿಗೆ ಕರೆದುಕೊಂಡು ಅಲ್ಲಿನ ಚರಕಾ ವಾರ್ಡ್ ಗೆ ಸೇರಿಸಬೇಕು" ಅಂದಾಗಲೇ ಗೊತ್ತಾಗಿದ್ದು ಇವರಿಗೆ ತೀವ್ರವಾದ ಮೂತ್ರಕೋಶದ ಸೋಂಕಾಗಿತ್ತು, ನನ್ನ ಕಾರಿನಲ್ಲಿ ಕರೆದುಕೊಂಡು ಹೋಗುವಾಗ ಹಣ ತೆಗೆದು ಡಿಸೇಲ್ ಹಾಕಿಸಿ ಅಂತ ಕ್ಷೀಣ ಧ್ವನಿಯಲ್ಲಿ ಹೇಳಿದಾಗ ನಾನು "ಹಣ ಕೊಡುವುದಾದರೆ ನಿಮ್ಮನ್ನು ಬಾಡಿಗೆ ಕಾರಲ್ಲಿ ಕಳಿಸುತ್ತೇನೆ" ಅಂತ ಹುಸಿಕೋಪ ಮಾಡಿದ್ದೆ.
ಆಗು೦ಬೆ ಘಾಟಿ ಇಳಿದು ಹೆಬ್ರಿ ಗಣಪತಿ ದೇವಸ್ಥಾನದ ಎದುರು ಕಾರು ನಿಲ್ಲಿಸಿದಾಗ ಅವರು ಕಾರಲ್ಲಿ ಮಲಗಿಯೇ ದೇವರಿಗೆ ಕೈ ಮುಗಿದು ಪ್ರಾರ್ಥಿಸಿದ್ದು ಅವರ ತಾಯಿ ಅಂತ್ಯದವರೆಗೆ ಬದುಕಿಸಲು ... ಕಾರಣ ಅವರ ತಾಯಿ ಅಂತ್ಯ ಸಂಸ್ಕಾರದ ಅಂತಿಮ ವಿಧಿ ವಿಧಾನದ ಜವಾಬ್ದಾರಿ ನೆರವೇರಿಸುವವರೆಗೆ ಆಯಸ್ಸು ನೀಡು ಎಂದು,ಆ ಸಂದರ್ಭದಲ್ಲಿ ನಮ್ಮ ಕಣ್ಣುಗಳೂ ನೀರಾಯಿತು.
ನಾರಾಯಣ ರಾವ್ ಅವರು ಗುಣವಾಗಿ ಬರುತ್ತಾರೆ ಎಂಬ ನಂಬಿಕೆ ನನಗೂ ಇರಲಿಲ್ಲ, ದೇವರ ದಯೆಯಿಂದ ಮತ್ತು ಮಣಿಪಾಲಿನ ತಜ್ಞ ವೈದ್ಯರ ಚಿಕಿತ್ಸೆಯಿಂದ ಒಂದೇ ವಾರದಲ್ಲಿ ಗುಣವಾದ ನಾರಾಯಣ ರಾವ್ ರನ್ನು ನನ್ನ ಕಾರಿನಲ್ಲೇ ಸಾಗರದ ಅವರ ಮನೆಗೆ ತಲುಪಿಸಿದ್ದೆ ಈ ವಿಚಾರ ಕೂಡ ನಿನ್ನೆ ರಾತ್ರಿ ಅವರ ಸಾಗರದ ಪೆಟ್ರೋಲ್ ಬಂಕ್ ಆಫೀಸಿನಲ್ಲಿ ಮಾತಾಡಿದೆವು.
ಇವರ ಪುತ್ರಿ ಮಂಗಳೂರಿನಲ್ಲಿ ಎಂ.ಬಿ.ಬಿ.ಎಸ್. ಮುಗಿಸಿ ಈಗ ಪಾಂಡಿಚೆರಿಯಲ್ಲಿ ಡಮಾ೯ಟಾಲಜಿಯಲ್ಲಿ ಸ್ನಾತಕೋತರ ಪದವಿಯ ಅಂತಿಮ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
Comments
Post a Comment