Blog number 1246. ಪ್ರತಿ ಮಹಾಶಿವರಾತ್ರಿ ದಿನ ನಾನು ಮರೆಯಲಾರದ ಸದಾ ನೆನಪಿನ ದಿನವಾಗಿದೆ ಕಾರಣ 2019ರ ಶಿವರಾತ್ರಿಯಂದೇ ನಾನು ನನ್ನ ರಾತ್ರಿ ಊಟ ತ್ಯಜಿಸದ ದಿನ
#ಶಿವ_ಲಿ೦ಗರೂಪಿ_ಆದ_ದಿನ
#ನಾನು_ರಾತ್ರಿ_ಊಟ_ತ್ಯಜಿಸಿದ_ದಿನ.
#ಇವತ್ತಿನ_ಮಹಾಶಿವರಾತ್ರಿಗೆ_ಮೂರು_ವರ್ಷ
#ತಾಳಗುಪ್ಪ_ಸಮೀಪದ_ಬೆಳ್ಳೆಣ್ಣೆಯ_ಶಂಭೂಲಿಂಗೇಶ್ವರ_ಪುರಾಣ_ಪ್ರಸಿದ್ದ_ಪುಣ್ಯ_ಕ್ಷೇತ್ರ
ಸಾಮಾನ್ಯವಾಗಿ ಪ್ರತಿ ವರ್ಷ ಪೆಬ್ರುವರಿ ಅಥವ ಮಾರ್ಚ್ ತಿಂಗಳಲ್ಲಿ ಮಹಾ ಶಿವರಾತ್ರಿ ಬರುತ್ತದೆ,ಹಿಂದೂ ಪಂಚಾಂಗ ಮಾಘ ಮಾಸದ ಬಹುಳ ಚತುರ್ದಶಿಯಂದು ಈಶ್ವರ ಲಿಂಗರೂಪ ತಾಳಿದ್ದರಿಂದ ಮಹಾ ಶಿವರಾತ್ರಿ ಆಚರಿಸಲಾಗುತ್ತದೆ ಎಂಬ ಪ್ರತೀತಿ ಇದೆ.
2019 ರ ಶಿವರಾತ್ರಿಯ ದಿನವೇ ನಾನು ರಾತ್ರಿ ಊಟ ತ್ಯಜಿಸುವ ತೀರ್ಮಾನವನ್ನು ಆಚರಣೆಗೆ ತಂದಿದ್ದು.
ಇದರಿಂದ ನನಗೆ ಆದ ಆರೋಗ್ಯ ಸಂಬಂದಿ ಅನುಕೂಲಗಳು ನೂರಾರು, ತೂಕ ಇಳಿದಿದ್ದು - ಡಯಾಬಿಟೀಸ್ ನಿಯಂತ್ರಣ - ಬಿಪಿ ನಾರ್ಮಲ್ ಇತ್ಯಾದಿ ಜೊತೆಗೆ ನೆಮ್ಮದಿ.
ಇವತ್ತಿಗೆ ರಾತ್ರಿ ಊಟ ತ್ಯಜಿಸಿ ಮೂರು ವರ್ಷ ಆಯಿತು ಮತ್ತು ಇವತ್ತು ಮಹಾ ಶಿವರಾತ್ರಿ.
ಶಿವರಾತ್ರಿಯಂದು ಶಿವಭಕ್ತರು ಸಂದರ್ಶಿಸಬಹುದಾದ ಶ೦ಭೂಲಿಂಗೇಶ್ವರ ಉದ್ಭವ ಬೃಹತ್ ಶಿವಲಿಂಗ ಸಾಗರ ತಾಲ್ಲುಕಿನ ಬೆಳ್ಳೆಣ್ಣೆಯಲ್ಲಿದೆ.
ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಡ್ಯಾಂ ನಿಂದ ಮುಳುಗಡೆ ಆಗಿರುವ ಬೆಳ್ಳೆಣ್ಣೆ ತಾಳಗುಪ್ಪ ಪೋಲಿಸ್ ಠಾಣೆಯ ಪಕ್ಕದ ರಸ್ತೆಯಲ್ಲಿ 8 km ದೂರದಲ್ಲಿದೆ ಅಲ್ಲಿ ಪುರಾತನವಾದ ಬೇಡರು ಪ್ರತಿಷ್ಟಾಪಿಸಿ ಪೂಜಿಸುತ್ತಿದ್ದರೆಂಬ ಸ್ಥಳ ಪುರಾಣದ ಶಂಭೂಲಿಂಗೇಶ್ವರ ದೇವರ ಬೃಹತ್ ಉದ್ಭವ ಲಿಂಗವಿದೆ ಈ ದೇವಾಲಯದ ಹಿಂಬಾಗದ ಗುಹೆಯಲ್ಲಿಯೇ ಖೇಚರಿ ವಿದ್ಯಾ ಪಾರಂಗಿತ ಕಲಸೆ ಸ್ವಾಮಿಗಳು ಅನೇಕ ವರ್ಷ ಒಬ್ಬರೇ ತಪಸ್ಸು ಮಾಡಿದ ಪುಣ್ಯ ಭೂಮಿ ಇದು.
Comments
Post a Comment