Skip to main content

Blog number 1214.ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದ ಯುವಕರ ಹೊಸ ಉದ್ಯೋಗದಲ್ಲಿ.

#ಒಂದುಕಾಲದಲ್ಲಿ_ಹಕ್ಕಿ_ಪಿಕ್ಕಿಜನಾಂಗ_ಅಲೆಮಾರಿ_ಶಿಕಾರಿಗಳು_ಗಿಡಮೂಲಿಕ_ತಜ್ಞರು
#ಈಗ_ಬದಲಾದ_ಕಾಲಮಾನದಲ್ಲಿ_ಬದಲಾಗಿದ್ದಾರೆ_ವ್ಯಾಪಾರಿಗಳಾಗಿದ್ದಾರೆ

 ಇವತ್ತು ಬೆಳಿಗ್ಗೆ ಪ್ಲಾಸ್ಟಿಕ್ ಹೂವಿನ ಮಾಲೆ ಮಾರಾಟಕ್ಕೆ ಬಂದ ಶಿವಮೊಗ್ಗ ಚಿಕ್ಕಮಟ್ಟಿ ಹಳ್ಳಿಯ ಹಕ್ಕಿಪಿಕ್ಕಿ ಕ್ಯಾಂಪಿನ ಹಾಲಿ ಶಿವಮೊಗ್ಗದ ನಂಜಪ್ಪ ಹೆಲ್ತ್ ಕೇರ್ ಹಿಂಬಾಗದ ಅಂಬೇಡ್ಕರ್ ಕಾಲೋನಿ ವಾಸಿ ಬೋಣಿಗೆ ಮಾಡಲು ವಿನಂತಿಸಿದ, ಪ್ಲಾಸ್ಟಿಕ್ ನಲ್ಲಿ ಹೂವಿನ ಬಣ್ಣದಲ್ಲಿ ಹೂವು ಸುರಿದು ಮಾಡಿದಂತ ಈ ಮಾಲೆ ನಿಜಕ್ಕೂ ಆಕಷ೯ಕವಾಗಿದೆ ಅವನ ಇವತ್ತಿನ ವ್ಯಾಪಾರಕ್ಕೆ 300 ರೂಪಾಯಿ ಬೊಣಿಗೆ ಮಾಡಿ ಅವನ ಜೊತೆಯ ವಿಡಿಯೋ ಈ ಜನಾಂಗದ 50 ವರ್ಷ ಹಿಂದಿನ ಇವರ ಜನ ಜೀವನದ ಚಿತ್ರದ ಜೊತೆ ಹಾಕಿದ್ದೇನೆ.
   1960 ರ ದಶಕದಲ್ಲಿ ಸೀಮಿತ ಜನ ಸಂಖ್ಯೆಯ ನಮ್ಮ ಹಳ್ಳಿ ಕಾಡಿನ ಅಂಚಿನಲ್ಲಿ ಇದ್ದ ಹಾಗಿತ್ತು ಆಗ ಪ್ರತಿ ವರ್ಷ ಸುಗ್ಗಿ ನ೦ತರ ಹಕ್ಕಿಪಿಕ್ಕಿ ಜನರ ದೊಡ್ಡ ಕ್ಯಾಂಪ್ ನಮ್ಮ ಊರಿನ ಈಗಿನ ಮಸೀದಿ ಜಾಗದಲ್ಲಿ ಇದ್ದ ದೊಡ್ಡ ಅತ್ತಿ ಮರದ ಬುಡದಲ್ಲಿ ಹಾಕುತ್ತಿದ್ದರು ಆಗೆಲ್ಲ ಇವರು ಶಿಕಾರಿ ಮಾಡುತ್ತಿದ್ದದ್ದು ಅವರ ನಿತ್ಯ ಆಹಾರಕ್ಕೆ ಮಾತ್ರ ಯಾಕೆಂದರೆ ಆಗ ಕಾಡು ಕೋಳಿ ಖರೀದಿ ಮಾಡುವವರು ಹಳ್ಳಿಗಳಲ್ಲಿ ಇರಲಿಲ್ಲ.
    ಇವರು ತಮ್ಮ ಸಾಕು ದನ (ಶಿಕಾರಿಗೆ ಬಳಸುತ್ತಾರೆ) ಗಳ ಮೇಲೆ ಇಡೀ ಸಂಸಾರ ಸಾಗಿಸುತ್ತಾ ಬರುತ್ತಿದ್ದರು ಅದರಲ್ಲಿ ಟೆಂಟ್ ,ಶಿಕಾರಿ ಸಾಧನಗಳು, ಅಡುಗೆ ಪರಿಕರ ಎಲ್ಲಾ ಇರುತ್ತಿತ್ತು.
  ಇವರು ಊರಿಗೆ ಪ್ರವೇಶ ಆದಾಗಿನಿಂದ ಅವರ ಬೆನ್ನು ಬೀಳುತ್ತಿದ್ದೆವು ಆಗ ಅವರ ಚಾಟಿ ಬಿಲ್ಲು, ಕವಣೆ, ಹಕ್ಕಿ ಹಿಡಿಯುವ ಕುಣಿಕೆ, ಬಲೆ ಇವೆಲ್ಲ ಬಾಲ್ಯದಲ್ಲಿ ನಮಗೆ ಅತ್ಯಾಕಷ೯ಣೆ.
  ಆಗೆಲ್ಲ ರಣ ಹದ್ದುಗಳಿದ್ದವು ಅದನ್ನು ಹಿಡಿಯಲು ಇವರು ಊರಿನ ಯಾರೂ ವಾರಸುದಾರರಿಲ್ಲದ ಬೀದಿ ನಾಯಿಯನ್ನ ಉಪಾಯ ಮಾಡಿ ಸಾಯಿಸಿ ದೂರದಲ್ಲಿ ಒಗೆದು ಬಿಡುತ್ತಿದ್ದರು ಒಂದೆರೆಡು ದಿನದಲ್ಲಿ ನೂರಾರು ರಣಹದ್ದುಗಳು ಅದನ್ನು ತಿನ್ನಲು ಬಂದಿಳಿಯುತ್ತಿದ್ದವು, ಅವು ನೋಡಲು ಬೀಕರ ರಣವೇ ಯಾಕೆಂದರೆ ಹತ್ತಾರು ಕೆಜಿ ತೂಗುವ ಅದರ ಕುತ್ತಿಗೆ ಬೋಳು, ಕೆಂಪು ಕುತ್ತಿಗೆ, ಕೆಂಪು ಕಣ್ಣು ಭಯ ಹುಟ್ಟಿಸುತ್ತಿತ್ತು ಅದರಲ್ಲಿ ಆಯ್ದ ರಣ ಹದ್ದು ತಲೆ ಹೊಡೆದು ಸಾಯಿಸಿ ಇವರ ಕ್ಯಾಂಪಿನಲ್ಲಿ ಒಂದೆರೆಡು ದಿನ ದೊಡ್ಡ ಹಬ್ಬ ಮಾಡುತ್ತಿದ್ದರು.
   ಹಕ್ಕಿಪಿಕ್ಕಿ, ಮೇಲ್ ಶಿಕಾರಿ, ಬಾಕ್ರಿ ಅಂತೆಲ್ಲ ಕರೆಯುವ ಇವರೆಲ್ಲ ಸುಮಾರು ನಾನೂರು ವಷ೯ದ ಹಿಂದೆ ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದಿಂದ ಕನಾ೯ಟಕದ ಕಾಡಿಗೆ ವಲಸೆ ಬಂದವರು, ಬ್ರಿಟಿಷರ ಆಡಳಿತದಲ್ಲಿ ಅರಣ್ಯವಾಸಿಗಳಾಗಿ ವನ್ಯ ಪ್ರಾಣಿ ಶಿಕಾರಿ, ಗಿಡಮೂಲಿಕೆ ಸಂಗ್ರಹ ಮತ್ತು ಮಾರಾಟದಿಂದ ಜೀವನ ಮಾಡುತ್ತಾ ಅಲೆಮಾರಿ ಜೀವನ ಮಾಡುತ್ತಿದ್ದವರು ಸ್ವಾತಂತ್ರ ನ೦ತರ ವನ್ಯಜೀವಿ ಸಂರಕ್ಷಣ ಕಾಯ್ದೆಯಿಂದ ಅರಣ್ಯದಿಂದ ಹೊರ ಹಾಕಲ್ಪಟ್ಟ ಈ ಜನಾಂಗದವರು ಇಡೀ ದೇಶದಲ್ಲಿ ಸುಮಾರು 30 ಸಾವಿರ  ಜನಸಂಖ್ಯೆಯಲ್ಲಿದ್ದಾರೆ ಅದರಲ್ಲಿ ಅದ೯ ಭಾಗ ಕನಾ೯ಟಕ ರಾಜ್ಯದಲ್ಲಿದ್ದರೆ ಉಳಿದವರು ತಮಿಳುನಾಡು, ಆಂಧ್ರ, ಪುದುಚೆರಿ ಮತ್ತು ತೆಲಂಗಾಣದಲ್ಲಿ ಹಂಚಿ ಹೋಗಿದ್ದಾರೆ.
   ಇವರ ಭಾಷೆ ವಾಗ್ರಿಬೂಲಿ ಅಂತ ಅದಕ್ಕೆ ಲಿಪಿ ಇಲ್ಲ, ಸ್ಥಳಿಯ ಭಾಷೆ ಎಲ್ಲಾ ಇವರು ಮಾತಾಡುತ್ತಾರೆ,ಇವರಲ್ಲಿ ಹುಟ್ಟಿದ ಮಕ್ಕಳಿಗೆ ಇವರು ಇವರಿಗೆ ಬೇಕಾದ ಸ್ಥಳ ಮತ್ತು ವಸ್ತುಗಳ ಹೆಸರಿಡುವ ಕ್ರಮವೇ ವಿಶಿಷ್ಟ ಅವರ ಹೆಸರು ಬಸ್, ರೈಲು, ಕೋಟ್೯, ಪಿಸ್ಟೂಲ್ , ಡಾಕ್ಟರ್, ಪೋಲಿಸ್, ಲಾಯರ್, ಇಂಗ್ಲೀಷ್, ಜಪಾನ್ ಅಂತೆಲ್ಲ ಮೊದಲು ಇರುತ್ತಿತ್ತು.
  ಈಗ 50 ವರ್ಷದಲ್ಲಿ ಇವರ ಜೀವನಕ್ರಮ ಬದಲಾಗಿದೆ, ಶಿಕಾರಿ ಹೆಚ್ಚು ಕಡಿಮೆ ಇಲ್ಲ ಅನ್ನಬಹುದು, ಅಲೆಮಾರಿ ಜೀವನವೂ ಇಲ್ಲ, ಅದುನಿಕ ಜೀವನವನ್ನ ಪಡೆದು ಮುಖ್ಯವಾಹಿನಿಯಲ್ಲಿ ಸಾಗಿದ್ದಾರೆ, ಇವರ ವೇಷ ಭೂಷಣಗಳು ಉದ್ಯೋಗಗಳೂ ಬದಲಾಗಿದೆ ಅದನ್ನು ಈ ಪ್ಲಾಸ್ಟಿಕ್ ಹೂವಿನ ಮಾರಾಟದ ಹಕ್ಕಿಪಿಕ್ಕಿ ಯುವಕನ ವಿಡಿಯೋದಲ್ಲಿ ನೋಡ ಬಹುದು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...