ಸುಮಾರು 35 ವರ್ಷದ ಹಿಂದೆ ನಮ್ಮ ಊರಿಗೆ ಬಂದು ನೆಲೆಸಿದವರು,ಇವರ ತಂದೆ ಕಾಲದಲ್ಲೂ ಇವರದ್ದು ಹೋಟೆಲ್ ಉದ್ಯಮವೇ, ಈಗ ನಮ್ಮ ಊರು ಆನಂದಪುರದ ಯಡೇಹಳ್ಳಿಯ ವಾಸಿಗಳಾಗಿದ್ದಾರೆ ಹೇಮರಾಜ ಗೌಡರು .
ತುಂಬಾ ಕಷ್ಟದಿಂದ ಜೀವನ ಸವೆಸಿದವರು, ಸಂತೆ ಸಂತೆಗಳಲ್ಲಿ ವ್ಯಾಪಾರ ಮಾಡಲು ಬರುವ ಸಂತೆ ವ್ಯಾಪಾರಿಗಳಿಗೆ ಅವರು ಕುಳಿತಲ್ಲೇ ಚಹಾ, ಮಜ್ಜಿಗೆ, ಉಪಹಾರ ಮತ್ತು ಊಟ ಸರಬರಾಜು ಮಾಡುವ ಗೌಡರ ಕೇಟರಿಂಗ್ ತುಂಬಾ ಪ್ರಸಿದ್ದಿ ಪಡೆದಿದೆ.
ಇವರ ಬಗ್ಗೆ ಸಂತೆಗೆ ಬರುವವರಿಗೆ ಪರಿಚಯ ಇರುವುದಿಲ್ಲ ಆದರೆ ವ್ಯಾಪಾರಕ್ಕೆ ಬರುವ ವ್ಯಾಪಾರಿಗಳಿಗೆ ಮಾತ್ರ ಇವರು ಬೇಕೇ ಬೇಕು.
ಬೆಳಿಗ್ಗಿನಿಂದ ಸಂಜೆ ಮುಕ್ತಾಯದ ತನಕ ವ್ಯಾಪಾರಿಗಳ ಹೊಟ್ಟೆ ತಣಿಸಿ ಸಂಜೆ ಅವರಿಂದ ಹಣ ಪಡೆಯುವ ಇವರು ಸಂತೆ ವ್ಯಾಪಾರಿಗಳಿಗೆ ಒಂದು ರೀತಿ ಅನ್ನದಾನಿಗಳು.
ಈಗ ಇವರು ಕೇವಲ ಮಜ್ಜಿಗೆ ಟೀ ಮಾತ್ರಕ್ಕೆ ಸೀಮಿತ ಆಗಿದ್ದಾರೆ ಅದಕ್ಕೆ ಕಾರಣ ಕೆಲಸಕ್ಕೆ ಜನ ಸಿಗದ ಉದಾಹರಣೆ ಹೇಳುತ್ತಾರೆ.
ಸುಳ್ಳು, ಮೋಸ ಅರಿಯದ ಶ್ರಮವೊಂದೆ ಕಾಯಕ ಎಂಬಂತೆ ವಾರದ ಏಳೂ ದಿನ ಸುತ್ತಮುತ್ತಲಿನ ಸಂತೆಗೆ ಕೇಟರಿಂಗ್ ಮಾಡುವ ಹೇಮಂತ ಗೌಡರು ತಮ್ಮ ಕಷ್ಟದಲ್ಲೂ ಮಗನಿಗೆ ಉತ್ತಮ ವಿದ್ಯಾಬ್ಯಾಸ ನೀಡಿಸಿದ್ದಾರೆ, ಈಗ ಸ್ವಂತ ಮನೆ ನಿಮಾ೯ಣ ಮಾಡುತ್ತಿದ್ದಾರೆ.
ಈ ಊರಿಗೆ ಬಂದಿದ್ದರಿಂದ ಒಳ್ಳೇದಾಯಿತು ಅನ್ನುವ ಅವರ ಬಾವನಾತ್ಮಕ ಮಾತಿಗಿಂತ ಯಾವುದೇ ಊರಿಗೆ ಹೋಗಿದ್ದರೂ ಗೌಡರು ಸ್ವಂತ ಶ್ರಮದಿಂದಲೇ ಒಳ್ಳೆಯದನ್ನ ಪಡೆಯುವ ಗುಣ ಹೊಂದಿದ್ದಾರೆ.
ಮುಂದಿನ ದಿನದಲ್ಲಿ ಇವರ ಸ್ವಂತ ಜಮೀನಿನಲ್ಲಿ ಬೋರ್ ತೆಗೆಸಿ ಅಡಿಕೆ ತೋಟ ಮಾಡುವ ಕನಸು ಇವರದ್ದು, ಇವರ ಕನಸು ಆದಷ್ಟು ಬೇಗ ನನಸಾಗಲಿ ಎಂದು ಹಾರೈಸಿದೆ.
Comments
Post a Comment