https://youtu.be/bY6BEKUksuc
#ತೇಜಸ್ವಿಯವರು_ಮೂಡಿಗೆರೆಯವರಿಗೆ_ಅಪರಿಚಿತರಂತೆ_ಇದ್ದರು.
#ಅವರ_ಅಂತಿಮದರ್ಶನಕ್ಕೆ_ರಾಜ್ಯದ_ಮೂಲೆ_ಮೂಲೆಯಿಂದ_ಹರಿದು_ಬಂದ_ಜನಸಾಗರ
#ಈಗಲೂ_ಮೂಡಿಗೆರೆಯ_ಗ್ರಂಥಾಲಯಗಳಲ್ಲಿ_ತೇಜಸ್ವಿ_ಪುಸ್ತಕಗಳಿಲ್ಲ.
#ಬಿರಿಯಾನಿ_ಕೆರಿಯಪ್ಪ_ತಯಾರಿಸಿದ_ಬಿರಿಯಾನಿ_ಸವಿದ_ನೆನಪು_ಕಾರ್ತಿಕಾದಿತ್ಯರ_ಸಂದರ್ಶನದಲ್ಲಿ
ಶ್ರೀಮತಿ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಅವರೇ ಇವರ ಪುಸ್ತಕ ಓದಿ ಚಿಕ್ಕಮಗಳೂರು ಜಿಲ್ಲೆಯಲ್ಲಿಯೇ ನಿಮ್ಮ ಬರವಣಿಗೆ ಅದ್ಬುತ ಎಂದಿದ್ದರೆಂದರೆ ಅರ್ಥವಾದೀತು ಇವರ ಬರವಣಿಗೆ.
ಹಾಗಂತ ಇವರು ಮೂಡಿಗೆರೆಯವರೇ ಆದರೂ ನೇರವಾಗಿ ತೇಜಸ್ವಿ ಅವರ ಜೊತೆ ಮಾತಾಡಿಲ್ಲ, ಅವರ ಸಾಹಿತ್ಯ ಓದಲು ಇವರಿಗೆ ಮೂಡಿಗೆರೆಯ ಪುಸ್ತಕದ ಅಂಗಡಿ ಅಥವ ಲೈಬ್ರರಿಯಲ್ಲಿ ಲಭ್ಯವಿರಲಿಲ್ಲ ತೇಜಸ್ವಿ ಪುಸ್ತಕಗಳು.
ಬಿರಿಯಾನಿ ಕೆರಿಯಪ್ಪನನ್ನ ನೋಡಿದ್ದಾರೆ,ತೇಜಸ್ಸಿ ಪ್ರತಿಷ್ಟಾನದ ಭವನ ಉದ್ಘಾಟನೆಯ ದಿನ 120 ಜನ ಅತಿಥಿಗಳಿಗೆ ರಾಜೇಶ್ವರಿ ಮೇಡಂ ಬಿರಿಯಾನಿ ಕೆರಿಯಪ್ಪರಿಂದಲೇ ಬಿರಿಯಾನಿ ಮಾಡಿಸಿದ್ದರಂತೆ.
ಮೂಡಿಗೆರೆಯ ಸ್ಥಳಿಯರು ತೇಜಸ್ವಿ ತಕ್ಷಣ ಸಿಟ್ಟಿಗೇಳುತ್ತಾರೆ, ಜನರ ಹತ್ತಿರ ಒಡನಾಡುವುದಿಲ್ಲ, ಅವರ ಸ್ಕೂಟರ್ ನಲ್ಲಿ ಡ್ರಾಪ್ ಕೇಳುತ್ತಾರಂತ ಹಿಂದಿನ ಸೀಟು ತೆಗೆದಿದ್ದಾರೆ ಇತ್ಯಾದಿ ತಪ್ಪು ಗ್ರಹಿಕೆ ಇತ್ತಂತೆ ಅದಕ್ಕೆ ಕಾರಣ ಅವರ ಬದುಕು - ಬರಹ ಕೊನೆಯ ತನಕ ಸ್ಥಳಿಯರಿಗೆ ನಿಟುಕದೇ ಇರಲು ಅವರ ಪುಸ್ತಕಗಳು ಸ್ಥಳಿಯರಿಗೆ ಸಿಗದೇ ಇರುವುದು ಈಗಲೂ ಮೂಡಿಗೆರೆಯ ಗ್ರಂಥಾಲಯಗಳಲ್ಲಿ ತೇಜಸ್ವಿ ಪುಸ್ತಕ ಇಲ್ಲ ಅಂದದ್ದು ಆಶ್ಚಯ೯ವೆ!.
Comments
Post a Comment