Blog number 1265. ಕಾರಿನ ಸೈಲೆನ್ಸ್ ರ್ ಬಿಸಿಯಿಂದ ಕಾರಿನ ಕೆಳಗಿನ ಹುಲ್ಲು ಬೆಂಕಿಯಿಂದ ನೂರಾರು ಕಾರುಗಳು ಭಸ್ಮವಾದ ಬೆಂಗಳೂರಿನ ಏರ್ ಶೋನಲ್ಲಿ ನಡೆದ ದುರಂತ 2019 ರಲ್ಲಿ.
ನೀವು ಚಲಾಯಿಸುವವ ಯಾವುದೇ ವಾಹನ 5 ರಿಂದ 10 ನಿಮಿಷದಲ್ಲಿ ಅದರ ಹೊಗೆ ಕೊಳವೆ ಉಷ್ಣ 200 ಡಿಗ್ರಿ ಸಮೀಪ ತಲುಪಿರುತ್ತದೆ.
ನಿಮ್ಮ ವಾಹನ ಪಾಕ್೯ ಮಾಡುವುದಾದರೆ ಪಾಕಿ೯೦ಗ್ ನೆಲ ಗಮನಿಸಿ, ಮಣ್ಣು, ಸಿಮೆ೦ಟ್, ಟೈಲ್ಸ್ ಅಥವ ಟಾರ್ ಇದ್ದರೆ ತೊಂದರೆ ಇಲ್ಲ, ರಸ್ತೆ ಬದಿಯಲ್ಲಿ ಒಣ ಹುಲ್ಲಿದ್ದರೂ ಅದು ನಿಮ್ಮ ಸೈಲೆನ್ಸ್ ರ್ ತಲುಪವಷ್ಟು ಎತ್ತರ ಇಲ್ಲದಿದ್ದರೆ ತೊಂದರೆ ಇಲ್ಲ.
ಮೊನ್ನೆ ಏರ್ ಶೊ ಆರಂಬಿಸಿದಲ್ಲಿ ಪಾಕಿ೯oಗ್ ಜಾಗ ಹೇಗಿತ್ತೆ೦ದರೆ ಮಲೆನಾಡಿನ ಕರಡ ಬೆಳೆದ ಬ್ಯಾಣದ ಹಾಗೆ ಇತ್ತು, ಅದನ್ನ ತೆಗೆದು ಪಾಕಿ೯೦ಗ್ ಮಾಡದ ಸಂಬಂದಪಟ್ಟ ಅಧಿಕಾರಿಗಳು ಮತ್ತವರ ಬುದ್ಧಿಮತ್ತೆ ಪ್ರಶ್ನಾಹ೯?!
ಯಾರೋ ಭಯಾತ್ಪಾದಕರ ಕೃತ್ಯ ಇರಬಹುದೆಂದು ಅನುಮಾನಿಸಿ ತಕ್ಷಣಕ್ಕೆ ಅನೇಕರು ಪ್ರತಿಕ್ರಿಯಿಸಿದಾಗ ನಾನು ಇದು ಕಾರಿನ ಹೊಗೆ ಕೊಳವೆ ಒಣ ಹುಲ್ಲಿಗೆ ಹರಡಿದ ಬೆಂಕಿ ಅಂತ ಬರೆದಿದ್ದೆ, ಈಗ ಅದು ಅದೇ ರೀತಿ ಆಗಿದೆ ಎಂದು ಸಾಬೀತಾಗಿದೆ ನೋಡಿ.
Comments
Post a Comment