Blog number 1222. ಸಾಗರದ ಪ್ರಸಿದ್ದ ಮಾರಿಕಾಂಬಾ ಜಾತ್ರೆಯಲ್ಲಿ ಮಾರಿಕಾಂಬ ದೇವಿ ತವರು ಮನೆಯಿ೦ದ ಗಂಡನ ಮನೆಗೆ ಮೆರವಣಿಗೆ ಹೋಗುವಾಗ ಹರಕೆ ಕೋಳಿ ಹಾರಿ ಬಿಡುವ ಸಂಪ್ರದಾಯವಿದೆ.
#ಇವತ್ತು_ರಾತ್ರಿ_ಮಾರಿಕಾಂಬೆ_ತವರುಮನೆಯಿಂದ_ಗಂಡನ_ಮನೆಗೆ_ತೆರಳುತ್ತಾಳೆ
#ಇವತ್ತು_ರಾತ್ರಿ_ದೇವರ_ಮೆರವಣಿಗೆಯಲ್ಲಿ_ಹರಕೆ_ಕೋಳಿ_ಹಾರಿ_ಬಿಡುವ_ಕ್ರಮ_ಇದೆ
#ಹಾರಿ_ಬರುವ_ಹರಕೆ_ಕೋಳಿ_ಹಿಡಿಯಲು_ಮೆರವಣಿಗೆಯಲ್ಲಿ_ಪೈಪೋಟಿಯೂ_ಇದೆ.
ಶಿವಮೊಗ್ಗ ಜಿಲ್ಲೆಯ ಸಾಗರದ ಮಾರಿಕಾಂಬಾ ಜಾತ್ರೆ ತುಂಬಾ ಅದ್ದೂರಿಯಾಗಿ ಮೂರು ವರ್ಷಕ್ಕೊಮ್ಮೆ ನಡೆಯುತ್ತದೆ ಜಾತ್ರೆಯಿಂದ ಜಾತ್ರೆಗೆ ವ್ಯವಸ್ಥೆಗಳು ಸುವ್ಯವಸ್ಥೆಯ ಹಾದಿಯಲ್ಲಿ ಸಾಗುತ್ತಿದೆ.
ಆಚರಣೆಗಳು ಬದಲಾಗಲಾರದು ಆದ್ದರಿಂದ ಜನರ ಪೂಜೆ ಹರಕೆ ಸಂಪ್ರದಾಯದಲ್ಲಿ ಪ್ರತಿ ಜಾತ್ರೆಯೂ ತಪ್ಪುವುದಿಲ್ಲ.
ಸೋಮವಾರ ಬೆಳಗಿನ ಜಾವ ತವರು ಮನೆಯಲ್ಲಿ ಪ್ರತಿಷ್ಟಾಪಿಸುವ ಬೃಹತ್ ಮಾರಿಕಾಂಬಾ ದೇವಿಗೆ ಮೇಲ್ವರ್ಗದ ಕುಟುಂಬದ ಸ್ತ್ರೀಯರು ಪೂಜೆ ಸಲ್ಲಿಸುವ ಸಂಪ್ರದಾಯವಿದೆ ಮೊದಲೆಲ್ಲ ಸರ್ಕಾರಿ ಆಸ್ಪತ್ರೆಯಿಂದ ಬೆಳಗಿನ ಜಾವದಲ್ಲಿ ಪ್ರಾರಂಭ ಆಗುತ್ತಿದ್ದ ಸರತಿ ಸಾಲು ಪ್ರತಿ ಮೂರು ವರ್ಷದಲ್ಲಿ ಸಾಗರದ ಬಿ.ಹೆಚ್.ರಸ್ತೆಯ ಪೋಲಿಸ್ ಸ್ಟೇಷನ್ ಸರ್ಕಲ್ ನಿಂದ ಈ ವರ್ಷ ಕೆಇಬಿ ಎದುರಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದವರೆಗೆ ಇತ್ತು.
ಇವತ್ತು ಮಂಗಳವಾರ ರಾತ್ರಿ ತವರು ಮನೆಯಿಂದ ಮೆರವಣಿಗೆಯಲ್ಲಿ ಗಂಡನ ಮನೆಗೆ ಮಾರಿಕಾಂಭಾದೇವಿಯ ಮೆರವಣಿಗೆ ಪ್ರಾರಂಭವಾಗಲಿದೆ ಈ ಸಂದರ್ಭದಲ್ಲಿ ಭಕ್ತರು ಹರಕೆ ಕೋಳಿ ಹಾರಿಬಿಡುವ ಸಂಪ್ರದಾಯವಿದೆ.
ದೇವಿ ತವರು ಮನೆ ಸೇರಿದ ಬುದವಾರ ಬೆಳಿಗ್ಗೆ ಶೂದ್ರ - ದಲಿತರಿಗೆ ಪೂಜೆ ಅವಕಾಶ, ಕುರಿ ಕೋಳಿ ಬಲಿಯ ಅವಕಾಶ ಸಿಗಲಿದೆ, ಮಂಗಳವಾರ ಸಸ್ಯಹಾರಿಗಳಿಗೆ ಬುಧವಾರದಿಂದ ಮಾಂಸಹಾರಿಗಳಿಗೆ ಪೂಜಾ ಅವಕಾಶದ ಮಾರಿಕಾಂಬಾ ಜಾತ್ರೆ ಇದು.
ಕಳೆದ ಮೂರು ವರ್ಷದ ಹರಕೆ ಸಮರ್ಪಣೆಗಾಗಿ ಹರಕೆ ಕೋಳಿ ತಂದು ಸಾಗರದ ಸಾಗರ್ ಹೋಟೆಲ್ ಸರ್ಕಲ್ ಗೆ ಮಾರಿಕಾಂಬಾ ದೇವಿ ಮೆರವಣಿಗೆ ಬ೦ದಾಗ ಹರಕೆ ಕೋಳಿ ಹಾರಿಬಿಡುವ ಮೂಲಕ ಹರಕೆ ಸಮಾಪ್ತಿ ಮಾಡುತ್ತಾರೆ.
ಈ ಹರಕೆ ಕೋಳಿ ಹಿಡಿದು ಚೀಲಕ್ಕೆ ತುಂಬಿಕೊಳ್ಳುವ ದೇವಿಯ ಭಕ್ತರ ಪೈಪೋಟಿಯೂ ಇಲ್ಲಿರುತ್ತದೆ ಇದನ್ನು ನೋಡಲು ಕುತೂಹಲ ಆಸಕ್ತಿ ಇದ್ದವರು ಅಲ್ಲಿ ಇದನ್ನು ನೋಡಬಹುದು.
ಈ ಬಗ್ಗೆ ನಾನು ಈ ಹಿಂದೆ ಬರೆದ ಬ್ಲಾಗ್ ಕೂಡ ಇಲ್ಲಿ ಕ್ಲಿಕ್ ಮಾಡಿ ಓದಬಹುದು
https://arunprasadhombuja.blogspot.com/2020/02/2020_26.html
Comments
Post a Comment