Skip to main content

Blog number 1248. ಪ್ರತಿ 12 ವಷ೯ಕ್ಕೆ ಒಮ್ಮೆ ಪಶ್ಚಿಮ ಘಟ್ಟದಲ್ಲಿಯೇ ನಾಸಿಕ್ ನಿಂದ ಮ೦ಗಳೂರಿಗೆ ನಡೆದು ಬರುವ ಸಾದು ಸಂತರ ನಿಗೂಡವಾದ ಬಾರಾಪಂಥ್ ಯಾತ್ರೆ

#ಬಾರಾಪಂಥ್ ಯಾತ್ರೆ ಪ್ರತಿ 12 ವಷ೯ಕ್ಕೆ ಒಮ್ಮೆ ನಾಸಿಕ್ ಕು೦ಬ ಮೇಳ ಮುಗಿದ ಮರುದಿನ ಪ್ರಾರಂಭ ಆಗುವ ಈ ಯಾತ್ರೆ ಪಶ್ಚಿಮ ಘಟ್ಟದ ಮಧ್ಯದಲ್ಲಿ ನಡೆದು ಬರುವ ನೂರಾರು ಸಾಧು ಸಂತರ ಐದು ಸಾವಿರ ವಷ೯ದಿOದ ನಿರಂತರವಾಗಿ ನಡೆದು ಬರುತ್ತಿರುವ ವಿಸ್ಮಯ ನಿಗೂಡ ಯಾತ್ರೆ#
      
    ನಾಲ್ಕು ವಷ೯ದ ಹಿಂದೆ ಇದೇ ದಿನ ಪ್ರತಿ 12 ವಷ೯ಕ್ಕೆ ಒಮ್ಮೆ ನಾಸಿಕ್ ನಿಂದ ಕುಂಬಮೇಳ ಮುಗಿದ ಮರುದಿನ ಹೊರಡುವ ಈ ಬಾರ ಪ೦ಥ್ ಯಾತ್ರೆಯಲ್ಲಿ ನೂರಾರು ಸಾದು ಸಂತರು ಹೊಸ ನಗರದ ಆಲಗೇರಿ ಮಂಡ್ರಿ ಎಂಬ ಹಳ್ಳಿಯಲ್ಲಿ ತಂಗಿದ್ದರು.
  ಸುಮಾರು 6 ತಿಂಗಳು ಕಾಲ ಪಶ್ಚಿಮ ಘಟ್ಟದ ನಿಧಿ೯ಷ್ಟ ಮಾಗ೯ದಲ್ಲಿ ನಿಧಿ೯ಷ್ಟ ಸ್ಥಳದಲ್ಲಿ ತಂಗುತ್ತಾ ನಿಧಿ೯ಷ್ಟ ದಿನ ಮಂಗಳೂರಿನ ಕದ್ರಿ ಮಠಕ್ಕೆ ತಲುಪುತ್ತಾರೆ.
  ಇದು 5000 ವಷ೯ಕ್ಕೂ ಹಿಂದಿನಿಂದ ತಪ್ಪದೇ ನಡೆದು ಬಂದಿರುವ ವಿಸ್ಮಯ, ಇಲ್ಲಿನ ಬಾರಾ ಪಂತ್ ಯಾತ್ರೆಯಲ್ಲಿ ಭಾಗವಹಿಸುವ ಸಾಧು ಸಂತರಲ್ಲಿರುವ ನಂಬಿಕೆ ಸನ್ಯಾಸಿ ಆಗಿ 70 ಜನ್ಮ ಆದಮೇಲೆ ಈ ಯಾತ್ರೆ ಲಭ್ಯ ಎಂಬ ನಂಬಿಕೆ.
  ಗೋರಕ್ ಪುರದ (ಹಾಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ) ಸ್ವಾಮಿ ಆದಿತ್ಯ ನಾಥ್ ಜೋಗಿ ಇದರ ಮಹಾಂತರಾಗಿದ್ದಾರೆ.
  2016ರಲ್ಲಿ ಈ ಯಾತ್ರೆ ಆಗಮನದ ಬಗ್ಗೆ ಶಿವಮೊಗ್ಗದ ಜನ ಹೋರಾಟ ದಿನ ಪತ್ರಿಕೆ ನನ್ನ ಲೇಖನ ಮುಖಪುಟದ ಲೇಖನವಾಗಿ ಪ್ರಕಟಿಸಿತ್ತು.
  ಬಾರಾ ಪoತ್ ಯಾತ್ರೆ ಹೊಸನಗರ ತಾಲ್ಲೂಕಿನ ಆಲಗೇರಿ ಮಂಡ್ರಿ ರೈಸ್ ಮಿಲ್ ಹಿಂಬಾಗ ಬಂದು ತಂಗಿದಾಗ ಅವತ್ತಿನ ಸಂಜೆಯ ಪೂಜಾ ಕಾಯ೯ಕ್ರಮದ ವಿಡಿಯೋ ಇದು. ಜೊತೆಗೆ ಬಂದಿದ್ದ ಪತ್ರಕತ೯ ಶ್ರOಗೇಶ್ ಹಾಯ್ ಬೆಂಗಳೂರಲ್ಲಿ ವಿಶೇಷ ವರದಿಮಾಡಿದ್ದರು.
  ಈ ಬಾರಾ ಪಂತ್ ಯಾತ್ರೆಗೆ ಹೆಚ್ಚಿನ ಪ್ರಚಾರ ಕೊಡಿಸ ಬೇಕೆಂದು ಉಡುಪಿ ಜಿಲ್ಲೆಯ ಕಮಲಶಿಲೆ ಸಮೀಪದ ಎಡಮೊಗೆಯ ಹಲವಾರಿ ಮಠದ ಶ್ರೀ ಪೀರ್ ಸೋಮನಾಥ ಗುರೂಜಿ ನನಗೆ ಆದೇಶಿಸಿದ್ದರು (ನಾಥ ಪಂಥದವರು) ಈ ಯಾತ್ರೆಗೆ 4 ವಷ೯ದ ಮೊದಲೇ ದೇಹ ತ್ಯಾಗ ಮಾಡಿದ್ದರು, ಹಾಯ್ ಬೆಂಗಳೂರು ಸುದ್ದಿ ಬಂದ ನಂತರ ರಾಜ್ಯದ ಎಲ್ಲಾ ಟಿವಿ ಚಾನಲ್ ಗಳು ಈ ಯಾತ್ರೆಯನ್ನ ವಿಶೇಷ ವರದಿಮಾಡಿತು, ತರಂಗ ವಾರ ಪತ್ರಿಕೆ ವಿಶೇಷ ಸಂಚಿಕೆ ತಂದಿತು ಇದರಿಂದ ಸೋಮನಾಥಜೀ ಉದ್ದೇಶ ಈಡೇರಿತು.
  ಪಾತ್ರ ದೇವತೆಯನ್ನ ತಲೆಮೇಲೆ ಹೊತ್ತು ನಡೆದು ಬಂದು ಕದ್ರಿ ತಲುಪಿದಾಗ ನೈವೇದ್ಯ ಮಾಡಿದ ವಿಶೇಷ ಪ್ರಸಾದ ನನಗೆ ನೀಡಿದ್ದಾರೆ ಅದನ್ನ ಮುಂದಿನ ಬಾರ ಪಂಥಾ ಯಾತ್ರೆವರೆಗೆ ಜೋಪಾನ ಮಾಡಿ ಇಡಲು ಈ ಯಾತ್ರೆಯಲ್ಲಿ ನಡೆದು ಬಂದ ಸಾದುಗಳ ತಂಡವೊಂದು ನೀಡಿದ್ದಾರೆ.
  ಮೊನ್ನೆ ನಾನು ವೈಯಕ್ತಿಕ ಕೆಲಸಕ್ಕಾಗಿ ಕುಂದಾಪುರ ಸಮೀಪದ ಬಸ್ರೂರಿಗೆ ಹೋದವನು ವಾಪಾಸ್ ಬರುವಾಗ ಎಡಮೊಗೆಯ ಹಲವಾರಿ ಮಠಕ್ಕೆ ಹೋಗಿ ಸೋಮನಾಥ್ ಜಿ ಸಮಾದಿ ಸಂದಶಿ೯ಸಿ ಅಲ್ಲಿನ ಕಾಲ ಬೈರವೇಶ್ವರ ದೇವರ ಪೂಜಿಸಿ ಬರಲು ಹೋದಾಗ ಏನು ಆಶ್ಚಯ೯ ಎಂದರೆ ಅವತ್ತು (14 ಪೆಬ್ರವರಿ) ಪೀರ್ ಸೋಮನಾಥಜೀ ಅವರ 8ನೇ ಪುಣ್ಯಾರಾದನೆ ಆದರ ಅಂಗವಾಗಿ ನೂತನ ಗೋಶಾಲೆ ಪ್ರಾರಂಬೋತ್ಸವ ಮಾಡಿದ್ದಾರೆ ನೂತನ ಸ್ವಾಮಿಗಳಾದ ಶ್ರೀ ಜಗದೀಶ್ ಜಿ.
  ಮುಂದಿನ ಬಾರಾ ಪಂಥ ಯಾತ್ರೆಗೆ 8 ವಷ೯ ಕಾಯಬೇಕು ಆಗ ಈ ಬಾರಾ ಪಂತ್ ಯಾತ್ರೆ ಸಾಗುವ ಮಾಗ೯ದಲ್ಲಿ ಬಾರೀ ಸಂಖ್ಯೆಯಲ್ಲಿ ಜನ ಸೇರಲಿದ್ದಾರೆ.
  ಪಶ್ಚಿಮ ಘಟ್ಟದ ಆದಿವಾಸಿ ಜನರಿಗೆ ಮಾತ್ರ ಸಂಪಕ೯ ಇರುವ ಸಾವಿರಾರು ವಷ೯ದ ಇತಿಹಾಸ ಇರುವ ಪಶ್ಚಿಮ ಘಟ್ಟದ ಮಧ್ಯದಲ್ಲೆ ಪಾದಯಾತ್ರೆಯಲ್ಲಿ ಸಾಗುವ ಈ ಬಾರಾ ಪ೦ಥ್ ಯಾತ್ರೆ ನಿಗೂಡ ಮತ್ತು ವಿಸ್ಮಯವೇ ಆಗಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...