Blog number 1237. ಲೋಕಸಭಾ ಚುನಾವಣೆ 2014ರಲ್ಲಿ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರರ ಜೊತೆ ಯಡೂರಪ್ಪರ ಪರ ಪ್ರಚಾರ ಮಾಡಿದ ನೆನಪುಗಳು
#ನನ್ನ_ರಾಜಕೀಯ ನಿವೃತ್ತಿಯ ಕೊನೆಯ 2014ರ ಲೋಕಸಭಾ ಚುನಾವಣೆ
ಇಲ್ಲಿ ಈಗ ಪರಸ್ಪ ಕೆಸರರಾಚಾಟ ಸರಿ ಅಲ್ಲ, ಸೈನ್ಯದ ವಿಚಾರವನ್ನ ಚುನಾವಣ ಅಸ್ತ್ರವಾಗಿ ಬಳಸುವುದೂ ಸರಿಯಲ್ಲ, ಇದನ್ನೆಲ್ಲ ಎದುರಿಸಲು ನೈತಿಕ ಬೆಂಬಲ ಬೇಕಾಗಿದೆ, ಭಕ್ತರು V/S ಗುಲಾಮರು ಅಂತ ಪರಸ್ಪರ ಹೆಸರುತ್ತಾ ಸೋಷಿಯಲ್ ಮೀಡಿಯಾದ ವಚು೯ಯಲ್ ವಾರ್ ನ ಪೌರುಷಕ್ಕೆ ಯಾವುದೇ ಬೆಲೆ ಇಲ್ಲ.
ಇದನ್ನ ಇಲ್ಲಿ ಉಲ್ಲೇಖಿಸಲು ಕಾರಣ ಇದೆ, 2013 ರ ವಿದಾನಸಭಾ ಚುನಾವಣೆಯಲ್ಲಿ ನಾನು ಸಾಗರ ತಾಲ್ಲೂಕಿನ JDS ಪಾಟಿ೯ ಅಧ್ಯಕ್ಷ, ನಮ್ಮ ಅಭ್ಯಥಿ೯ 2 ಬಾರಿ ಬಿಜೆಪಿ ಶಾಸಕರಾಗಿದ್ದ ಗೋಪಾಲಕೃಷ್ಣ ಬೇಳೂರು, ಈ ಚುನಾವಣೆಯಲ್ಲಿ ಅವರು23 ಸಾವಿರ ಮತ ಪಡೆದರು, ಕಾಂಗ್ರೇಸಿನಿಂದ ಗೆದ್ದವರು ಇವರ ತಾಯಿಯ ಅಣ್ಣ ಕಾಗೋಡು ತಿಮ್ಮಪ್ಪನವರು.
ಆದರ ಮರು ವರ್ಷವೇ ಬಂದ ಲೋಕಸಭಾ ಚುನಾವಣೆಗೆ ಬೇಳೂರು ಗೋಪಾಲಕೃಷ್ಣರು ಬಿಜೆಪಿ ಸೇರಿ ಯಡೂರಪ್ಪನವರನ್ನ ಲೋಕಸಭಾ ಸದಸ್ಯರನ್ನಾಗಿಸುವ ತೀರ್ಮಾನಕ್ಕೆ ಬ೦ದರು.
ನಾವೆಲ್ಲರೂ ಬೇಳೂರು ಗೋಪಾಲಕೃಷ್ಣರ ಜೊತೆ ಯಡೂರಪ್ಪರ ಪರ ಚುನಾವಣೆಗಾಗಿ ಬಿಜೆಪಿಗೆ ಸೇರಿದೆವು (ಅದು ನನ್ನ ರಾಜಕಾರಣದ ನಿವೃತ್ತಿ ಕೂಡ). ಆಗ ಸಾಗರ ತಾಲ್ಲೂಕಿನ ಮತ್ತು ಹೊಸ ನಗರ ತಾಲ್ಲೂಕಿನ ಪ್ರಚಾರ ಸಭೆಯಲ್ಲಿ ಆಗಿನ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿದ್ದ ಮಾಜಿ ಸಂಸದ ಅಯನೂರು ಮಂಜುನಾಥ್ ರು ಮಾಡುತ್ತಿದ್ದ ಬಾಷಣ ನೆರೆದಿದ್ದವರನ್ನ ರೋಮಾಂಚನ ಮಾಡುತ್ತಿತ್ತು ಯಾವತ್ತೂ ಅವರು ಅತ್ಯುತ್ತಮ ವಾಗ್ಮಿ.
UPA ಸಕಾ೯ರದ ಅವಧಿಯಲ್ಲಿ ಪಾಕಿಸ್ತಾನ ಗಡಿ ರೇಖೆ ಎಷ್ಟು ಸಾರಿ ಉಲ್ಲಂಘನೆ ಮಾಡಿದೆ, ನಮ್ಮ ದೇಶದ ಸೈನಿಕರ ಕತ್ತು ಕೊಯ್ದ ಘಟನೆ ಇತ್ಯಾದಿ ವಿವರಿಸುವಾಗ ಸಭೆ ನಿಶ್ಯಬ್ದವಾಗಿ ಆಲಿಸುತ್ತಿತ್ತು ಇದು ಕೂಡ ಯಡೂರಪ್ಪರಿಗೆ ಮತಗಳಾಗಿ ಪರಿವತ೯ನೆ ಆಗಿತ್ತು.
UPA ಸಕಾ೯ರ ಹೋಗಿ BJP ಸಕಾ೯ರ ಬಂದಿತು ಆದರೆ ಭಯೋತ್ಪಾದಕರು ಯಾವುದೇ ಸಕಾ೯ರ ಬಂದರೂ ನಿಯಂತ್ರಿಸುವ ಕೆಲಸ ಸುಲಭವಲ್ಲ ಎಂಬುದು ಸಾಭೀತಾಗಿದೆ.
ಹಾಗಾಗಿ ನಾವು ಇವುಗಳ ಪರಿಹಾರದ ಬಗ್ಗೆ ಬೇರೆ ದೃಷ್ಠಿಕೋನದಿಂದ ನೋಡ ಬೇಕು, ಚುನಾವಣೆಯ ಮತಗಳಿಕೆಗೆ ಸೈನ್ಯದ ವಿಚಾರ ಬಳಸಬಾರದೆಂದು ನನ್ನ ಅನಿಸಿಕೆ.
(ಚಿತ್ರದಲ್ಲಿ ನಾನು, ಗೋಪಾಲಕೃಷ್ಣ ಬೇಳೂರು, ಬಿ.ಆರ್.ಜಯ೦ತ್ ಈಶ್ವರಪ್ಪ ಮತ್ತು ಆಯನೂರು ಮಂಜುನಾಥ ಜೊತೆ)
Comments
Post a Comment