Skip to main content

Posts

Showing posts with the label GI TAGGED APPE MIDI PICKLE OF WESTERN GHATS MALENADU

ಪಶ್ಚಿಮ ಘಟ್ಟದ ಕರ್ನಾಟಕದ ಮಲೆನಾಡಿನ ಏಕೈಕ ವಿಶಿಷ್ಟ ವೈವಿಧ್ಯಮಯ ಮಾವಿನ ಅಪ್ಪೆಮಿಡಿ ಚಟ್ಟಿಸಿದ ಉಪ್ಪಿನಕಾಯಿಗೆ ಪ್ರಾದೇಶಿಕ ಮಾನ್ಯತೆ GI tag ಕೂಡ ದೊರೆತಿದೆ.

#ಮಾವಿನ_ಅಪ್ಪೆಮಿಡಿ_ಉಪ್ಪಿನಕಾಯಿ. #ಆಯ್ದ_ಆಪ್ಪೆಮಿಡಿ_ಆರಿಸಿ_ಒರೆಸಿ_ಹುರಿದ_ಉಪ್ಪಿನ_ಜೊತೆ_ಚೆಟ್ಟು_ಮಾಡುವುದು_ಒ0ದು_ಸಂಪ್ರದಾಯಿಕ_ಆಹಾರದ_ಕಲೆ #ಮುಂದಿನ_ವರ್ಷ_ಬೇಕಾದವರು_ಈಗಲೇ_ಹೆಸರು_ನೊಂದಾಯಿಸಿ. #ಭಾರತ_ಮೂಲದ_ಉಪ್ಪಿನ_ಕಾಯಿಗೆ_ನಾಲ್ಕು_ಸಾವಿರ_ವರ್ಷದ_ಇತಿಹಾಸ. #ಮಿಡಿ_ಮಾವಿನಕಾಯಿ_ಪಶ್ಚಿಮಘಟ್ಟದ_ಮಲೆನಾಡಿನಲ್ಲಿ_ಮಾತ್ರ. #ಇಟಲಿ_ಪ್ರವಾಸಿ_ಡೊಲ್ಲಾವಲ್ಲೆ_1624ರಲ್ಲಿ_ಇಕ್ಕೇರಿಗೆ_ಬಂದಾಗ_101_ಅಪ್ಪೆಮಿಡಿ_ಉಪ್ಪಿನಕಾಯಿ_ಬಡಿಸಿದ್ದರಂತೆ   ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆ ಮಾವಿನ ಮಿಡಿ ಮಾರಾಟದ ಕೇಂದ್ರ ಆಗಿದೆ, ನಮ್ಮ ಊರಿಂದ ಹತ್ತು ಕಿ.ಮೀ.ದೂರದ ಈ ಊರಿಗೆ ನಮ್ಮ ಊರಿನಿಂದಲೂ ಮಾವಿನ ಮಿಡಿ ಕಿಳುವವರು ಮಾವಿನ ಮಿಡಿ ರಿಪ್ಪನ್ ಪೇಟೆಗೆ ಒಯ್ಯುತ್ತಾರೆ ಅಲ್ಲಿನ ಅನೇಕ ಅಂಗಡಿ, ಹೋಟೆಲ್ ನವರು ಇವರಿಂದ ಖರೀದಿಸಿ ಮಾರಾಟಕ್ಕೆ ಇಡುತ್ತಾರೆ ಇದರಿಂದ ಶ್ರಮಪಟ್ಟು ಮರದಿಂದ ಮಾವಿನ ಮಿಡಿ ಕಿತ್ತು ತರುವವನಿಗೆ ಮಾರಾಟದ ತಲೆ ನೋವು ಚೌಕಾಸಿ ಇರುವುದಿಲ್ಲ, ತಕ್ಷಣ ಹಣ ಸಿಗುವುದು ಅವನಿಗೆ ಮುಖ್ಯ.   ಹಾಗಾಗಿ ಸ್ಥಳಿಯರಿಗೆ ಮಾವಿನ ಮಿಡಿ ಸಿಗುವುದೇ ಇಲ್ಲ ಆದ್ದರಿಂದ ಈ ವರ್ಷ ಈ ರೀತಿ ಮಾವಿನ ಮಿಡಿ ತೆಗೆಯುವವರನ್ನು ನೇರ ಸಂಪರ್ಕ ಮಾಡುವ ವ್ಯವಸ್ಥೆ ಮಾಡಿದ್ದೆ ಇದರಿಂದ ಸುಮಾರು ಒಂದು ಲಕ್ಷ ಮಾವಿನ ಮಿಡಿ ಆಸಕ್ತರು ಖರೀದಿಸಲು ಸಾಧ್ಯವಾಯಿತು.   ಆದರೆ ಉದ್ಯೋಗ ವ್ಯವಹಾರ ನಿಮಿತ್ತ ದೂರದ ಊರಿನವರಿಗೆ ಇದು...