ಪಶ್ಚಿಮ ಘಟ್ಟದ ಕರ್ನಾಟಕದ ಮಲೆನಾಡಿನ ಏಕೈಕ ವಿಶಿಷ್ಟ ವೈವಿಧ್ಯಮಯ ಮಾವಿನ ಅಪ್ಪೆಮಿಡಿ ಚಟ್ಟಿಸಿದ ಉಪ್ಪಿನಕಾಯಿಗೆ ಪ್ರಾದೇಶಿಕ ಮಾನ್ಯತೆ GI tag ಕೂಡ ದೊರೆತಿದೆ.
#ಆಯ್ದ_ಆಪ್ಪೆಮಿಡಿ_ಆರಿಸಿ_ಒರೆಸಿ_ಹುರಿದ_ಉಪ್ಪಿನ_ಜೊತೆ_ಚೆಟ್ಟು_ಮಾಡುವುದು_ಒ0ದು_ಸಂಪ್ರದಾಯಿಕ_ಆಹಾರದ_ಕಲೆ
#ಮುಂದಿನ_ವರ್ಷ_ಬೇಕಾದವರು_ಈಗಲೇ_ಹೆಸರು_ನೊಂದಾಯಿಸಿ.
#ಭಾರತ_ಮೂಲದ_ಉಪ್ಪಿನ_ಕಾಯಿಗೆ_ನಾಲ್ಕು_ಸಾವಿರ_ವರ್ಷದ_ಇತಿಹಾಸ.
#ಮಿಡಿ_ಮಾವಿನಕಾಯಿ_ಪಶ್ಚಿಮಘಟ್ಟದ_ಮಲೆನಾಡಿನಲ್ಲಿ_ಮಾತ್ರ.
#ಇಟಲಿ_ಪ್ರವಾಸಿ_ಡೊಲ್ಲಾವಲ್ಲೆ_1624ರಲ್ಲಿ_ಇಕ್ಕೇರಿಗೆ_ಬಂದಾಗ_101_ಅಪ್ಪೆಮಿಡಿ_ಉಪ್ಪಿನಕಾಯಿ_ಬಡಿಸಿದ್ದರಂತೆ
ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆ ಮಾವಿನ ಮಿಡಿ ಮಾರಾಟದ ಕೇಂದ್ರ ಆಗಿದೆ, ನಮ್ಮ ಊರಿಂದ ಹತ್ತು ಕಿ.ಮೀ.ದೂರದ ಈ ಊರಿಗೆ ನಮ್ಮ ಊರಿನಿಂದಲೂ ಮಾವಿನ ಮಿಡಿ ಕಿಳುವವರು ಮಾವಿನ ಮಿಡಿ ರಿಪ್ಪನ್ ಪೇಟೆಗೆ ಒಯ್ಯುತ್ತಾರೆ ಅಲ್ಲಿನ ಅನೇಕ ಅಂಗಡಿ, ಹೋಟೆಲ್ ನವರು ಇವರಿಂದ ಖರೀದಿಸಿ ಮಾರಾಟಕ್ಕೆ ಇಡುತ್ತಾರೆ ಇದರಿಂದ ಶ್ರಮಪಟ್ಟು ಮರದಿಂದ ಮಾವಿನ ಮಿಡಿ ಕಿತ್ತು ತರುವವನಿಗೆ ಮಾರಾಟದ ತಲೆ ನೋವು ಚೌಕಾಸಿ ಇರುವುದಿಲ್ಲ, ತಕ್ಷಣ ಹಣ ಸಿಗುವುದು ಅವನಿಗೆ ಮುಖ್ಯ.
ಹಾಗಾಗಿ ಸ್ಥಳಿಯರಿಗೆ ಮಾವಿನ ಮಿಡಿ ಸಿಗುವುದೇ ಇಲ್ಲ ಆದ್ದರಿಂದ ಈ ವರ್ಷ ಈ ರೀತಿ ಮಾವಿನ ಮಿಡಿ ತೆಗೆಯುವವರನ್ನು ನೇರ ಸಂಪರ್ಕ ಮಾಡುವ ವ್ಯವಸ್ಥೆ ಮಾಡಿದ್ದೆ ಇದರಿಂದ ಸುಮಾರು ಒಂದು ಲಕ್ಷ ಮಾವಿನ ಮಿಡಿ ಆಸಕ್ತರು ಖರೀದಿಸಲು ಸಾಧ್ಯವಾಯಿತು.
ಆದರೆ ಉದ್ಯೋಗ ವ್ಯವಹಾರ ನಿಮಿತ್ತ ದೂರದ ಊರಿನವರಿಗೆ ಇದು ಸಾಧ್ಯವಾಗಲಿಲ್ಲ.
ಅವತ್ತು ಕಿತ್ತ ಆಯ್ದ ಮಿಡಿ ಅವತ್ತೇ ಮೃದುವಾದ ಸ್ವಚ್ಚ ಒಣ ಬಟ್ಟೆಯಲ್ಲಿ ಒರೆಸಿ, ತಕ್ಷಣ ಉಪ್ಪು ಹುರಿದು ಶುದ್ಧ ಜಾಡಿಯಲ್ಲಿ ಚಟ್ಟು ಮಾಡಲು ಹಾಕಿದರೆ ಉತ್ಕೃಷ್ಟ ಉಪ್ಪಿನಕಾಯಿ ಮಾಡಲು ಸಾಧ್ಯ.
ಮಿಡಿ ಚಟ್ಟಾದ ನಂತರ ಪುನಃ ಅದರಲ್ಲಿ ಸೂಕ್ತ ಮಿಡಿ ಆರಿಸಿ ಅದಕ್ಕೆಸೂಕ್ತವಾದ ಅವರವರ ಆಯ್ಕೆಯ ಮಸಾಲ ಮಿಶ್ರಣವಾದರೆ ಮಲೆನಾಡ ಮಾವಿನ ಮಿಡಿ ಉಪ್ಪಿನಕಾಯಿ ಊಟದ ತಟ್ಟೆಯಲ್ಲಿ ಸ್ಥಾನ ಪಡೆಯುತ್ತದೆ.
ಕೆಲ ದೂರದ ಗೆಳೆಯರಿಗೆ ಅವರ ಕೋರಿಕೆಯಿಂದ ಮಾವಿನ ಮಿಡಿ ಖರೀದಿಸಿ ಚಟ್ಟು ಹಾಕಿದ್ದೇನೆ ಅದನ್ನು ಒಯ್ದು ಉಪ್ಪಿನ ಕಾಯಿ ಮಾಡಿ ಕೊಳ್ಳುತ್ತಾರೆ.
ಅನೇಕರು ಕೊನೆಯ ಹಂತದಲ್ಲಿ ಈ ಬೇಡಿಕೆ ಇಟ್ಟಿದ್ದರಿಂದ ನನಗೂ ಸಾಧ್ಯವಾಗಲಿಲ್ಲ.
ಆದ್ದರಿಂದ ಮುಂದಿನ ವರ್ಷ ದೂರದ ಊರಿನಲ್ಲಿರುವ ಮಿಡಿ ಮಾವಿನಕಾಯಿ ಪ್ರಿಯರಿಗೆ ಬೇಕಾಗುಷ್ಟು ಮಾವಿನ ಮಿಡಿ ಚೆಟ್ಟು ಮಾಡಿ ಕೊಡಲು ನನ್ನ ಗೆಳೆಯರೋರ್ವರು ಮುಂದೆ ಬಂದಿದ್ದಾರೆ, ಇದಕ್ಕೆ ಬೇಕಾದ ಪಸ್ಟ್ ಗ್ರೇಡ್ ಮಸಾಲೆ ಪೂರೈಸಲು ಮಹಿಳಾ ಉದ್ಯಮಿ ಕೂಡ ತಯಾರಾಗಿದ್ದಾರೆ.
ಇದರ ಮಧ್ಯ ಇಂತಹ ಚಟ್ಟು ಮಿಡಿ ಖರೀದಿಸಿದವರಿಗೆ ಮಲೆನಾಡ ರುಚಿಯ ಒಣ ಉಪ್ಪಿನಕಾಯಿ ಮಸಾಲೆ ಪುಡಿಯೂ ಸಿಗುತ್ತದೆ ಇದರಿಂದ ಅವರೇ ಅವರ ಮನೆಯಲ್ಲಿ ದಿಡೀರ್ ಮಲೆನಾಡ ರುಚಿಯ ಮಾವಿನ ಮಿಡಿ ಉಪ್ಪಿನಕಾಯಿ ಸುಲಭವಾಗಿ ತಯಾರಿಸಿ ತಿನ್ನಬಹುದು.
ಇವತ್ತು ಮಾರುಕಟ್ಟೆಯಲ್ಲಿ ಒ0ದು ಕೇಜಿ ಉಪ್ಪಿನಕಾಯಿ ಅಂದರೆ ಅದರಲ್ಲಿ 20 ರಿಂದ 30 ಮಿಡಿ ಮಾತ್ರ ಇರುತ್ತದೆ.
#ಮಲೆನಾಡ_ಮಾವಿನ_ಮಿಡಿ ಉಪ್ಪಿನಕಾಯಿ ಬೇಕಾದವರು, ಉಪ್ಪಿನಕಾಯಿ ಬೇಡ ಉಪ್ಪಿಗೆ ಹಾಕಿ ಚಟ್ಟು ಮಾಡಿದ ಮಾವಿನ ಮಿಡಿ ಬೇಕಾದವರು, ತಾವೇ ದಿಡೀರ್ ಉಪ್ಪಿನಕಾಯಿ ಮಾಡುವಂತ ಮಲೆನಾಡ ಮಾವಿನ ಮಿಡಿ ಉಪ್ಪಿನಕಾಯಿ ಒಣ ಮಸಾಲ ಪುಡಿ ಬೇಕಾದವರು ಈಗಲೇ ವಾಟ್ಸಪ್ ಅಥವ ಮೆಸೇಜ್ 9449253788 ಗೆ ಮಾಡಿದರೆ ಮುಂದಿನ ವರ್ಷ ಅಪ್ಪೆಮಿಡಿ ಉಪ್ಪಿನಲ್ಲಿ ಚಟ್ಟಿಸಿದ್ದು ಅಥವ ಮಸಾಲೆ ಹಾಕಿದ ಶುದ್ಧ ಉಪ್ಪಿನಕಾಯಿಯ ಭರಣಿ ಅವರ ಮನೆಗೆ ತಲುಪುತ್ತದೆ.
ಕನ್ನಡದಲ್ಲಿ ಉಪ್ಪಿನಕಾಯಿ, ಆಂಧ್ರ ತೆಲಂಗಾಣದಲ್ಲಿ ಅವಕಾಯಿ (ಕಡಿ ಉಪ್ಪಿನಕಾಯಿ), ಹಿಂದಿಯಲ್ಲಿ ಅಚಾರ್, ಇಂಗ್ಲೀಷ್ ನಲ್ಲಿ ಪಿಕಲ್ ಭಾರತದ ಮೂಲದ್ದು ಇದು 4000 ವಷ೯ದ ಇತಿಹಾಸ ಹೊಂದಿದೆ ಅನ್ನುತ್ತಾರೆ.
ನ್ಯೂಯಾರ್ಕನ ಪುಡ್ ಮ್ಯೂಸಿಯಂನಲ್ಲಿ 2030 BCE ಅಂದರೆ ಕ್ರಿಸ್ತ ಪೂರ್ವದಲ್ಲಿ ಭಾರತ ಮೂಲದ ಸೌತೆಕಾಯಿಂದ ಟ್ರಿಗ್ರೀಸ್ ವ್ಯಾಲಿಯಲ್ಲಿ ಉಪ್ಪಿನಕಾಯಿ ಮೊದಲು ಪ್ರಾರಂಬ ಆಯಿತೆಂಬ ಮಾಹಿತಿ ಜಾಹೀರು ಮಾಡಿದ್ದಾರೆ.
ಅಮೇರಿಕಾದಲ್ಲಿ ಪ್ರತಿ ವ್ಯಕ್ತಿ ವಾರ್ಷಿಕ 9 ಪೌಂಡ್ ಸೌತೆ ಕಾಯಿ ಉಪ್ಪಿನಕಾಯಿ ಸೇವಿಸುತ್ತಾನೆಂಬ ಸಮೀಕ್ಷೆ ಇದೆ.
ಇಟಲಿ ಪ್ರವಾಸಿ ಡೊಲ್ಲಾ ವೆಲ್ಲೆ 1624 ರಲ್ಲಿ ಕೆಳದಿ ರಾಜ ವೆಂಕಟಪ್ಪ ನಾಯಕರ ಬೇಟಿಗೆ ಬಂದಾಗ 101 ರೀತಿಯ ಉಪ್ಪಿನಕಾಯಿ ಅವರ ಊಟದ ಎಡೆ ಎಲೆಯಲ್ಲಿ ಬಡಿಸಿದ್ದರೆಂಬ ಜನಪದ ಸುದ್ದಿ ಇತ್ತು.
Comments
Post a Comment