ಶಿವಮೊಗ್ಗದ ನೆಹರೂ ರಸ್ತೆಯ ಎರಡನೇ ಕ್ರಾಸಿನಲ್ಲಿ ಶೋಭಾ ಸ್ಟೋರ್ ಪಕ್ಕದ ಕಿರಿದಾದ ಓಣಿಯಲ್ಲಿದೆ MH ಕಾಫೀ ಶಾಪ್ ಇಲ್ಲಿನ ಉತ್ಕೃಷ್ಟ ಪಿಲ್ಟ್ ರ್ ಕಾಫೀ ಮತ್ತು ಟೀಗಾಗಿ ಜನ ಹುಡುಕಿಕೊಂಡು ಬರುತ್ತಾರೆ.
#ನೆಹರೂ_ರಸ್ತೆಯ_ಎರಡನೆ_ತಿರುವಿನ_ಶೋಬಾ_ಸ್ಟೋರ್_ಪಕ್ಕದ_ಓಣಿಯಲ್ಲಿದೆ.
#ಸಜ್ಜನ_ಮಾಲಿಕ_ಭಾಷರವರ_MH_ಕಾಫಿ_ಶಾಪ್.
2012ರಲ್ಲಿ ನಮ್ಮ ಮಲ್ಲಿಕಾ ವೆಜ್ ರೆಸ್ಟೋರೆಂಟ್ ಪ್ರಾರಂಬಿಸುವ ಮುಂಚೆ ಅನೇಕ ಪ್ಲೇಯರ್ ಗಳ ನಾಟಕ ಮತ್ತು ಮೋಸ ಅನುಭವಿಸಿ ಸ್ವಂತ ಪ್ರಾರಂಬಿಸುವ ಅನಿವಾರ್ಯ ಪ್ರಸಂಗ ಉಂಟಾದಾಗ ನಾನು ನಮ್ಮ ರಾಜ್ಯ ಮಾತ್ರವಲ್ಲ ಗೋವಾ, ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಹೋಟೆಲ್ ಗಳಲ್ಲಿ ಅನುಭವ ಪಡೆದಿದ್ದೆ.
ಶಿವಮೊಗ್ಗದ #ಮಿನಾಕ್ಷಿ_ಭವನದ ಉದ್ದ ಗ್ಲಾಸಿನ ಟೀ ಕಾಫಿಯ ಆಕಷ೯ಣೆ ಯಾವತ್ತೂ ನನಗೆ ಆದ್ದರಿಂದ ಆ ಗ್ಲಾಸ್ ಸೆಲೆಕ್ಟ್ ಮಾಡಿಕೊಂಡೆ ಆದರೆ ಟೀ ಮತ್ತು ಕಾಪಿ ವಿಚಾರದಲ್ಲಿ ಆಯ್ಕೆ ಅಂತಿಮ ಆಗಲೇ ಇಲ್ಲ.
ಶಿವಮೊಗ್ಗದ #ಶ್ಯಾಮ್_ಟ್ರೇಡರ್ಸ್ನ ಮಾಲಿಕರು ಅವರ ಅನುಭವದ ಕಾಫಿ ಪಿಲ್ಟರ್ ಶಿಪಾರಸ್ಸು ಮಾಡಿದ್ದೆಲ್ಲ ಖರೀದಿಸಿದೆ ಆದರೆ ನನ್ನ ನಿರೀಕ್ಷೆ ಈಡೇರಲೇ ಇಲ್ಲ.
ಇದೇ ಸಂದರ್ಭದಲ್ಲಿ ನೆಹರೂ ರಸ್ತೆಯ #ಶೋಬಾ_ಸ್ಟೋರ್ ಗೆ ಹೋದವನು (2012ರಲ್ಲಿ) ಪಕ್ಕದ ಕಿರಿದಾದ ಓಣಿಯಲ್ಲಿ #ಶೃಂಗೇಶರ_ಜನಹೋರಾಟ ದಿನಪತ್ರಿಕೆ ಕಛೇರಿಗೆ ಹೋದಾಗ ಅವರು ಬನ್ನಿ ಕಾಫಿ ಕುಡಿಯೋಣ ಪಕ್ಕದಲ್ಲೇ ಒಳ್ಳೇ ಕ್ಯಾಂಟೀನ್ ಇದೆ ಅಂದರು.
ಸಜ್ಜನ ಮಾಲಿಕ ಮಿತಭಾಷಿ #ಬಾಷಾರ #MH_ಕಾಪೀ_ಶಾಪ್ ಅಷ್ಟು ಪ್ರಸಿದ್ಧಿ ಪಡೆಯಲು ಕಾರಣ ಇಲ್ಲಿನ ಉತ್ಕೃಷ್ಟ ಪಿಲ್ಟರ್ ಕಾಫಿ ಮತ್ತು ಟೀ.
ನನ್ನ ಆನಂದಪುರಂನ #ಮಲ್ಲಿಕಾ_ವೆಜ್ ನಲ್ಲಿ ತಯಾರಾಗುವ ಪಿಲ್ಟ್ ರ್ ಕಾಫಿ ಮತ್ತು ಟೀ ಬಾಷಾರ ರೆಸಿಪಿ ಮತ್ತು ಅವರು ಶಿಪಾರಸ್ಸು ಮಾಡಿದ #ಕೋಥಾಸ್ ಕಾಪಿ ಪುಡಿ ಮತ್ತು ಅದರ ಡಿಕಾಕ್ಷನ್ ತಯಾರಿಸಲು ತಮಿಳುನಾಡಿನ #ಜೆಮಿನಿ ( ಅಟೋಮಿಟಿಕ್) ಕಾಫಿ ಪಿಲ್ಟರ್ ಖರೀದಿಸಿದೆ ಆಗ ಕೋಥಾಸ್ ಕಾಫಿ ಪುಡಿ ಶಿವಮೊಗ್ಗದ ಡೀಲರ್ #ಮಾಲತೇಶ್_ಶೆಟ್ಟರು (ಈಗಲೂ ಅವರೆ). ಈಗ ದುರ್ಗಿಗುಡಿಯ #ಗಂಗಾ_ಮೆಡಿಕಲ್ಸ್ ಪಕ್ಕದಲ್ಲಿ ಕಂಪನಿಯ ಅಧಿಕೃತ ಔಟ್ ಲೆಟ್ ಪ್ರಾರಂಭ ಆಗಿದೆ.
ಹೀಗೆ MH ಕಾಫಿ ಶಾಪ್ ನ ಬಾಷಾ ನನ್ನ ನೂತನ ಹೋಟೆಲ್ ಉದ್ಯಮಕ್ಕೆ ಹತ್ತು ವರ್ಷದ ಹಿಂದೆ ಸಲಹೆ ನೀಡಿ ಸಹಾಯ ಮಾಡಿದ್ದು ನಾನು ಮರೆಯುವುದಿಲ್ಲ.
ಇವರ ಕ್ಯಾಂಟೀನ್ ಕಾಫಿ ರುಚಿ ಗೊತ್ತಿರುವವರೆಲ್ಲ ಯಾರಿಗೂ ಕಾಣದ ಸಣ್ಣ ಓಣಿಯ ಮೂಲೆಯಲ್ಲಿ ಕಾಫಿಗಾಗಿ ಹುಡುಕಿಕೊಂಡು ಹೋಗುತ್ತಾರೆಂದರೆ ಅಲ್ಲಿ ಪಿಲ್ಟರ್ ಕಾಫಿಯ ಘಮ-ರುಚಿಯ ವಿಶೇಷವೇ ಇದೆ, ಬಾಷಾರ MH ಕಾಫೀ ಶಾಪ್ ಶಿವಮೊಗ್ಗದಲ್ಲಿ ಗೊತ್ತಿಲ್ಲದವರಿಲ್ಲ.
ಒಮ್ಮೆ ಶಿವಮೊಗ್ಗ ಹೋದವರು ಇಲ್ಲಿ ಬೇಟಿ ನೀಡಿ.
Comments
Post a Comment