ಕಲ್ಲಡ್ಕದ ಕೇಟಿ ಚಹಾಕ್ಕೆ 110 ವರ್ಷದ ಇತಿಹಾಸ, ರಾಷ್ಟ್ರೀಯ ಹೆದ್ದಾರಿ ಅಗಲಿಕರಣದಿಂದ ಹೊಸ ಕಟ್ಟಡದಲ್ಲಿ ಲಕ್ಷ್ಮೀ ವಿಲಾಸ್ ಪುನಾರಾರಂಭವಾಗಿದೆ, ನೀವೂ ಮನೆಯಲ್ಲಿ ಕೇಟಿ ಚಹಾ ತಯಾರಿಸುವ ಸುಲಭ ರೆಸಿಪಿ ಇಲ್ಲಿದೆ.
#ನೂರಾ_ಹತ್ತು_ಪುರಾತನದ್ದು
#ಈಗ_ರಾಷ್ಟ್ರೀಯ_ಹೆದ್ದಾರಿ_ಅಗಲಿಕರಣದಿಂದ_ಹೊಸ_ಕಟ್ಟಡದಲ್ಲಿ
#ಕಲ್ಲಡ್ಕದ_ಕೇಟಿ_ನೀವು_ಮನೆಯಲ್ಲೂ_ಮಾಡುವ_ಸುಲಭ_ರೆಸಿಪಿ.
ಮಂಗಳೂರಿಂದ ಪುತ್ತೂರು, ಸುಳ್ಯ, ಮೈಸೂರು ಮಾಗ೯ದಲ್ಲಿ ಪ್ರಯಾಣಿಸುವಾಗ ಕಲ್ಲಡ್ಕಎಂಬ ಊರು ಸಿಗುತ್ತದೆ, ಇಲ್ಲಿನ ಪೇಟೆಯ ಎಡ ಭಾಗದಲ್ಲಿ ಒಂದು ಪ್ರಸಿದ್ದವಾದ ಪುರಾತನವಾದ (110 ವರ್ಷ) ಒಂದು ಹೋಟೆಲ್ ಇದೆ.
ಇದರ ಹೆಸರು #ಲಕ್ಷ್ಮಿ_ನಿವಾಸ_ಕೆಟಿ_ಹೋಟೆಲ್, ಇಲ್ಲಿನ ಚಹಾವೇ ವಿಶೇಷ ಗ್ಲಾಸ್ ನ ಕೆಳಭಾಗದ ಹಾಲು ಮತ್ತು ಮೇಲ್ಬಾಗದ ಚಹಾ ಡಿಕಾಕ್ಷನ್ ಒಂದೇ ಗ್ಲಾಸಿನಲ್ಲಿದ್ದರೂ ಬೇರೆ ಬೇರೆ ಆಗಿ ಇರುತ್ತದೆ, ಚಮಚದಲ್ಲಿ ಮಿಶ್ರ ಮಾಡಿ ಕುಡಿಯಬೇಕು.
ಈ ಚಹಾ ತಯಾರಿಸುವುದು ನಿಪುಣ ಕೆಲಸಗಾರರಿಗೆ ಮಾತ್ರ ಸಾಧ್ಯ!, ಮೊದಲೆಲ್ಲ ಪೋಟೋ ತೆಗೆಯಲು ಬಿಡುತ್ತಿರಲಿಲ್ಲ 2019 ರಲ್ಲಿ ಪುತ್ತೂರಿನಿ೦ದ ಬರುವಾಗ ಇಲ್ಲಿನ ವಿಶೇಷ ಕೆಟಿ ಚಹ ಸೇವಿಸಲು ಇಲ್ಲಿಗೆ ಹೋಗಿದ್ದಾಗ ಪೋಟೋ ವಿಡಿಯೋ ತೆಗೆಯಲು ಅನುಮತಿ ನೀಡಿದರು.
ಈಗ ಕಲ್ಲಡ್ಕದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಅಗಲಿಕರಣದಿಂದ 110 ವರ್ಷದ ಈ ಕೆ.ಟಿ. ಹೋಟೆಲ್ ಹಳೆ ಕಟ್ಟಡ ಇಲ್ಲ, ಇದೇ ಜಾಗದಲ್ಲಿ ಹೆದ್ದಾರಿಯಿಂದ ನಿರ್ದಿಷ್ಟ ದೂರದಲ್ಲಿ ನೂತನವಾದ ಕಟ್ಟಡದಲ್ಲಿ ಲಕ್ಷ್ಮೀ ನಿವಾಸ ಕಲ್ಲಡ್ಕ ಕೇಟಿ ಪುನಃ ಸಿಗುತ್ತಿದೆ.
ಇದನ್ನು ತಯಾರಿಸುವುದು ಸುಲಭ ದಪ್ಪ ಹಾಲನ್ನು ಚೆನ್ನಾಗಿ ಸಕ್ಕರೆಯೊಂದಿಗೆ ಕುದಿಸಿಕೊಳ್ಳುವುದು, ಚಹ ಡಿಕಾಕ್ಷನ್ ದಪ್ಪವಾಗಿ ಪ್ರತ್ಯೇಕ ನೀರಲ್ಲಿ ನಿಮಗಿಷ್ಟವಾದ ಚಹಾ ಪುಡಿಯಲ್ಲಿ ತಯಾರಿಸಿಕೊಳ್ಳಬೇಕು.
ಕುದಿದ ಹಾಲನ್ನು ಮೇಲೆ ಕೆಳಗೆ ಹೊಡೆದು ನೊರೆ ಬರಿಸಿಕೊಂಡು ಗ್ಲಾಸಿಗೆ ಹಾಕಿ ಅದರಲ್ಲಿ ಚಮಚ ಒಂದನ್ನು ಹಿಡಿದು ಟೀ ಡಿಕಾಕ್ಷನ್ ಚಮಚದ ಮೇಲೆ ಹಾಕಬೇಕು, ಹೀಗಾದಾಗ ಕೆಳಗಿನ ಹಾಲು ಬೇರೆ, ಟೀ ಡಿಕಾಕ್ಷನ್ ಬೇರೆ ಉಳಿಯುತ್ತದೆ ಹಾಲಿನ ನೊರೆ ಮೇಲೆ ಬರುತ್ತದೆ, ಬೇಕಾದರೆ ಪ್ರತ್ಯೇಕ ಹಾಲಿನ ನೊರೆ ಮಾಡಿ ಗ್ಲಾಸಿನ ಮೇಲೆ ಹಾಕಬಹುದು ಹೀಗೆ ಗಿರಾಕಿಯ ಟೇಬಲ್ ಗೆ ಬರುವ ಕಲ್ಲಡ್ಕ ಕೇಟಿ ಯನ್ನು ನಾವು ಚಮಚದಿಂದ ಕರಡಿ ಚಹಾ ಕುಡಿಯುವುದು ಪದ್ಧತಿ.
ಈ ಮಾರ್ಗದಲ್ಲಿ ಹೋದಾಗ ಕಲ್ಲಡ್ಕದ ಲಕ್ಷ್ಮೀನಿವಾಸಕ್ಕೆ ತಪ್ಪದೇ ಹೋಗಿ ಕೆಟಿ ವಿಶೇಷ ಚಹಾ ರುಚಿ ನೋಡಿ
ಮಂಗಳೂರು ರೆಸಿಪಿಯವರು ತೋರಿಸಿಕೊಟ್ಟ ಲಿಂಕ್ ಇಲ್ಲಿದೆ ನೋಡಿ ಮನೆಯಲ್ಲಿ ನೀವೇ ಮಾಡಿ ನೋಡಬಹುದು.
https://fb.watch/coUbjISeV9/
Comments
Post a Comment