Skip to main content

Blog number 838. ಕೆ.ಟಿ.ಗಟ್ಟಿಯವರ ಕಾದಂಬರಿ ಕಾಮು೯ಗಿಲು ಗೆ ಪ್ರೇರಣೆ ಆದದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರದ ಮಠದ ವ್ಯಾಪ್ತಿಯ ಅಂತರ್ದಮಿ೯ಯ ಪ್ರೇಮ ಕಥೆ, ಕೋಣಂದೂರು ವೆಂಕಪ್ಪ ಗೌಡರು ತಮ್ಮ ಅಳಿಯನನ್ನು ಹೀರೋ ಮಾಡಿ ಸಿನಿಮಾ ಮಾಡಿದರು, ನಾನು ಈ ನಿಜ ಕಥೆಯ ನಿಜ ಹೀರೋ ಅವರಿಗೆ ಬೇಟಿ ಮಾಡಿಸಿದ್ದ ಈ ಘಟನೆ !?

#ನಮ್ಮ_ಜಿಲ್ಲೆಯ_ಸಾಹಿತಿ_ಕೋಣಂದೂರು_ವೆಂಕಪ್ಪಗೌಡರು_ಸಿನಿಮಾ_ಮಾಡಿದ್ದು

#ಕೆ_ಟಿ_ಗಟ್ಟಿಯವರ_ಕಾದಂಬರಿ_ಕಾರ್ಮುಗಿಲು

#ಇದು_ಮಲೆನಾಡಿನ_ಸತ್ಯಘಟನೆ_ಆದಾರಿತ_ಕಾದಂಬರಿ

#ಸತ್ಯಘಟನೆ_ಆ_ಕಾಲದಲ್ಲಿ_ಪ್ರಜಾವಾಣಿಯಲ್ಲಿ_ಪ್ರಕಟವಾಗಿ_ಸೆನ್ಸೇಷನಲ್_ನ್ಯೂಸ್_ಆಗಿತ್ತು.

#ಈ_ಘಟನೆಯ_ನಿಜ_ಹೀರೋ_ಸಿನಿಮಾ_ನಿರ್ಮಾಪಕರಿಗೆ_ಬೇಟಿ_ಮಾಡಿಸಿದ್ದೆ.

  ಕೋಣಂದೂರು ವೆಂಕಪ್ಪ ಗೌಡರು ಸಮಾಜವಾದಿ ಸಾಹಿತಿಗಳು, ಶಾಂತವೇರಿ ಗೋಪಾಲಗೌಡರ ಆತ್ಮಚರಿತ್ರೆ "ಜೀವಂತ ಜ್ವಾಲೆ", ಕೆಂಗಲ್ ಹನುಮಂತಯ್ಯ, ದೇವರಾಜ ಅರಸರು, ಜೆ.ಹೆಚ್.ಪಟೇಲರ , ಹುಚ್ಚು ಮಾಸ್ತಿ ಗೌಡರು, ದೇಶದ ಪ್ರಧಾನ ಮಂತ್ರಿ ದೇವೇಗೌಡರ ಆತ್ಮಚರಿತ್ರೆ ಬರೆದವರು.
 ಇವರಿಂದಲೇ ನಮ್ಮ ಗುರುಗಳಾದ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ ಆತ್ಮಚರಿತ್ರೆ ಕೋಣಂದೂರು ವೆ೦ಕಪ್ಪ ಗೌಡರಿಂದ ಬರೆಸಿ ಪ್ರಕಟಿಸಿದ್ದರಿಂದ ನನ್ನ ಮತ್ತು ಕೋಣಂದೂರು ವೆಂಕಪ್ಪ ಗೌಡರ ಆತ್ಮೀಯತೆ ಹೆಚ್ಚಾಯಿತು.
  ಗಣಪತಿಯಪ್ಪರ ಆತ್ಮಚರಿತ್ರೆ ಸತ್ಯ ಘಟನೆ ಹಸಿ ಹಸಿಯಾಗಿ ಗೌಡರು ಬರೆದಿದ್ದರಿಂದ ಅನೇಕ ತೊಂದರೆ, ಅಡೆತಡೆ ನಾವೆಲ್ಲ ಅನುಭವಿಸಿದೆವು.
  ಬೆಂಗಳೂರಿಂದ ಶಿವಮೊಗ್ಗಕ್ಕೆ ಅಥವ ಅವರ ಹುಟ್ಟೂರು ಕೊಣಂದೂರಿಗೆ ಬರುವಾಗ ಆನಂದಪುರಂನ ನನ್ನ ಮನೆಗೆ ಅತಿಥಿ ಆಗಿ ಬಂದು ಉಳಿಯುವ ಸಲಿಗೆ ಅವರಿಗಿತ್ತು.
  ಇವರ ಜೀವನದಲ್ಲಿ ಒಂದು ದುರ೦ತ ನಡೆಯುತ್ತದೆ ಶಾಂತವೇರಿ ಗೋಪಾಲಗೌಡರು ವಿವಾಹ ಆದಾಗ ನೂತನ ದಂಪತಿಗಳಿಗೆ ಬೆಂಗಳೂರಿನ ಇವರ ಮನೆಯಲ್ಲಿ ಔತಣ ಕೂಟ ಇಡುತ್ತಾರೆ, ಊಟದ ನಂತರ ಗೋಪಾಲಗೌಡರನ್ನು ಬಸ್ ನಿಲ್ದಾಣಕ್ಕೆ ಬಿಡಲು ಹೋದಾಗ ಮನೆಯಲ್ಲಿದ್ದ ಇವರ ಚಿಕ್ಕ ಗಂಡು ಮಗ ಬಿಸಿ ಜಾಮೂನ್ ಬಾಂಡಲಿ ಎಳೆದು ಇಡೀ ಸಕ್ಕರೆ ಪಾಕ ಮೈ ಮೇಲೆ ಸುರಿದು ಮೃತನಾದದ್ದು.
  ಶಿವಮೊಗ್ಗದ ಪ್ರತಿಷ್ಟಿತ DVS ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾಗ ವಾರ್ಷಿಕೋತ್ಸವದಲ್ಲಿ ಭಗವದ್ಗೀತ ಪಟಣ ಮಾಡಲು ಮುಸ್ಲಿಂ ವಿದ್ಯಾರ್ಥಿಗೆ ಅವಕಾಶ ಕೊಟ್ಟರೆಂದು ಇವರನ್ನ ಉಪನ್ಯಾಸಕ ಹುದ್ದೆಯಿಂದ ತೆಗೆಯುತ್ತಾರೆ.
   ಆ ಕಾಲದಲ್ಲೇ ತಮ್ಮ ವಿದ್ಯಾರ್ಥಿನಿಯನ್ನು ಪ್ರೇಮ ವಿವಾಹ ಆಗುತ್ತಾರೆ ಇವರ ವಿವಾಹಕ್ಕೆ ಸಹಾಯ ಮಾಡಿದವರು ಪಿ. ಪುಟ್ಟಯ್ಯನವರು.
  ಇವರ ಪುತ್ರಿ ಖ್ಯಾತ ಭರತನಾಟ್ಯ ಕಲಾವಿದೆ, ಅಳಿಯ ಚಲನಚಿತ್ರ ನಟ ಮನೋಜ್ ಗಾಗಿ ವೆಂಕಪ್ಪ ಗೌಡರು ಕೆ.ಟಿ.ಗಟ್ಟಿಯವರು ಬರೆದ #ಕಾಮು೯ಗಿಲು ಕಾದಂಬರಿ ಸಿನಿಮಾ ಮಾಡಲು ಇಷ್ಟಪಟ್ಟರು ಇದಕ್ಕೆ ಮುಖ್ಯ ಕಾರಣ ಇದು ನಮ್ಮ ಜಿಲ್ಲೆಯ ಅಂತರ್ಜಾತಿ ಪ್ರೇಮ ಪ್ರಕರಣ.
  ತೀರ್ಥಹಳ್ಳಿಯ #ರಾಮಚಂದ್ರಪುರ_ಮಠದ ಶಾಖಾ ಮಠದಲ್ಲಿ ಚಿತ್ರಿಕರಣದ ಮಹೂರ್ತ ಇಟ್ಟುಕೊಂಡಿದ್ದರು ಕಾಯ೯ಕ್ರಮಕ್ಕೆ ಆಹ್ವಾನಿಸಿದ್ದರು ಆದರೆ ಯಥಾ ಪ್ರಕಾರ ನಾನು ಗೈರಾಗಿದ್ದೆ.
  ಮಹೂರ್ತ ಮುಗಿಸಿ ವೆಂಕಪ್ಪ ಗೌಡರು ನಮ್ಮ ಮನೆಗೆ ಬಂದಾಗ ಅವರು ಸಾಹಿತಿಯಿಂದ ಸಿನಿಮಾ ನಿರ್ಮಾಪಕರಾಗಿ ಬದಲಾಗಿದ್ದಕ್ಕಾಗಿ ಅವತ್ತಿನ ಚಳಿಯ ಬೆಳದಿಂಗಳ ರಾತ್ರಿ ಕ್ಯಾಂಪ್ ಪೈರ್ ನೊಂದಿಗೆ ಸಂತೋಷ ಕೂಟ ವ್ಯವಸ್ಥೆ ಮಾಡಿದ್ದೆ.
  ತೀವ್ರ ಚಳಿಯ ಆ ದಿನ ಕ್ಯಾಂಪ್ ಪೈರ್ ನ ಬೆಚ್ಚಗಿನ ವಾತಾವರಣ ಗೌಡರಿಗೆ ಹಿತ ತಂದಿತ್ತು, ತಮ್ಮ ಚಲನ ಚಿತ್ರದ ಮಹೂರ್ತದ ಯಶಸ್ಸು, ಚೈನ್ ಸ್ಮೋಕಿಂಗ್ ಮತ್ತು ವಿಸ್ಕಿ ಅವರಿಗೆ ಜೋಷ್ ತಂದಿತ್ತು ಅವರು ಕಾರ್ಮುಗಿಲು ಕಾದ೦ಬರಿ ಬಗ್ಗೆ ಅದರ ವಸ್ತು, ಘಟನೆ ವಿವರಿಸುತ್ತಿದ್ದರು ನನ್ನ ಗೆಳೆಯರೆಲ್ಲ ಆಸಕ್ತಿಯಿಂದ ಆಲೈಸುತ್ತಿದ್ದರು.
  ನಾನು ಹಳೆಯ ನೆನಪು ಯೋಚಿಸುತ್ತಾ ಮೌನವಾಗಿದ್ದೆ ಆಗ ವೆಂಕಪ್ಪ ಗೌಡರು ಏನು ಯೋಚಿಸುತ್ತಿದ್ದಿಯಾ ? ಅಂತ ಪ್ರಶ್ನಿಸಿದಾಗ ಹೇಳಿದೆ.
  ಗೌಡರೆ, ನಾವೆಲ್ಲ ಪ್ರಾಥಮಿಕ ಶಿಕ್ಷಣ ಮಾಡುವ ಕಾಲದಲ್ಲಿ ನಮ್ಮ ಜಿಲ್ಲೆಯ ಹೊಸನಗರದ ಹವ್ಯಕರ ಮಠದಲ್ಲಿ ನಡೆದ ಘಟನೆ ಇದು,  ವಿದವೆಯ ಪ್ರಾಯದ ಮಗಳ ಮೇಲೆ ಮಠದ ಪ್ರಮುಖರ ದುಷ್ಟ ಕಣ್ಣು ಬಿದ್ದಾಗ ಅವರ ವಿಷವರ್ತುಲದಲ್ಲಿ ಸಿಕ್ಕಿಬಿದ್ದ ವಿದವೆ ತಾಯಿ ಮಗಳನ್ನು ಕಾಪಾಡಲು ಅವಳನ್ನು ಪ್ರೀತಿಸುವ ಮಠದ ಕುದುರೆ ಪಾಲನೆ ಮಾಡುತ್ತಿದ್ದ ಮುಸ್ಲಿ೦ ಕುಟುಂಬದ ಎರಡನೇ ಪುತ್ರನೊಂದಿಗೆ ಪರಾರಿ ಆಗಲು ಪರೋಕ್ಷವಾಗಿ ಸಹಕರಿಸುತ್ತಾಳೆ.
  ಯುವ ಪ್ರೇಮಿಗಳು ಸೈಕಲ್ ಮೇಲೆ ಹೊಸನಗರದಿಂದ ಸಾಗರಕ್ಕೆ ಬಾಡಿಗೆ ಸೈಕಲ್ ಮೇಲೆ ಹೋಗಿ ಸಾಗರದಿಂದ ರೈಲಿನಲ್ಲಿ ಮದ್ರಾಸ್ ಗೆ ಪರಾರಿ ಆಗುತ್ತಾರೆ, ಪ್ರಿಯತಮೆಗೂ ಪ್ಯಾಂಟ್ ಶರ್ಟ ಹಾಕಿದ್ದರಿಂದ ಯಾರಿಗೂ ಗೊತ್ತಾಗುವುದಿಲ್ಲ.
  ಇದರಿಂದ ರೋಸಿ ಹೋದ ಮಠದ ಗ್ಯಾಂಗ್ ಸರ್ಕಾರದ ಉನ್ನತ ಪೋಲಿಸ್ ಅಧಿಕಾರಿಗಳಿಗೆ, ಮಂತ್ರಿಗಳಿಗೆ ಒತ್ತಡ ತರುತ್ತಾರೆ, ಪ್ರಜಾವಾಣಿಯಂತ ಆ ಕಾಲದ ಪ್ರಭಾವಿ ಮಾದ್ಯಮದಲ್ಲಿ ಸಣ್ಣ ಹಳ್ಳಿಯ ಪ್ರೇಮಿಗಳ ಕಥೆಯನ್ನು ರಾಜ್ಯದ ದೊಡ್ಡ ಸಮಸ್ಯೆ ಎಂಬಂತೆ ಬಿಂಬಿಸಿ ದಾರಾವಾಹಿಯಂತೆ ಸರಣಿ ವರದಿ ಮಾಡಿಸುತ್ತಾರೆ.
  ಪೋಲಿಸರು ಮದ್ರಾಸಿನಲ್ಲಿ ಅಡಗಿದ್ದ ಪ್ರೇಮಿಗಳನ್ನ ಹಿಡಿದು ತಂದು ಈ ನೈಜ ಘಟನೆಯ ಹೀರೋನನ್ನು ಬಂದಿಸುತ್ತಾರೆ, ಪ್ರೇಮಕಥಾ ನಾಯಕಿಯನ್ನು ಬಲವಂತವಾಗಿ ಮಠದ ಕಾಮುಕ ಮುಂದಾಳುಗಳಿಗೆ ಒಪ್ಪಿಸುತ್ತಾರೆ, ಇದನ್ನೇ ಆದರಿಸಿ ಕೆ.ಟಿ.ಗಟ್ಟಿ ಕಾಮು೯ಗಿಲು ಕಾದಂಬರಿ ಬರಿಯುತ್ತಾರೆ ಪ್ರಜಾವಾಣಿ ದೀಪಾವಳಿ ಸಂಚಿಕೆಯ ಕಥಾ ಸ್ಪರ್ದೆಯಲ್ಲಿ ಪ್ರಥಮ ಬಹುಮಾನ ಬರುತ್ತದೆ ಮತ್ತು ಪ್ರಜಾವಾಣಿ ದಿನಪತ್ರಿಕೆಯಲ್ಲಿ ದಾರಾವಾಹಿ ಆಗಿ ಪ್ರಕಟ ಆಗುತ್ತದೆ ಅಂದಾಗ ಗೌಡರು ನೀನು ಹೇಳಿದ್ದು ಸರಿ ಅನ್ನುತ್ತಾರೆ.
  ನಮ್ಮ ತಂದೆ ಮತ್ತು ಅವರ ಗೆಳೆಯರು ಇದನ್ನು ರಸವತ್ತಾಗಿ ಮಾತಾಡುತ್ತಿದ್ದದ್ದು ನಾನು ಗಮನಿಸುತ್ತಿದ್ದೆ, ಆಗ ಆನಂದಪುರಂ ನಲ್ಲಿ ಹುಚ್ಚಾಚಾರ್ ಎಂಬ ನಿವೃತ್ತ ಸೈನಿಕರು (ಬಾಂಗ್ಲಾ ಯುದ್ಧದಲ್ಲಿ ಕಾಲಿಗೆ ಗುಂಡು ಬಿದ್ದು ಕುಂಟುತ್ತಿದ್ದರು) ಪ್ರಜಾವಾಣಿ ಏಜೆಂಟರು ಅವಾಗ ಆನಂದಪುರಂಗೆ ಪ್ರಜಾವಾಣಿಯ 5 ಪ್ರತಿ ಬರುತ್ತಿತ್ತು.
  ಆಗ ಗೌಡರಿಗೆ ನಾನು ಹೇಳಿದ್ದು ಸಿನಿಮಾದ ಹೀರೋ ನಿಮ್ಮ ಅಳಿಯ ಆದರೆ ನಿಜವಾದ ಕಥಾನಾಯಕ ನಮ್ಮ ಊರಲ್ಲಿದ್ದಾನೆ ಅಂದಾಗ ಗೌಡರು ನಂಬಲಿಲ್ಲ ನನ್ನ ಶಿಷ್ಯರನ್ನು ಕಳಿಸಿ ನಿಜ ಹೀರೋನನ್ನ ಗೌಡರ ಎದರು ಹಾಜರು ಪಡಿಸಿದೆ.
  ಗೌಡರ ಎಲ್ಲಾ ಪ್ರಶ್ನೆಗೆ ಸ್ವಲ್ಪ ಚಾರ್ಜ್ ಆಗಿದ್ದ ಹೀರೋ ಉತ್ತರಿಸಿದಾಗ ಗೌಡರು ಒಪ್ಪಿಕೊಂಡರು.
  ನಮ್ಮ ಊರಿನ ಬಾಲ್ಯದಲ್ಲಿ ನಮ್ಮನ್ನೆಲ್ಲ ಎತ್ತಿ ಆಡಿಸಿದ ನಮ್ಮ ತಾಯಿಯ ಖಾಸಾ ಶಿಷ್ಯೇ ಬೀಬಕ್ಕನ ತಂಗಿ ಗಂಡನಾದ  ಹಯಾತ್ ಸಾಬರೇ ಈ ಕಥಾನಾಯಕ ಆದರೆ ಅವರಿಗೆ ಅವರ ಜೀವನ ವೃತ್ತಾಂತವೇ ಸಿನಿಮಾ ಆಗಿದ್ದು ಗೊತ್ತಾಗಲಿಲ್ಲ ಅವರು ಅದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಲಿಲ್ಲ.
  ಅವರ ಕಿರಿಯ ಮಗ ಮತ್ತು ನನ್ನ ಗೆಳೆಯರು ಮಾತ್ರ ಇದರಿಂದ ಆಶ್ಚಯ೯ ಪಟ್ಟರು.
  ಹೀಗೆ ಕೆ.ಟಿ.ಗಟ್ಟಿಯವರು ಬರೆದ ಕಾರ್ಮುಗಿಲು ಕಾದಂಬರಿ ಸಿನಿಮಾ ಆಯಿತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...