ಭಾಗ - 2 , ಸಾತ್ವಿಕ ಜೀವನ, ಸಮಾಜವಾದಿ ಚಿಂತನೆಯ, ಸವ೯ ಧರ್ಮ ಸಹಿಷ್ಣುತೆಯ ಅಜಾತ ಶತ್ರು ಪಿ.ಪುಟ್ಟಯ್ಯ ಶಾಂತವೇರಿ ಗೋಪಾಲಗೌಡರ ಜೀವನದ ನಡೆ ನುಡಿಯ ಕೊನೆಯ ತಂತು ಆಗಿದ್ದಾರೆ.
#ಪಿ_ಪುಟ್ಟಯ್ಯ
#ಒಂದು_ಕಾಲದಲ್ಲಿ_ಇವರ_ಪ್ರಕೃತಿ_ಮುದ್ರಣಾಲಯ_ಅನುಭವ_ಮಂಟಪದಂತೆ_ಆಗಿತ್ತು.
#ಶಿವಮೊಗ್ಗ_ಜಿಲ್ಲೆಯ_ಹಿರಿಯ_ಸಮಾಜವಾದಿಗಳು.
#ಮಣಿಪಾಲ್_ಸಮೀಪದ_ಪೆರ್ಡೂರಿಂದ_ಸಾಗರಕ್ಕೆ_1946ರಲ್ಲಿ_ಬಂದವರು
#ಮಲ್ನಾಡಳ್ಳಿ_ಮುಂದಿನ_ಸ್ವಾಮಿಗಳು_ಎಂದೆ_ಜನರ_ಬಾವನೆಯಲ್ಲಿದ್ದವರು.
#ಸಾಗರ_ಪಟ್ಟಣ_1946ರಿಂದ_1960ರ_ತನಕ_ಹೇಗಿತ್ತು.
#ಭಾಗ_2.
ನಾನು ಪುಟ್ಟಯ್ಯನವರನ್ನು ಮೊದಲು ನೋಡಿದ್ದು ಸಾಗರದ ನ್ಯಾಯದ ತಕ್ಕಡಿ ಸಂಪಾದಕರಾಗಿದ್ದ ತೀನಾ ಶ್ರೀನಿವಾಸರನ್ನು (ನಂತರ ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರು, ಸಾಗರ ನಗರಸಭೆ ಅಧ್ಯಕ್ಷರೂ ಆಗಿದ್ದ) ಜಮೀಲ್ ಎಂಬ ಸಬ್ ಇನ್ಸ್ಪೆಕ್ಟರ್ ಹಲ್ಲೆ ಮಾಡಿದಾಗ ನಾನು,ಶಿವಾನಂದ ಕುಗ್ವೆ ಮತ್ತು ಅದರಂತೆ ವಿಶ್ವನಾಥ ಗೌಡರು ಜೊತೆ ಇವರ ಅನುಭವ ಮಂಟಪ ಅರ್ಥಾತ್ ಪ್ರಕೃತಿ ಮುದ್ರಣಾಲಯ ನೋಡಿದ್ದು, ನಂತರ ಶಿವಮೊಗ್ಗ ಹೋದಾಗೆಲ್ಲ ಮೊದಲ ಬೇಟಿ ಇಲ್ಲಿಗೆ ನಂತರ ಬೇರೆಲ್ಲ ಕೆಲಸಕ್ಕೆ.
ನಾನು ಇವರ ಕಛೇರಿಯಲ್ಲೇ ಡಾ. ಕೋವೂರರ ಪವಾಡ ರಹಸ್ಯ, ಹೆಚ್.ಎನ್.ನರಸಿಂಹಯ್ಯರ ಆತ್ಮಚರಿತ್ರೆ, ಮನುಶಾಸ್ತ್ರದ ಕನ್ನಡ ಅನುವಾದ ಮುಂತಾದ ಅನೇಕ ಪುಸ್ತಕ ಇಲ್ಲಿಂದನೇ ಉಚಿತವಾಗಿ ಪಡೆದದ್ದು ಓದಿದ್ದು.
ಇವರ ಜೊತೆ ಹೋಟೆಲ್ ಗೆ ಹೋದವರಾರು ಬಿಲ್ ಕೊಡುವಂತಿಲ್ಲ ಆದರೆ ಅಧ್ಯಾಕೋ ಗೊತ್ತಿಲ್ಲ ನಾನು ಕೊಟ್ಟರೆ ಸುಮ್ಮನಾಗುತ್ತಾರೆ.
ಪ್ರತಿ ವರ್ಷ ಇವರ ಮರದ ಗುಜ್ ಹಲಸು ಕಳಿಸಿ ಕೊಡುತ್ತಾರೆ, ನನಗೆ ಉಡಲು ಅತಿ ಹೆಚ್ಚು ಪಂಚೆ ಖರೀದಿಸಿ ಕಳಿಸಿದವರು ಇವರು ಮಾತ್ರ.
ಯಾರ ವಿರುದ್ದವಾಗಿ, ದ್ವೇಷ, ಅಸೂಯೆ, ಬೈಯ್ಗುಳ ಯಾವತ್ತೂ ಇವರ ಜಮಾನದಲ್ಲಿ ಯಾರೂ ನೋಡಿಲ್ಲ.
ಸಾಗರದ ಪ್ರಥಮ ಸಾಮಿಲ್ ಪಟೇಲ್ ಸಾಮಿಲ್ ಇದರ ಮಾಲಿಕರ ಮಗ ಎಂ ಎಸ್.ರಾಮ್ ಜೀ ಪಟೇಲ್ ಪುಟ್ಟಯ್ಯರ ಕ್ಲಾಸ್ ಮೇಟ್.
ಸ್ಟಾತಂತ್ರ ಬಂದಾಗ ಒಮ್ಮೆ ಮತ್ತು ಮೈಸೂರು ಶ್ರೀಕಂಠದತ್ತ ಒಡೆಯರ್ ಹುಟ್ಟಿದ್ದಕ್ಕಾಗಿ ಸರ್ಕಾರ ಶಾಲೆಗಳಲ್ಲಿ ಲಾಡು ಹಂಚಿದ್ದರಂತೆ.
ಆಸ್ಪತ್ರೆ ರಸ್ತೆ ಡಬಲ್ ರೋಡ್ ಮಾಡಿದರು, ಸಾಗರ ಹೋಟೆಲ್ ಸರ್ಕಲ್ ನಿಂದ ಗಣಪತಿ ದೇವಸ್ಥಾನದ ತನಕ ಬರಲೊಂದು ಮಾರ್ಗ ಮತ್ತು ಹೋಗಲೊಂದು ಮಾರ್ಗ ಮಾಡಿದರೂ ಟ್ರಾಪಿಕ್ ಸಮಸ್ಯೆ ಸುದಾರಿಸದಿದ್ದರಿಂದ ರಿಂಗ್ ರೋಡ್ ನ್ಯೂ ಬಿ ಹೆಚ್ ರಸ್ತೆ ನಿರ್ಮಾಣ ಆಯಿತು ಕಾಮಗಾರಿ ಪ್ರಾರಂಭ ಆಗುವಾಗ ಶಾಸಕರು ಬದರಿನಾರಾಯಣ ಅಯ್ಯಂಗಾರರು ಮತ್ತು ಮೂಕಪ್ಪನವರು ಇದ್ದರು.
ಸಾಗರದ ಆಸ್ಪತ್ರೆ ಎದುರಿನ ಲಾಯರ್ ಅನಂತರಾಯರ ಹೆಂಚಿನ ಒಂದು ರೂಮು ಸೋಷಿಲಿಸ್ಟ್ ಪಾರ್ಟಿಯ ಮೊದಲ ಮತ್ತು ಅಂತಿಮ ಕಛೇರಿ ಆಗಿತ್ತು, ಅವಾಗ ಶಾಸಕರಾಗಿದ್ದ (1952) ಶಾಂತವೇರಿ ಗೋಪಾಲಗೌಡರು ಕೆಲವೊಮ್ಮೆ ಇಲ್ಲೇ ತಂಗುತ್ತಿದ್ದರಂತೆ.
ಸರ್ಕಾರದ ಪ್ರವಾಸಿ ಮಂದಿರ ಆಗ ಶಾಸಕರಿಗೆ ತಂಗಲು ಕೊಡುತ್ತಿರಲಿಲ್ಲವಂತೆ.
ಗೋಪಾಲ ಗೌಡರ ಹತ್ತಿರ ಸ್ವಂತ ವಾಹನ ಇರಲಿಲ್ಲ, ಚುನಾವಣೆ ಸಂದರ್ಭದಲ್ಲಿ ಡ್ರೈವರ್ ಶೇಖರ ಮತ್ತು ಡ್ರೈವರ್ ನರಸಿಂಹ ಎಂಬುವವರು ತರುತ್ತಿದ್ದ ಬಾಡಿಗೆ ಕಾರಿನಲ್ಲಿ ಪ್ರಚಾರಕ್ಕೆ ಹೋಗುತ್ತಿದ್ದರಂತೆ, ಆಗಿನ ಕಾರುಗಳು ಹ್ಯಾಂಡಲ್ ಹೊಡೆದು ಚಾಲು ಮಾಡುವ೦ತ ಟಾರ್ಪಲ್ ಮೇಲ್ಚಾವಣೆಯ ಕಾರುಗಳಂತೆ.
ಗೋಪಾಲಗೌಡರ ಮೊದಲ ಚುನಾವಣೆ ವೆಚ್ಚ ಐದು ಸಾವಿರ, ಎರಡನೆ ಚುನಾವಣೆಯಲ್ಲಿ ಏಳು ಸಾವಿರ ಅಂತೆ.
ಆಗ ಗೋಪಾಲಗೌಡರಿಗೆ ಪುಟ್ಟಯ್ಯರ ಅಣ್ಣ ಶೀನಣ್ಣ ಐದು ರೂಪಾಯಿ ಚುನಾವಣಾ ದೇಣಿಗೆ ನೀಡಿದ್ದರಂತೆ ಆಗ ಅದು ದೊಡ್ಡ ದುಡ್ಡಾಗಿತ್ತು.
ಗೋಪಾಲಗೌಡರಿಗೆ ದೊಡ್ಡ ದೇಣಿಗೆ ಹತ್ತು ರೂಪಾಯಿ ಅದು ಕೆಲ ವಕೀಲರು ನೀಡುತ್ತಿದ್ದಂತೆ.
ಪೆಟ್ರೋಲ್ ಬಂಕ್ ಸಾಲ, ಪ್ರಿಂಟಿಂಗ್ ಸಾಲಗಳನ್ನು ಆಗ ಗೋಪಾಲಗೌಡರಿಗೆ ಬರುತ್ತಿದ್ದ ಅತ್ಯಲ್ಪ ಶಾಸಕರ ವೇತನದಲ್ಲಿ ತೀರಿಸುತ್ತಿದ್ದರಂತೆ.
ಸಾಗರದಲ್ಲಿ ಗೋಪಾಲಗೌಡರಿಗೆ ಅತ್ಯಾಪ್ತರು ಎಸ್.ಎಸ್.ಕುಮಟಾ, ಸಾಗರ್ ಹೋಟೆಲ್ ಮಾಲಿಕರಾದ ಕಲ್ಕೂರ್, ಕಾರ್ ಡ್ರೈವರ್ ಗಳಾದ ಶೇಖರ ಮತ್ತು ನರಸಿಂಹ.
ಆಗ ಸಾಗರದಲ್ಲಿ ಶ್ರೀಮಂತ ಕುಟುಂಬಗಳು ಕೇವಲ ಕೆಲವೇ ಕೆಲವು,ಸೊಲಬಣ್ಣ ಶೆಟ್ಟರ ಕುಟುಂಬ, ರಟ್ಟೇಹಳ್ಳಿಯವರ ಕುಟುಂಬ, ಯಾಗೈನೇ ಶೇಷಗಿರಿಯವರ ಕುಟುಂಬ, ದಳವಾಯಿ ಕುಟುಂಬ ಮತ್ತು ಸೊರಬ ರಸ್ತೆಯಲ್ಲಿ ಹಿತ್ತಾಳೆ, ತಾಮ್ರದ ವ್ಯಾಪಾರಿ ರೆಹಮಾನ್ ಸಾಹೇಬರು ಇದ್ದರು.
ಸಾಗರದ ಸರಿ ಸುಮಾರು ಎಲ್ಲಾ ಕಟ್ಟಡ ಆಗ ನಿರ್ಮಿಸಿದವರು ಸಾಗರದ ಕ್ರಿಶ್ಚಿಯನ್ ಗಾರೆ ಮೇಸ್ತ್ರಿಗಳಂತೆ.
ಅಹಮದ್ ಆಲಿ ಖಾನ್ ಸಾಹೇಬರು ಪ್ರಾಮಾಣಿಕರು ಶಿಸ್ತಿನ ಮನುಷರು ಎಂಬ ಪ್ರತೀತಿ ಸಾಗರ ಪಟ್ಟಣದಲ್ಲಿತ್ತು.
ಕುರುಬರ ಲಿಂಗಪ್ಪ ಮತ್ತು ಲ್ಯಾಂಡ್ರಿ ಬೋಜಪ್ಪನವರು ಆಗ ಪೈಲ್ವಾನರು ಅವರ ಹವಾ ಜೋರಿತ್ತು.
ಪ್ರತಿ ವರ್ಷ ದಸರಾದಲ್ಲಿ ಪ್ರವಾಸಿ ಮಂದಿರದ ಪಕ್ಕದ ಮೈದಾನದಲ್ಲಿ ಹೊರ ಜಿಲ್ಲೆಗಳಿಂದ ಪೈಲ್ವಾನರು ಕುಸ್ತಿ ಪಂದ್ಯಾವಳಿಗೆ ಬರುತ್ತಿದ್ದರು.
ಟಿ.ಡಿ.ಕೆ. ಪಂಡಿತರ ತಂದೆ ದೇವ ಪಂಡಿತರು ಆ ಕಾಲದಲ್ಲಿ ಲಾರಿ ಮಾಲಿಕರು, ಭದ್ರಾವತಿಗೆ ಚಾರ್ ಕೋಲ್ ಮತ್ತು ಬೆಂಗಳೂರಿನ ಪ್ಲೇವುಡ್ ಪ್ಯಾಕ್ಟರಿಗೆ ಮುಳುಗಡೆ ಪ್ರದೇಶದ ಕೂಪಿನಿಂದ ಮಾವಿನ ಮರ ಸಾಗಿಸುತ್ತಿದ್ದರು, ದೇವ ಪಂಡಿತರು ತುಂಬಾ ಶಿಸ್ತಿನ ವ್ಯವಹಾರಸ್ಥರು, ಟಿಡಿಕೆ ಪಂಡಿತರು ಆರಂಭದಿಂದ ಕಾಂಗ್ರೇಸ್ ಪಕ್ಷ.
ಆಗ ಜನಸಂಘ ಪಕ್ಷ ದೀಪದ ಗುರುತಿನಲ್ಲಿ ಚುನಾವಣೆಗೆ ಸ್ಪರ್ದಿಸುತ್ತಿತ್ತು.
ಸಾಹಿತಿ ವಿಲಿಯಂರ ತಾಯಿ ಪುಟ್ಟಯ್ಯನವರಿಗೆ ಶಿಕ್ಷಕಿ ಆಗಿದ್ದರಂತೆ.
ಈಗ ಪಿ.ಪುಟ್ಟಯ್ಯ ಶಿವಮೊಗ್ಗದ ಮಿಷನ್ ಕಂಪೌಂಡ್ ನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ, ಮೊದಲ್ಲಿನಿಂದಲೂ ಸಸ್ಯಹಾರಿಗಳಾದ ಇವರು ಬೆಳಿಗ್ಗೆ ಇಡ್ಲಿ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಹಾಲು ಅನ್ನ ಅಥವ ಮೊಸರು ಅನ್ನ ಮಾತ್ರ, ಸ್ವತಃ ಅಡುಗೆ ಮಾಡಿ ಸೇವಿಸುತ್ತಾರೆ.
ಅನೇಕ ಅನಾಥ ಬೀದಿ ನಾಯಿಗಳನ್ನು ತಂದು ಸಾಕಿದ್ದಾರೆ, ಮನೆಯ ಸುತ್ತ ಕೈತೋಟ ಮಾಡಿದ್ದಾರೆ.
ಬೆಳಿಗ್ಗೆ ವಾಕಿಂಗ್ ಮಾಡುತ್ತಾರೆ, ಇವರ ಗೆಳೆಯರು ಇವರನ್ನು ನೋಡಲು ಇವರ ಮನೆಗೆ ಬರುತ್ತಾರೆ ಹೀಗೆ ಒಬ್ಬಂಟಿ ಆಗಿ ಜೀವನ ಕಳೆಯುತ್ತಿದ್ದಾರೆ.
(ಮುಕ್ತಾಯ)
ಲೇ: ಕೆ.ಅರುಣ್ ಪ್ರಸಾದ್.
Comments
Post a Comment