ಶುಚಿ-ರುಚಿಯ ಮಲೆನಾಡಿನ ಕಸಿ ಜೀರಿಗೆ ಮಾವಿನ ಉಪ್ಪಿನಕಾಯಿ ಇವರಲ್ಲಿ ಮಾರಾಟಕ್ಕೆ ಇದೆ, ಉಪ್ಪಿನಕಾಯಿ ಪ್ರಿಯರು ಇವರನ್ನು ಸಂಪರ್ಕಿಸಿ ಖರೀದಿಸಬಹುದು, ಸೀಮಿತ ಪ್ರಮಾಣದಲ್ಲಿ ತಯಾರಿಸಿದ್ದಾರೆ ಆದಷ್ಟು ಬೇಗ ಖರೀದಿಸಿ
#ಈ_ವರ್ಷದ_ಮಾವಿನ_ಮಿಡಿ_ಸೀಸನ್_ಮುಗಿದಿದೆ.
#ಬಹು_ನೀರೀಕ್ಷೆಯ_ಮಿಡಿಗಳು_ಹವಾಮಾನ_ವೈಪರಿತ್ಯದಿಂದ_ಸಿಕ್ಕಲಿಲ್ಲ
#ಉಪ್ಪಿನಕಾಯಿ_ತಯಾರಕರಲ್ಲಿ_ಉಪ್ಪಿನಕಾಯಿ_ಸಿಗುತ್ತದೆ.
#ಸಾಗರ_ತಾಲ್ಲೂಕಿನ_ಶ್ರೀಮತಿ_ರಜನಿಮಂಜುನಾಥರಲ್ಲಿ_ಜೀರಿಗೆ_ಅಪ್ಪೆಮಿಡಿ_ಮಾರಾಟಕ್ಕಿದೆ.
ಸಾಗರ ತಾಲ್ಲೂಕಿನ ಉಳ್ಳೂರು ಗ್ರಾಮ ಪಂಚಾಯಿತಿಯ ಕಲ್ಲುಕೊಪ್ಪದ ಶ್ರೀಮತಿ ರಜನಿ ಮಂಜುನಾಥರು ಪ್ರತಿ ವರ್ಷ ಕಸಿ ಅಪ್ಪೆಮಿಡಿ ಉಪ್ಪಿನ ಕಾಯಿ ಸೀಮಿತ ಪ್ರಮಾಣದಲ್ಲಿ ತಯಾರಿಸಿ ಮಾರುತ್ತಾರೆ.
ಈ ವರ್ಷ ಕೂಡ 5 kg - 1 kg - ಮತ್ತು ಅರ್ಧ ಕೆಜಿ ಕ್ಯಾನ್ ಗಳಲ್ಲಿ ಜೀರಿಗೆ ಅಪ್ಪೆಮಿಡಿ ಉಪ್ಪಿನ ಕಾಯಿ ಮಾರಾಟಕ್ಕೆ ಇಟ್ಟಿದ್ದಾರೆ ಒಂದು ಕೆ.ಜಿ.ಗೆ 550 ರೂಪಾಯಿ.
ಶುಚಿ-ರುಚಿಯಾಗಿ ಇವರು ತಯಾರಿಸಿದ ಜೀರಿಗೆ ಉಪ್ಪಿನಕಾಯಿ ನಾನು ಪ್ರತಿ ವರ್ಷ ಖರೀದಿಸಿ ಬಳಸುತ್ತೇನೆ.
ಇವರ ಪತಿ AC ಮಂಜುನಾಥ ನರ್ಸರಿ ಮಾಡಿ ಸಸಿ ಮಾರಾಟ ಮಾಡುತ್ತಾರೆ, ಕಸಿ ಕಟ್ಟುವುದರಲ್ಲಿ ಇವರು ತುಂಬಾ ಅನುಭವಿಗಳು, ಇವರದೇ ಸ್ವಂತ ಕಸಿ ಮಾವಿನ ಮಿಡಿ ತೋಟ ಮಾಡಿದ್ದಾರೆ, ಜನಪರ ಹೋರಾಟಗಾರರೂ ಆಗಿದ್ದಾರೆ.
ಅನೇಕರು ಉಪ್ಪಿನಕಾಯಿಗೆ ನನ್ನ ಸಂಪರ್ಕಿಸುವವರಿಗೆ ಈ ಮಾಹಿತಿ ಉಪಯುಕ್ತವಾದೀತೆಂದು ಬಾವಿಸುತ್ತೇನೆ.
Comments
Post a Comment