Blog number 845.AAC BRICKS, ಆಟೋ ಕ್ಲೇವಡ್ ಏರೇಟೆಡ್ ಕಾಂಕ್ರಿಟ್ ಬ್ರಿಕ್ಸ್, ಲೈಟ್ ವೈಟ್ ಬ್ರಿಕ್ಸ್ ಎನ್ನುವ ಅದುನಿಕ ತಂತ್ರಜ್ಞಾನದ ಇಟ್ಟಿಗೆಗಳಿಂದ ಶೀಘ್ರ ಕಟ್ಟಡ ನಿರ್ಮಾಣ.
#AAC_BRICKS.
#ಶೀಘ್ರ_ಮತ್ತು_ಸುಲಭ_ನಿಮಾ೯ಣಕ್ಕೆ_ಹೊಸ_ತಂತ್ರಜ್ಞಾನದ_ಹಗುರ_ಇಟ್ಟಿಗೆ
#ಇದನ್ನ_ಕಟ್ಟಲು_ಸಿಮೆ೦ಟ್_ಮರುಳು_ಬೇಕಾಗಿಲ್ಲ
#ಪ್ರತಿ_ನಿತ್ಯ_ಕ್ಯೂರಿOಗ್_ಕೂಡ_ಇಲ್ಲ.
#ಪ್ರತಿ_ಚದರ_ಅಡಿಗೆ1kg_ಕಬ್ಬಿಣ_ಉಳಿತಾಯ
2 ಅಡಿ ಉದ್ದ 6 ಇoಚ್ ದಪ್ಪ 8 ಇಂಚ್ ಎತ್ತರದ ಇಟ್ಟಿಗೆ ತೂಕ ಕೇವಲ 12 KG ಇದಕ್ಕೆ 75 ರೂಪಾಯಿ ಅದೇ ನಮ್ಮಲ್ಲಿನ 2 ಜOಬಿಟ್ಟಿಗೆ ಈ ಒಂದು ಇಟ್ಟಿಗೆಗೆ ಸಮ, ಜಂಬಿಟ್ಟಿಗೆ 30 ರಿಂದ 35 kg ತೂಕ ಈ 12 kg ಒಂದು ಇಟ್ಟಿಗೆ ಜಾಗದಲ್ಲಿ 30 KG ಎರೆಡು ಇಟ್ಟಿಗೆ ಅಂದರೆ 60 ರಿಂದ 70 KG ಹೀಗಾದರೆ ಇಡಿ ಕಟ್ಟಡಕ್ಕೆ ಅನಾವಶ್ಯಕ ಬಾರ ಹೇರುತ್ತೇವೆ.
60 ರಿಂದ 70 ಇಂತಹ ಇಟ್ಟಿಗೆ ಕಟ್ಟಲು 1 ಬ್ಯಾಗ್ ಮೊಟಾ೯ರ್ ಸಾಕು ಇದಕ್ಕೆ 900 ಇದೆ, ಕ್ಯೂರಿ೦ಗ್ ಬೇಡ, ಸಿಮೆಂಟ್ ಮರಳು ಬೇಡ, ಗಮ್ ಹೇಗಿದೆ ಅಂದರೆ ಇಟ್ಟಿಗೆ ಪುಡಿಮಾಡಿದರೂ ಗಮ್ ಬಿಡುವುದಿಲ್ಲ.
ಪ್ಲಾಸ್ಟರ್ ಗೆ Eco plaster ಬ೦ದಿದೆ ಇದಕ್ಕೂ ಸಿಮೆoಟ್ ಮರಳು ಬೇಡ ಕ್ಯೂರಿOಗ್ ಬೇಡ ಲೈಟ್ವೈಟ್ ಬ್ರಿಕ್ ಗಳು ಏರು ಪೇರು ಇರುವುದಿಲ್ಲ ಹಾಗಾಗಿ 10 X 10 ಅಡಿ ಅಂದರೆ ಒಂದು squareಗೆ 4 Bag Eco Plaster ಸಾಕು ಒಂದು ಚೀಲ ಇಕೊ ಫ್ಲಾಸ್ಟರ್ ಗೆ ಅಂದಾಜು 300 ರೂಪಾಯಿ.
ತಕ್ಷಣ ಕೆಲಸ ಮತ್ತು ಸುಲಭ ನಿಮಾ೯ಣಕ್ಕೆ ಇದು ಅನುಕೂಲ, ಪಿಲ್ಲರ್ ಹಾಕಿ ಕಟ್ಟಿದ ಬಹುಮಹಡಿ ಕಟ್ಟಡಕ್ಕೆ ಇದು ಹೇಳಿ ಮಾಡಿಸಿದ್ದು. ಇದೇ ಇಟ್ಟಿಗೆ ಕಟ್ಟಿ ಪಿಲ್ಲರ್ ಇಲ್ಲದೆ ಆರ್ ಸಿ ಸಿ ಹಾಕಬಹುದಾ ಎಂಬ ಪ್ರಶ್ನೆಗೆ ಸಾಧ್ಯವಿಲ್ಲ.
ಹಗುರ ಇಟ್ಟಿಗೆಯಿ೦ದ ಕಟ್ಟಡ ಕಟ್ಟುವುದರಿಂದ ಒಂದು ಚದರ ಅಡಿಗೆ 1kg ಕಬ್ಬಿಣ ಬಳಕೆ ಕಡಿಮೆ ಆಗುತ್ತದೆ ಉದಾಹರಣೆ 10 ಚದರದ ಮನೆ ನಿಮಾ೯ಣದಲ್ಲಿ ಸುಮಾರು ಇವತ್ತಿನ ಬೆಲೆಯಲ್ಲಿ 85 ಸಾವಿರ ಉಳಿತಾಯ.
ಇದು 80 ವಷ೯ದ ಹಿಂದೆ ಜಮ೯ನ್ ದೇಶ ಕಂಡು ಹಿಡಿದು ಪೇಟೆಂಟ್ ಪಡೆದಿದ್ದರಿಂದ ಬೇರೆ ದೇಶದಲ್ಲಿ ತಯಾರಾಗುತ್ತಿರಲಿಲ್ಲ ಈಗ ಅವದಿ ಮುಗಿದಿದೆ ಭಾರತದಲ್ಲಿ ಪೂನಾದಲ್ಲಿ, ರಾಜ್ಯದ ತುಮಕೂರಿನಲ್ಲಿ ಪ್ಯಾಕ್ಟರಿ ಆಗಿದೆ.
ಶಿವಮೊಗ್ಗ ಮತ್ತು ಕೆಲವು ಜಿಲ್ಲೆಗೆ ಆಚ್ಯುತ್ ಎನ್ನುವವರು ಸಲಹೆ ಸರಬರಾಜುದಾರರಾಗಿದ್ದಾರೆ ಅವರ ಸಂಪಕ೯ ನಂಬರ್ -+919036095545
Comments
Post a Comment