#ಕೊರಾನಾ_ಮೊದಲ_ಅಲೆ_ಕಳೆದು_ಎರಡನೆ_ಅಲೆಯಲ್ಲಿ. #ಕೊರಾನಾಕ್ಕೆ_ಹೆದರದ_ಪೋಲಿಸರಿಗೆ_ಹೆದರುವ_ಮತ್ತು_ಕೊರಾನಾ_ಎಲ್ಲಿ_ಎನ್ನುವ_ನನ್ನ_ಊರ_ಜನ. ಕಳೆದ ವರ್ಷ ಮಾರ್ಚ ತಿಂಗಳಿಂದ ಕೊರಾನಾ ಮೊದಲ ಅಲೆಯಿಂದ ಇವತ್ತಿನವರೆಗೆ ಆಗುತ್ತಿರುವ ಸಾವು ನೋವುಗಳು, ಅವರ ಕುಟುಂಬದ ದುಃಖ ದುಮ್ಮಾನಗಳು ನಿತ್ಯ ನೋಡುತ್ತಾ ಕುಳಿತಂತೆ ಇವತ್ತಿನ ಬೆಳಿಗ್ಗೆ ಕೂಡ ಕುಳಿತಿದ್ದಾಗಲೆ ಬೆಂಗಳೂರಿನ ಸಂಬಂದಿಕ ಮಹಿಳೆ ಒಬ್ಬರು ಕೊರಾನಾದಿಂದ ಮೃತರಾದ ಸುದ್ದಿ ಬಂದಿತು ಅವರ ಮಗನಿಗೆ ಸಂಪ್ರದಾಯದಂತೆ ಸಂತಾಪ ಕಳಿಸಿದೆ. ಆಗಲೇ ಮನೆಯ ಗೇಟಿನ ಎದರು ವಕ್೯ ಶಾಪ್ ಮಾಲಿಕರು ಕುತ್ತಿಗೆಗೆ ಮಾಸ್ಕ್ ಸಿಗಿಸಿಕೊಂಡು ಕಾರಿಂದ ಇಳಿದರು, ಗೇಟ್ ತೆರೆಯಲು ಪ್ರಯತ್ನಿಸಿ ಅದು ಬೀಗ ಹಾಕಿದ್ದು ನೋಡಿ, ಬೀಗ ತೆರೆಯಲು ಹೇಳಿದರು ನಾನು ಬೀಗ ತೆರೆಯಲಾರದ ಬಗ್ಗೆ ವಿವರಿಸಿ ಅವರ ಬಿಲ್ ನ್ನು ಗೇಟಿಗೆ ಅಳವಡಿಸಿರುವ ಅಂಚೆ, ವೃತ್ತಪತ್ರಿಕೆ ಇಡುವ ಪೈಪ್ ನಲ್ಲಿ ಇಡಲು ಹೇಳಿದೆ ಇದು ಅವರಿಗೆ ಪಥ್ಯ ಆಗಲಿಲ್ಲ ಆಗ ಅವರು ಕೊರಾನಾ ಪರಾನಾ ಎಲ್ಲಾ ಸುಳ್ಳು ಅಂದರು!? ಸುಳ್ಳು ಹೇಗೆ ಮರಾಯರ ನಿಮ್ಮ ಕೇರಿಯಲ್ಲಿ ಮೊನ್ನೆ ಮಾಜಿ ಗ್ರಾ.ಪಂ.ಸದಸ್ಯೆ ಸತ್ತದ್ದಾದರು ಹೇಗೆ ಅಂದೆ, ಓ ಅದು ಬೇರೆ ಕಾಯಿಲೆ ಅಂದರು, ಆಕೆ ಪತಿ ಆಸ್ಪತ್ರೆಯಲ್ಲಿ ಈಗಲೂ ಇದ್ದಾರಲ್ಲ ಅಂದರೆ ಅದಕ್ಕೂ ಇನ್ನೆಂತದೋ ಕಾರಣ. ಹೀಗೆ ನಮ್ಮ ಹಳ್ಳಿಗಳಲ್ಲಿ ಇಡೀ ದೇಶದಲ್ಲಿ ಜನ ಸಾಯುತ್ತಿದ್ದರೂ, ನಿತ್ಯ ಲೆ...