Blog number 1059. ಸ್ವಾಮಿ ಶಿವಾನಂದರ ಬ್ರಹ್ಮಚರ್ಯವೇ ಜೀವನ ವೀರ್ಯ ನಾಶವೇ ಮೃತ್ಯು ಎಂಬ ಪುಸ್ತಕ ಯೌವನ ಪೂರ್ವದಲ್ಲಿ ಓದಿದರೆ ಜೀವನವೇ ಬದಲಾಗುವುದು ಶಥ ಸಿದ್ದ.
#ಈ_ಪುಸ್ತಕ_ಓದಿದ್ದೀರಾ ? #ಕನ್ನಡದಲ್ಲಿ_ಹನ್ನೊಂದು_ಸಾರಿ_ಮರುಮುದ್ರಣಗೊಂಡಿದೆ #ಈ_ಪುಸ್ತಕ_ಪ್ರಭಾವದಿಂದ_ನಾನೂ_ನನ್ನ_ಗೆಳೆಯ_ಸಂನ್ಯಾಸಿ_ಆಗಲು_ಹೊರಟಿದ್ದೆವು #ಕುಂದಾಪುರಕ್ಕೆ_ಹೋಗಿ_ಅಲ್ಲಿಂದ_ಅರಬ್ಬೀ_ಸಮುದ್ರದ_ತಟದಲ್ಲೇ_ನಡೆಯುತ್ತಾ_ಕನ್ಯಾಕುಮಾರಿ_ತಲುಪುವುದು #ಬ್ರಹ್ಮಚರ್ಯವೇ_ಜೀವನ_ವೀಯ೯_ನಾಶವೇ_ಮೃತ್ಯು_ಪುಸ್ತಕದ_ಪ್ರಭಾವ. #ಸ್ವಾಮಿ_ಶಿವಾನಂದರ_ಈ_ಪುಸ್ತಕ_ಓದಿದವರ_ಜೀವನ_ಕ್ರಮವೇ_ಬೇರೆ. ಐದನೇ ತರಗತಿಯಿಂದಲೇ ಯೋಗಾಸನ, ಈಜು, ಸೈಕಲ್ ಜೊತೆಗೆ ಸೂಯೋ೯ದಯಕ್ಕಿಂತ ಮೊದಲೇ ರನ್ನಿಂಗ್ ಶುರುವಾಗಿತ್ತು ಜೊತೆಗೆ ಸಮಾನ ಮನಸ್ಕ ನನಗಿಂತ ನಾಲ್ಕೈದು ವರ್ಷ ದೊಡ್ಡವನಾದ ಬಾಲ್ಯ ಗೆಳೆಯ ಪುಪ್ಪಾ ಆಲಿಯಾಸ್ ಸಿಲ್ವೆಸ್ಟರ್ ಡಿಕಾಸ್ಟ್. ಅವನೋ ಪುಸ್ತಕದ ಹುಳು, ಯಾವುದೇ ಪುಸ್ತಕ ಸಿಕ್ಕರೂ ಅದರ ಕೊನೆಯವರೆಗೆ ಓದದೇ ಕೈಬಿಡದವ, ಊಟ ತಿಂಡಿ ಕೂಡ ಅವನಿಗೆ ಪುಸ್ತಕದ ನಂತರದ ಅಧ್ಯತೆ. ನಾನು ಏಳನೆ ತರಗತಿಗೆ ಬರುವುದರಲ್ಲಿ ರಾಮಾಯಣ, ಮಹಾಭಾರತ ನಮ್ಮ ತಂದೆ ವೇದನಾರಾಯಣ ಭಟ್ಟರಿಂದ (ದ್ವಾರಕಾ ಸಂಶೋದಿಸಿದ S.R. ರಾವ್ ಇವರ ಮನೆಯಲ್ಲೆ ಜನಿಸಿದ್ದು) ತಂದು ಕೊಟ್ಟಿದ್ದರಿಂದ ಓದಿದ್ದೆ. ಇದರ ಮದ್ಯದಲ್ಲಿ ಈ ಪುಸ್ತಕ ಅದು ಹೇಗೋ ನಮಗೆ ಸಿಕ್ಕಿತ್ತು, ಇದನ್ನು ಎಷ್ಟು ಸಾರಿ ಓದಿದೆವು ಗೊತ್ತಿಲ್ಲ ಆದರೆ ಈ ಪುಸ್ತಕದ ಪ್ರಭಾವ ಇವತ್ತಿಗೂ ನನ್ನ ಜೀವನ ಮಾರ್ಗದ ಮಾರ್ಗದರ್ಶಿ ಆಗಿದೆ. ...