Blog number 1877. ಹಳೇ ಬೇರು ಹೊಸ ಚಿಗುರಿನ ಜುಗಲ್ಬಂದಿಯ ಗೆಳೆತನದ ಜಿಗಳೆಮನೆ ಗಣಪತಿ ಭಟ್ಟರು ಮತ್ತು ಚಿತ್ರ ಕಲಾವಿದ ನಿರಂಜನ ಕುಗ್ವೆ ಅವರನ್ನು ಜೈಲಿಗೆ ಕಳಿಸಿ ಹೆದರಿಸುವ ಪ್ರಯತ್ನದ ಪ್ರಕರಣಕ್ಕೆ ಆರು ವರ್ಷ ಆಯಿತು ಆದರೆ ಇವರಿಬ್ಬರೂ ಹೆದರಲೇ ಇಲ್ಲ....
#ಸುದ್ದಿಯನ್ನ_ಸುದ್ದಿ_ಮಾಡದ_ಈ_ಸುದ್ದಿ #ಆರು_ವರ್ಷದ_ಹಿಂದಿನ_ನೆನಪು #ಜಿಗಳೆಮನೆ_ಗಣಪತಿಭಟ್ಟರು_ಮತ್ತು_ನಿರಂಜನಕುಗ್ವೆ_ಜೈಲಿಗೆ_ಕಳಿಸಿದ_ಪ್ರಕರಣ #ಇವರದ್ದೇ_ಜಾತಿಯ_ಮಠದವರು_ಇವರಿಗೆ_ಜೈಲಿಗೆ_ಕಳಿಸಿದ್ದು #ಇವರು_ಮಾಡಿದ_ತಪ್ಪು_ಮಠದ_ಅತ್ಯಾಚಾರ_ಅನಾಚಾರ_ವಿರೋದಿಸುವ_ಕೆಲಸ. #ಇವರ_ವಿರುದ್ದ_ಹಾಕಿದ_ಕೇಸು_ನಿಲ್ಲುವುದಿಲ್ಲ_ಅಂತ_ಅವರಿಗೂ_ಗೊತ್ತು #ಆದರೆ_ವಿಚಾರಣೆಗೆ_ಮುನ್ನ_ಜೈಲಿಗೆ_ಕಳಿಸಿ_ಸೇಡು_ತೀರಿಸಿ_ಕೊಳ್ಳುವುದು. ಇವರಿಬ್ಬರ ಹೆಸರು ಗಣಪತಿ ಭಟ್ಟರು ಜಿಗಳೆಮನೆ ಮತ್ತು ನಿರಂಜನ ಕುಗ್ವೆ ಹಳೆ ಬೇರು ಹೊಸ ಚಿಗುರಿನಂತ ಇವರಿಬ್ಬರ ಜುಗಲ್ ಬಂದಿ. ಇವರಿಬ್ಬರನ್ನ ಪೇಸ್ ಬುಕ್ನಲ್ಲಿ ಮಾನಹಾನಿ ಮಾಡಿದ್ದಾರಂತ ದೂರು ನೀಡಿಸಿ, ಒಂದು ಶನಿವಾರ ಬಂದಿಸಿ ಭಾನುವಾರದ ಕೋಟ್೯ ರಜಾ ದಿನದ ಲಾಭ ಪಡೆದು ಜೈಲಿಗೆ ಕಳಿಸಿ ತಮ್ಮ ದುರುದ್ದೇಶ ಈಡೇರಿಸಿಕೊಂಡ ಈ ಪ್ರಕರಣದ ಹಿಂದೆ ಇವರ ಸಮಾಜದ ಮಠ ಒಂದರ ಕಾಣದ ಕೈಗಳು ಎನ್ನುವುದು ಬಹಿರಂಗ ಸತ್ಯ. ಹಿರಿಯರಾದ ಗಣಪತಿ ಭಟ್ಟರು RSS ಪ್ರಚಾರಕರಾಗಿದ್ದವರು, ತುತು೯ ಪರಿಸ್ಥಿತಿ ವಿರೋದಿಸಿ ಜೈಲಿಗೆ ಹೋದವರು, ಇವತ್ತಿನವರೆಗೆ ರಾಜಕೀಯಕ್ಕೆ ಬರದವರು, ಸಾತ್ವಿಕರು, ವರದಳ್ಳಿಯ ಪವಾಡ ಪುರುಷ ಶ್ರೀಧರ ಸ್ವಾಮಿಯವರ ಶಿಷ್ಯರು ಮತ್ತು ವರದಳ್ಳಿ ಶ್ರೀದರ ಆಶ್ರಮದ ಅತೀ ಸಮೀಪದ ಜಿಗಳೆ ಮನೆಯವರು. ನಿರಂಜನ ಕುಗ್ವೆ ಉದಯೋನ್ಮುಖ ವ್ಯಂಗ್ಯಚಿತ್ರಗಾರರು, ಕಲಾ ಶಿಕ್ಷಕರು ಸಾಗರ ಸಮೀಪದ ...