ಆ ಕಾಲದಲ್ಲಿ ಜನ ಅನಕ್ಷರಸ್ಥರು ಆದರೆ ಆ ಬೂತ ಮನೆಯ ಬಾಗಿಲ ಮೇಲೆ ಬರೆದ ನಾಳೆ - ಬಾ ಎಂಬ ವಾಕ್ಯ ನೋಡ ವಾಪಾಸ್ ಹೋಗುತ್ತಿದ್ದ ಅಕ್ಷರಸ್ಥ ಮುರ್ಖಬೂತ ಗ್ರಾಮೀಣ ಭಾಗದ ಜನರ ನೆಮ್ಮದಿ ಕೆಡಿಸಿತ್ತು.
#ಎಪ್ಪತ್ತರ_ದಶಕದಲ್ಲಿ_ನಾಳೆ_ಬಾ_ಬೂತದ_ಕಾಟ. #ಆಗ_ಎಲ್ಲರ_ಮನೆ_ಗೋಡೆ_ಬಾಗಿಲ_ಮೇಲೆ_ನಾಳೆ_ಬಾ_ಎಂಬ_ಬರಹ. #ಮಲೆನಾಡ_ಹಳ್ಳಿಗಳಲ್ಲಿ_ಆತಂಕದ_ರಾತ್ರಿಗಳು #ಅರವತ್ತರ_ದಶಕದಲ್ಲಿಯೂ_ಇದು_ಪ್ರಚಲಿತವಾಗಿತ್ತು #ಎಪ್ಪತ್ತರ_ದಶಕದ_ನಂತರ_ತೊಂಬತ್ತರ_ದಶಕದಲ್ಲಿ_ಬೆಂಗಳೂರು_ಸುತ್ತಮುತ್ತ. #ದೂರದ_ಮಲೇಷಿಯಾದಲ್ಲೂ_ಇಂತಹ_ಪ್ರಕರಣ. ಕಾಲ ಬದಲಾದಂತೆ ಆಚಾರ-ವಿಚಾರಗಳೂ ಬದಲಾಗುತ್ತದೆ ಆದರೆ ಮೂಡ ನಂಬಿಕೆಗಳು ಪುನಾರವರ್ತನೆಯಾಗುತ್ತಿರುವುದು ಮಾತ್ರ ವಿಚಿತ್ರ. 1990 ರಲ್ಲಿ ಬೆಂಗಳೂರು ಸುತ್ತಮುತ್ತ ಇದು ಸಾಮೂಹಿಕ ಸನ್ನಿಯಂತೆ ಎಲ್ಲರೂ ಅವರವರ ಮನೆ ಬಾಗಿಲು ಗೋಡೆ ಮೇಲೆ #ನಾಳೆ_ಬಾ ಅಂತ ಅವರವರ ಮಾತೃ ಬಾಷೆಯಲ್ಲಿ ಬರೆಯುತ್ತಿದ್ದರು ಇದಕ್ಕೆ ಕಾರಣ ಮಧ್ಯರಾತ್ರಿ ಬೂತ ಒಂದು ಬಂದು ಕುಟುಂಬದ ಅಥವ ಪರಿಚಿತರ ಧ್ವನಿಯಲ್ಲಿ ಕರೆಯುತ್ತದೆ ಬಾಗಿಲು ತೆಗೆದರೆ ಬಾಗಿಲು ತೆಗೆದವ ಮಟಾಷ್! ಅಂತೆ ಇದಕ್ಕೆ ಪರಿಹಾರ ಮಾತ್ರ ಒಂದೇ ಒಂದು ಬಾಗಿಲ ಮೇಲೆ #ನಾಳೆ_ಬಾ ಅಂತ ಬರೆಯುವ ಸುಲಭ ಉಪಾಯ. ಇದು ವಿಶ್ವದಲ್ಲಿ ಮೊದಲು ಗಮನಕ್ಕೆ ಬಂದದ್ದು ಮಲೇಷಿಯಾದಲ್ಲಿ. 1960 ರಲ್ಲಿ ನಮ್ಮ ಭಾಗದಲ್ಲಿ ಕಂಡು ಬಂದಿದ್ದು 1972-73ರಲ್ಲಿ ನಮ್ಮ ಊರುಗಳಲ್ಲಿ ಜನ ಭಯ ಪಡುವಂತೆ ಪಸರಿತ್ತು, ಆಗೆಲ್ಲ ಇದ್ದಿಲಲ್ಲಿ ಬಾಗಿಲ ಮೇಲೆ ಬರೆಯುತ್ತಿದ್ದರು ಆದರೆ ಬೂತದ ಪರಿಣಿತಿ ಹೊಂದಿದ ಯಾರೋ ಕತ್ತಲಲ್ಲಿ ಕಪ್ಪು ಇದ್ದಿಲಲ್ಲಿ ಬರೆದದ್ದು ಬೂತಕ್ಕೆ ಕಾಣುವುದಾದರೂ...