#ಹೋಳಿ_ಹಬ್ಬ_ಆಚರಣೆಗೆ_ಕಾರಣಗಳು #ಭಾರತದ_ಮಾಲೆ_ಮೂಲೆಯಲ್ಲಿ_ಆಚರಿಸುತ್ತಾರೆ #ದಕ್ಷಿಣ_ಭಾರತದಲ್ಲಿ_ಕಾಮದಹನವಾಗಿ_ಆಚರಣೆ #ವಸಂತಕಾಲದ_ಆಗಮನ_ಆಚರಿಸುವ_ಹಬ್ಬ #ಬಣ್ಣಗಳ_ಹಬ್ಬ #ಇದಕ್ಕೆ_ಪುರಾಣದ_ಕಥೆ_ಕಾರಣಗಳೂ_ಇದೆ. ಹೋಳಿ ಹಬ್ಬದ ಬಣ್ಣದ ಒಕುಳಿ ಎರೆಚಾಟ ವಿಜೃಂಬಣೆಯಿಂದ ಬಾಲರಿಂದ ವೃದ್ಧರವರೆಗೆ ಆಚರಿಸುತ್ತಾರೆ ಆದರೆ ಈ ಹಬ್ಬಕ್ಕೆ ಪೌರಾಣಿಕ ಹಿನ್ನೆಲೆಯ ಕಾರಣಗಳು ಇದೆ. ವಸಂತಕಾಲದ ಆಗಮನ ಸ್ವಾಗತಿಸುವ ಆಚರಿಸುವ ಹಿಂದೂ ದರ್ಮಿಯರ ಬಣ್ಣಗಳ ಹಬ್ಬವಾದ ಹೋಳಿ ಹಬ್ಬ ಭಾರತದ ಮೂಲೆ ಮೂಲೆಗಳಲ್ಲಿ ಆಚರಣೆಯಲ್ಲಿದೆ. ಭಗವಾನ್ ವಿಷ್ಣು ಭಕ್ತನಾದ ಪ್ರಹ್ಲಾದನನ್ನ ಹಿರಣ್ಯ ಕಶುಬಿ ನಿಂದ ನರಸಿಂಹ ರಕ್ಷಿಸಿದ ದಿನ. ಪ್ರಹ್ಲಾದನ ಚಿಕ್ಕಮ್ಮ ಹೋಲಿಕಾ ಯಾವ ಕಾರಣದಿಂದಲೂ ಅಗ್ನಿಯಿಂದ ದಹಿಸದ ಹೋಲಿ ಎಂಬ ವಸ್ತ್ರ ದೇವರಿಂದ ವರವಾಗಿ ಪಡೆದಿರುತ್ತಾಳೆ ಅವಳು ಮೋಸದಿಂದ ಪ್ರಹ್ಲಾದನನ್ನ ಚಿತೆಯ ಮೇಲೆ ತನ್ನ ಜೊತೆಗೆ ಕುಳ್ಳಿರಿಸಿ ಅವನನ್ನು ಅಗ್ನಿಗೆ ಆಹುತಿ ನೀಡಲು ಹವಣಿಸಿದಾಗ ದೇವತೆಗಳು ಜೋರಾಗಿ ಬಿರುಗಾಳಿ ಬೀಸಿ ಹೋಲಿಕಾ ಹೊದ್ದುಕೊಂಡಿದ್ದ ಅಗ್ನಿ ದಹಿಸದ ಮೇಲು ವಸ್ತ್ರ ಹಾರಿ ಬಂದು ಪ್ರಹ್ಲಾದನನನ್ನ ಮುಚ್ಚಿ ಬಿಡುತ್ತದೆ ಇದರಿಂದ ಪ್ರಹ್ಲಾದನಿಗೆ ಅಗ್ನಿಯಿಂದ ರಕ್ಷಣೆಯಾಗಿ ಹೋಲಿಕಾ ಅಗ್ನಿಗೆ ಆಹುತಿ ಆಗುವ ದಿನ. ಶಿವ ಮನ್ಮಥನ ದಹನ ಮಾಡಿದ ದಿನ ವರ್ಷಕ್ಕೊಮ್ಮೆ ಮನ್ಮಥ ಈ ದಿನ ಭೂಮಿಗೆ ಬರು...