#ಹೋಳಿ_ಹಬ್ಬ_ಆಚರಣೆಗೆ_ಕಾರಣಗಳು
#ಭಾರತದ_ಮಾಲೆ_ಮೂಲೆಯಲ್ಲಿ_ಆಚರಿಸುತ್ತಾರೆ
#ದಕ್ಷಿಣ_ಭಾರತದಲ್ಲಿ_ಕಾಮದಹನವಾಗಿ_ಆಚರಣೆ
#ವಸಂತಕಾಲದ_ಆಗಮನ_ಆಚರಿಸುವ_ಹಬ್ಬ
#ಬಣ್ಣಗಳ_ಹಬ್ಬ
#ಇದಕ್ಕೆ_ಪುರಾಣದ_ಕಥೆ_ಕಾರಣಗಳೂ_ಇದೆ.
ಹೋಳಿ ಹಬ್ಬದ ಬಣ್ಣದ ಒಕುಳಿ ಎರೆಚಾಟ ವಿಜೃಂಬಣೆಯಿಂದ ಬಾಲರಿಂದ ವೃದ್ಧರವರೆಗೆ ಆಚರಿಸುತ್ತಾರೆ ಆದರೆ ಈ ಹಬ್ಬಕ್ಕೆ ಪೌರಾಣಿಕ ಹಿನ್ನೆಲೆಯ ಕಾರಣಗಳು ಇದೆ.
ವಸಂತಕಾಲದ ಆಗಮನ ಸ್ವಾಗತಿಸುವ ಆಚರಿಸುವ ಹಿಂದೂ ದರ್ಮಿಯರ ಬಣ್ಣಗಳ ಹಬ್ಬವಾದ ಹೋಳಿ ಹಬ್ಬ ಭಾರತದ ಮೂಲೆ ಮೂಲೆಗಳಲ್ಲಿ ಆಚರಣೆಯಲ್ಲಿದೆ.
ಪ್ರಹ್ಲಾದನ ಚಿಕ್ಕಮ್ಮ ಹೋಲಿಕಾ ಯಾವ ಕಾರಣದಿಂದಲೂ ಅಗ್ನಿಯಿಂದ ದಹಿಸದ ಹೋಲಿ ಎಂಬ ವಸ್ತ್ರ ದೇವರಿಂದ ವರವಾಗಿ ಪಡೆದಿರುತ್ತಾಳೆ ಅವಳು ಮೋಸದಿಂದ ಪ್ರಹ್ಲಾದನನ್ನ ಚಿತೆಯ ಮೇಲೆ ತನ್ನ ಜೊತೆಗೆ ಕುಳ್ಳಿರಿಸಿ ಅವನನ್ನು ಅಗ್ನಿಗೆ ಆಹುತಿ ನೀಡಲು ಹವಣಿಸಿದಾಗ ದೇವತೆಗಳು ಜೋರಾಗಿ ಬಿರುಗಾಳಿ ಬೀಸಿ ಹೋಲಿಕಾ ಹೊದ್ದುಕೊಂಡಿದ್ದ ಅಗ್ನಿ ದಹಿಸದ ಮೇಲು ವಸ್ತ್ರ ಹಾರಿ ಬಂದು ಪ್ರಹ್ಲಾದನನನ್ನ ಮುಚ್ಚಿ ಬಿಡುತ್ತದೆ ಇದರಿಂದ ಪ್ರಹ್ಲಾದನಿಗೆ ಅಗ್ನಿಯಿಂದ ರಕ್ಷಣೆಯಾಗಿ ಹೋಲಿಕಾ ಅಗ್ನಿಗೆ ಆಹುತಿ ಆಗುವ ದಿನ.
ಶಿವ ಮನ್ಮಥನ ದಹನ ಮಾಡಿದ ದಿನ ವರ್ಷಕ್ಕೊಮ್ಮೆ ಮನ್ಮಥ ಈ ದಿನ ಭೂಮಿಗೆ ಬರುತ್ತಾನೆ ಎಂಬ ನಂಬಿಕೆಯ ಆಚರಣೆಯ ದಿನ.
ದಕ್ಷಿಣ ಭಾರತದಲ್ಲಿ ಇದನ್ನು ಕಾಮದಹನ ಹಬ್ಬ (ಕಾಮನ ಹಬ್ಬ) ವಾಗಿ ಆಚರಿಸುತ್ತಾರೆ ಇದಕ್ಕೆ ಪುರಾಣದ ಕಥೆ ಇದೆ...
ಯೋಗ ಮತ್ತು ಆಳವಾದ ಧ್ಯಾನದಲ್ಲಿ ಮಗ್ನನಾದ ಶಿವನನ್ನು ಜಗತ್ತಿಗೆ ತರಲು ಪಾರ್ವತಿದೇವಿ ವಸಂತ ಪಂಚಮಿಯಂದು ಕಾಮ ದೇವ ಎಂಬ ಪ್ರೀತಿಯ ದೇವರ ಸಹಾಯ ಪಡೆದುಕೊಳ್ಳುತ್ತಾಳೆ.
ಕಾಮ ದೇವ (ಮನ್ಮಥ) ಶಿವನ ಮೇಲೆ ಹೂ ಬಾಣಗಳನ್ನು ಹಾರಿಸುತ್ತಾನೆ ಇದರಿಂದ ಕೋಪಗೊಂಡ ಶಿವ ತನ್ನ ಮೂರನೆ ಕಣ್ಣನ್ನು ತೆರೆದು ಮನ್ಮಥನನ್ನ ದಹಿಸಿಬಿಡುತ್ತಾನೆ ಇದು ಮನ್ಮಥನ ಪತ್ನಿ ರತಿದೇವಿ ಮತ್ತು ಪಾರ್ವತಿದೇವಿಗೆ ಅಸಮದಾನ ಉಂಟಾಗುತ್ತದೆ.
ರತಿದೇವಿ 40 ದಿನ ಧ್ಯಾನ ತಪಸ್ಸುಗಳನ್ನು ಆಚರಿಸುತ್ತಾಳೆ ಇದರಿಂದ ಶಿವನ ಶಾಂತನಾಗಿ ಸಮಾದನ ಪಟ್ಟು ಪಂಚಮಿ ಹಬ್ಬದ 40ನೆ ದಿನ ಮನ್ಮಥನಿಗೆ ಪುನರ್ ಜನ್ಮ ನೀಡುತ್ತಾನೆ.
ಹೊಸದಾಗಿ ಮದುವೆ ಆದವರು ಹೋಳಿ ಆಚರಿಸುವುದಿಲ್ಲ ಮತ್ತು ಅತ್ತೆ ಸೊಸೆ ಹೋಲಿ ದಹನ ಒಟ್ಟಿಗೆ ನೋಡ ಬಾರದೆಂಬ ಆಚರಣೆ ಇದೆ.
ನವ ವಿವಾಹಿತರು ಪತ್ನಿಯ ಮನೆಯಲ್ಲಿ ಹೋಳಿ ಆಚರಿಸುತ್ತಾರೆ ಹೀಗೆ ಅನೇಕ ಆಚರಣೆ ನಂಬಿಕೆಯ ಹೋಳಿ ಹಬ್ಬಕ್ಕೆ ಪೌರಾಣಿಕ ಹಿನ್ನೆಲೆಗಳಿದೆ.
ಈಗಿನ ರಾಸಾಯನಿಕಯುಕ್ತ ಬಣ್ಣದ ಪುಡಿಗಳ ಬಳಕೆಯಿಂದ ಅನೇಕರು ಕಣ್ಣಿನ ಮತ್ತು ಚರ್ಮದ ವ್ಯಾದಿಯಿಂದ ಬಳಲುತ್ತಾರೆ.
Comments
Post a Comment