Blog number 2024. ಕೊರಾನಾ ನೆನಪುಗಳ ಡೈರಿ ಬಾಗ 7 ರಾಜ್ಯದಲ್ಲೆ ನಿತ್ಯ ಪ್ರಾರ್ಥನೆ ತಮ್ಮ ತಮ್ಮ ಮನೆಯಿಂದಲೇ ನಿರ್ವಹಿಸಲು ಸಾವ೯ಜನಿಕವಾಗಿ ವಿನಂತಿಸಿದ ಮೊದಲ ಮಸೀದಿ ಆನಂದಪುರಂ ಜಾಮೀಯ ಮಸೀದಿ
#ಕೊರಾನಾ_ನೆನಪುಗಳ_ಡೈರಿ_ಭಾಗ_7.
#ಲಾಕ್_ಡೌನ್_ಎರಡನೆ_ದಿನ_26_ಮಾರ್ಚ್_2020
#ಕೊರಾನಾ_ವೈರಸ್_ಹರಡದಂತೆ_ತಡೆಯಲು_ಸರ್ಕಾರದ_ನಿರ್ದೇಶನದಂತೆ
#ನಿತ್ಯದ_ಐದು_ಹೊತ್ತಿನ_ನಮಾಜ್_ಶುಕ್ರವಾರದ_ವಿಶೇಷ_ಪ್ರಾರ್ಥನೆ_ತಮ್ಮ_ತಮ್ಮ
#ಮನೆಯಿಂದಲೇ_ನಿರ್ವಹಿಸಲು_ಘೋಷಣೆ_ಮಾಡಿದ_ರಾಜ್ಯದಲ್ಲೇ_ಮೊದಲ_ಮಸೀದಿ
#ಆನಂದಪುರಂ_ಮಸೀದಿಯ_ಪ್ರಜ್ಞಾವಂತ_ಮುಸ್ಲಿಮ್_ಬಾಂದವರು
ದಿನಾಂಕ 26 - ಮಾರ್ಚ್-2020 ಗುರುವಾರ ಇಡೀ ದೇಶ ತಾನು ಘೋಷಿಸಿದ ಲಾಕ್ ಡೌನ್ ನ ಎರಡನೆ ದಿನ ನಮ್ಮ ಊರು ಆನಂದಪುರಂನ ಜಾಮೀಯ ಮಸೀದಿ ಕಮಿಟಿ ಕರೋನಾ ವೈರಸ್ ಹರಡದಂತೆ ತಡೆಯಲು ಸಕಾ೯ರದ ನಿದೇ೯ಶನದಂತೆ ಪ್ರತಿದಿನದ 5 ಹೊತ್ತಿನ ನಮಾಜ್ ಮತ್ತು ಶುಕ್ರವಾರದ ವಿಶೇಷ ಪ್ರಾಥ೯ನೆ ಮನೆಯಿಂದಲೇ ಮಾಡಬೇಕಾಗಿ ವಿನಂತಿಸಿತು.
ಸ್ವಯಂ ಆಗಿ ತನ್ನ ಸಮಾಜ ಬಾಂದವರಿಗೆ ಸರ್ಕಾರದ ನಿರ್ದೇಶನದಂತೆ ನಿತ್ಯದ 5 ಹೊತ್ತಿನ ಪ್ರಾರ್ಥನೆ ಮತ್ತು ಶುಕ್ರವಾರದ ವಿಶೇಷ ಪ್ರಾರ್ಥನೆ ತಮ್ಮ ತಮ್ಮ ಮನೆಯಲ್ಲೇ ನಿರ್ವಹಿಸಲು ಸಾವ೯ಜನಿಕವಾಗಿ ಮನವಿ ಮಾಡಿದ ರಾಜ್ಯದ ಮೊದಲ ಮಸೀದಿ ಕಮಿಟಿ ಎಂಬ ದಾಖಲೆ ಆಗಿತ್ತು.
ಆನಂದಪುರಂ ಜಾಮೀಯ ಮಸೀದಿ ವ್ಯಾಪ್ತಿ ವಿಸ್ತಾರ ದೊಡ್ಡದು ಸುಮಾರು ಎಂಟು ಮಸೀದಿಗಳು ಇದರ ವ್ಯಾಪ್ತಿಗೆ ಬರುತ್ತದೆ ಮುಂದೆ ಸರ್ಕಾರ ಆದೇಶ ನೀಡುವ ತನಕ ಇದು ಮುಂದುವರಿದಿತ್ತು.
ನಾಲ್ಕು ವರ್ಷದ ಹಿಂದಿನ ಈ ಘಟನೆ ಈ ವರ್ಷದ ಪವಿತ್ರ ರಮ್ಜಾನ್ ಹಬ್ಬದಲ್ಲಿ ನೆನಪಾಯಿತು.
Comments
Post a Comment