Blog number 2004. ಇವತ್ತಿನ ನನ್ನ ಅತಿಥಿ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರು (16- ಮಾರ್ಚ್- 2024 ಶನಿವಾರ)
#ಇವತ್ತಿನ_ಸಂಜೆ_ಮಾಜಿ_ಉಪಮುಖ್ಯಮಂತ್ರಿ_ಈಶ್ವರಪ್ಪನವರು_ನನ್ನ_ಅತಿಥಿ
#ಶಿವಮೋಗ್ಗ_ಲೋಕಸಭಾ_ಪಕ್ಷೇತರ_ಅಭ್ಯರ್ಥಿ
#ಯಡ್ಯೂರಪ್ಪ_ಮತ್ತು_ಈಶ್ವರಪ್ಪರ_ವೈಯಕ್ತಿಕ_ಬಿನ್ನಾಭಿಪ್ರಾಯ_ಬಗೆಹರಿಯಲಿ
#ಈಶ್ವರಪ್ಪನವರಿಗೆ_ದೊಡ್ಡ_ಸ್ಥಾನಮಾನ_ಲಭಿಸಲಿ_ಎಂದು_ಹಾರೈಸಿದೆ.
https://youtu.be/RZa99gChcKU?feature=shared
ಇವತ್ತು ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪನವರು ಸಾಗರ ತಾಲೂಕಿನ ವರದಳ್ಳಿ ಶ್ರೀಧರ ಆಶ್ರಮ ಮತ್ತು ಅನೇಕ ದೇವಾಲಯಗಳ ಸಂದರ್ಶಿಸಿ ಜೋಗ್ ಫಾಲ್ಸ್, ಸಾಗರ, ತ್ಯಾಗರ್ಥಿಗಳಲ್ಲಿ ಅವರ ಅಭಿಮಾನಿಗಳ ಸಭೆಯಲ್ಲಿ ಭಾಗವಹಿಸಿ ಶಿವಮೊಗ್ಗಕ್ಕೆ ಹಿಂದಿರುಗುವಾಗ ನಮ್ಮ #ಹೊಂಬುಜ_ಲಾಡ್ಜ್ ಗೆ ಬಂದಿದ್ದರು.
ಅವರಿಗೆ ನಮ್ಮ ಸಂಸ್ಥೆಯಿಂದ ಗೌರವಿಸಿ ನೆನಪಿನ ಕಾಣಿಕೆ ನೀಡಿ ಲೆಮನ್ ಚಹಾ ಮತ್ತು ಬಿಸ್ಕತ್ತು ನೀಡಿ ಸತ್ಕರಿಸಿದೆವು ಅವರ ಜೊತೆ ವಿದ್ವಾಂಸರಾದ ಪಾಂಡೆ, ಖ್ಯಾತ ವಕೀಲರಾದ ಅಶೋಕ್ ಭಟ್, ಸಾಗರದಿಂದ ಮಾಜಿ ನಗರಸಭೆ ಸದಸ್ಯರಾದ ಕೆ.ಎಲ್. ಮಂಜುನಾಥ, ಕೃಷ್ಣಪ್ಪ ಮತ್ತಿತರು ಬಂದಿದ್ದರು.
ಈಶ್ವರಪ್ಪನವರು ಈ ಬಾರಿಯ ಲೋಕ ಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ದಿಸುತ್ತಿದ್ದಾರೆ ಅವರಿಗೆ ಯಡ್ಯೂರಪ್ಪರ ಮೇಲಿನ ಅಸಮದಾನಕ್ಕೆ ಸಕಾರಣವೂ ಇದೆ ಜೊತೆಗೆ ಈಶ್ವರಪ್ಪರಿಗೆ ಬಿಜೆಪಿ ಪಕ್ಷದ ಅನೇಕ ನಾಯಕರ ಬೆಂಬಲ ಇರುವುದು ಸುಳ್ಳಲ್ಲ ನಮ್ಮಲ್ಲಿರುವಾಗಲೇ ಅನೇಕ ರಾಜ್ಯ ಮುಖಂಡರ ಪೋನ್ ಕರೆಗಳು ಅವರಿಗೆ ಬರುತ್ತಲೇ ಇತ್ತು.
ಈಶ್ವರಪ್ಪನವರ ಸ್ಪರ್ದೆ ಖಚಿತವಾ? ಕೊನೆಯ ಹಂತದಲಿ ರಾಜಿ ಕಬೂಲ್ ಆಗಬಹುದಾ? ಈಶ್ವರಪ್ಪನವರು ಮೋದಿ ವಿರುದ್ದ ಹೋಗುತ್ತಾರಾ? ಎಂಬ ಪ್ರಶ್ನೆಗಳೂ ಇರುವುದು ಸಹಜವೇ ಯಾಕೆಂದರೆ ಈಶ್ವರಪ್ಪನವರು ಬಿಜೆಪಿ ಅಡಿಪಾಯ ಹಾಕಿದ ತ್ರಿಮೂರ್ತಿಗಳಲ್ಲಿ ಒಬ್ಬರು ಇನ್ನಿಬ್ಬರು ಯಡೂರಪ್ಪ ಮತ್ತು ಡಿ.ಹೆಚ್.ಶಂಕರ ಮೂರ್ತಿಗಳು.
Comments
Post a Comment