Blog number 2010. ನನ್ನ ಪೂರ್ವಜರ ಅನುಗ್ರಹ ಮತ್ತು ದೇವರ ಕೃಪೆಯಿಂದ ಬುದ್ಧಗಯಾದಲ್ಲಿ ನನ್ನ ವಂಶದಲ್ಲಿ ಅಗಲಿದ ಹಿರಿಯರಿಗೆ ಪಿತೃತರ್ಪಣ ಅರ್ಪಿಸುವ ಕ್ಷಣಗಳಿಗೆ ಕಾಯುತ್ತಿದ್ದೇನೆ.
#ಬುದ್ದ_ಗಯಾದಲ್ಲಿ_ಪಿತೃ_ತರ್ಪಣ
#ಹನ್ನೆರೆಡು_ಪೂರ್ವಜರಿಗೆ
#ಹಿಂದೂ_ಧರ್ಮಿಯರು_ಒಂದು_ಬಾರಿ_ಆದರೂ_ಕಾಶಿ_ಗಯಾದಲ್ಲಿ
#ತಂದೆ_ತಾಯಿಯರಿಗಾಗಿ_ನೆರವೇರಿಸಲೇ_ಬೇಕಾದದ್ದು
#ನಮ್ಮನ್ನಗಲಿದ_ಹಿರಿಯರ_ಮಾರ್ಗದಲ್ಲಿ_ಬಾದಕಗಳಿದ್ದರೆ_ಅದನ್ನು_ಪರಿಹರಿಸಿ
#ಎನ್ನುವ_ಪ್ರಾರ್ಥನೆಯೇ_ಪಿತೃತರ್ಪಣ_ಪಿಂಡಪ್ರದಾನ
#ಬಿಹಾರದ_ಬುದ್ಧಗಯಾದಲ್ಲಿ_ರಾಮ_ತನ್ನ_ತಂದೆ_ದಶರಥನಿಗೆ_ಪಿತೃತರ್ಪಣ_ನೀಡುತ್ತಾನೆ
#ಶ್ರೀಕೃಷ್ಣ_ಧರ್ಮರಾಯನಿಗೆ_ಗಯಾದಲ್ಲಿಯೇ_ಪಿತೃತರ್ಪಣ_ಮಾಡಲು_ಮಾಗ೯ದರ್ಶನ_ಮಾಡುತ್ತಾನೆ
#ಹಾಗಾಗಿ_ಬುದ್ಧಗಯಾದಲ್ಲಿ_ಮಾಡುವ_ಪಿತೃತರ್ಪಣವೇ_ಶ್ರೇಷ್ಟ_ಎಂಬ_ನಂಬಿಕೆ
#ಇಲ್ಲಿಯೇ_ಗೌತಮ_ಬುದ್ಧನಿಗೆ_ಜ್ಞಾನೋದಯ_ಆಗಿದ್ದು
#ಇಲ್ಲಿ_ಸಾಕ್ಷತ್_ವಿಷ್ಣು_ಪಾದಗಳಿದೆ_ಎಂಬ_ಪ್ರತೀತಿ_ಹಿಂದೂ_ಧರ್ಮಿಯರಲ್ಲಿದೆ.
#ನನ್ನ_ಪೂರ್ವಜರಿಗೆ_ಪಿತೃತರ್ಪಣ_ಗಯಾ_ಮತ್ತು_ಕಾಶಿಯಲ್ಲಿ_ನೆರವೇರಿಸುವ_ಸಂಕಲ್ಪ_ನನ್ನದು
ಅನಾಥ ಶಿಶುವಾಗಿದ್ದ ನನ್ನ ತಂದೆಯನ್ನು ಸಾಕಿದ ಸಾಕು ತಾಯಿ ತಂದೆಯರಾದ ಅಬ್ಬಕ್ಕ ಮತ್ತು ಸುಬ್ಬಣ್ಣ ಆಚಾರ್ ಅವರಿಗೆ ಕಾಶಿ ಮತ್ತು ಗಯಾದಲ್ಲಿ ಪಿತೃತರ್ಪಣ ಮಾಡಬೇಕೆಂಬ ಇಚ್ಛೆ ನನ್ನ ತಂದೆಯದ್ದಾಗಿತ್ತು.
ನಮ್ಮ ತಂದೆಯನ್ನು ಇಡೀ ಭಾರತ ದೇಶದ ದರ್ಶನ ಮಾಡಿಸ ಬೇಕೆಂಬ ಆಸೆ ನನ್ನ ಮನಸ್ಸಲ್ಲಿ ಬಾಲ್ಯದಲ್ಲೇ ಮೂಡಿತ್ತು ಆದರೆ ನನ್ನ ದುರಾದೃಷ್ಟ ನಾನು ಜನಪರ ಹೋರಾಟ -ರಾಜಕಾರಣದಲ್ಲಿ ಸಕ್ರೀಯನಾಗಿದ್ದರಿಂದ ಅದು ಈಡೇರಲೇ ಇಲ್ಲ ಆ ಪಶ್ಚಾತ್ತಾಪ ನನಗೆ ಕಾಡುತ್ತಿದೆ.
ಅಗಲಿದ ಹಿರಿಯರನ್ನ ಅವರ ಪ್ರಾರಬ್ದ ಕರ್ಮದಿಂದ ಕಾಪಾಡು ಎನ್ನುವ ಪೂಜೆಯೆ ಪಿತೃ ಪೂಜೆ, ಅಗಲಿದ ಹಿರಿಯರ ಮಾರ್ಗದಲ್ಲಿ ಬಾದಕವಿದ್ದರೆ ಅದನ್ನು ಪರಿಹರಿಸಿ ಎನ್ನುವ ಪ್ರಾರ್ಥನೆಯೇ ಪಿಂಡ ಪ್ರಧಾನ ಇದನ್ನು ಹಿಂದೂ ಧರ್ಮದ ಶೂದ್ರ - ವೈಶ್ಯ-ಕ್ಷತ್ರಿಯ-ಬ್ರಾಹ್ಮಣರಾದಿಯಾಗಿ ಎಲ್ಲರೂ ಜೀವನದಲ್ಲಿ ಒಮ್ಮೆಯಾದರೂ ನೆರವೇರಿಸಲೇ ಬೇಕು
ಈಗ ನನ್ನ ತಂದೆ ತಾಯಿಯರು ಸೇರಿ 12 ತಲೆಮಾರಿನವರಿಗೆ ಬಿಹಾರದ ಪಾಟ್ನಾ ಸಮೀಪದ ಬುದ್ಧ ಗಯಾದಲ್ಲಿ ಪಿತೃ ತರ್ಪಣ ಮಾಡುವ ಸಂಕಲ್ಪ ಮಾಡಿದ್ದೇನೆ.
ಬುದ್ದಗಯಾದ ಮಹಾಬೋದಿ ವೃಕ್ಷದ ಕೆಳಗೆ ಗೌತಮ ಬುದ್ಧನಿಗೆ ಜ್ಞಾನೋದಯ ಆಗವುದರಿಂದ ಬುದ್ಧಗಯಾ ಬೌದ್ಧ ಧರ್ಮಿಯರಿಗೆ ಪವಿತ್ರ ಸ್ಥಳವಾಗಿದೆ.
ಚಕ್ರವರ್ತಿ ಅಶೋಕರ ಮಗಳು ಸಂಗಮಿತ್ರ ಈ ವೃಕ್ಷದ ಕೊಂಬೆ ಇಲ್ಲಿಂದ ಒಯ್ದು ಶ್ರೀಲಂಕಾದ ಅನುರಾದಪುರದಲ್ಲಿ ಸ್ಥಾಪಿಸಿದ್ದು ಈಗಲೂ ಆ ಪುರಾತನ ವೃಕ್ಷ ಜೀವಂತವಾಗಿದೆ.
ಚಕ್ರವರ್ತಿ ಅಶೋಕರ ರಾಣಿ ತಿಸ್ಸಾರಕಾ ಗಯಾದಲ್ಲಿನ ಗೌತಮ ಬುದ್ಧನಿಗೆ ಜ್ಞಾನೋದಯವಾದ ಸ್ಥಳದ ಬೋದಿವೃಕ್ಷ 254 BC ಯಲ್ಲಿ ನಾಶ ಮಾಡಿಸುತ್ತಾಳೆ ಅವಳಿಗೆ ಅಶೋಕ ಚಕ್ರವರ್ತಿಯ ಬೌದ್ಧ ದರ್ಮದ ಒಲವು ಇಷ್ಟವಾಗುವುದಿಲ್ಲ.
ಇದು ಇತಿಹಾಸವಾದರೆ ಹಿಂದೂ ಧರ್ಮದಲ್ಲಿ ಮಹಾ ವಿಷ್ಣುವಿನ ಪಾದಗಳು ಇಲ್ಲಿದೆ ಎಂಬ ಭಕ್ತಿಯ ನಂಬಿಕೆ ಇದೆ ಮತ್ತು ಇಲ್ಲಿಯೇ ಶ್ರೀ ರಾಮಚಂದ್ರ ತನ್ನ ತಂದೆ ಇಹಲೋಕ ತ್ಯಜಿಸಿದಾಗ ಪಿತೃತರ್ಪಣ ನೀಡಿದ್ದು ಮತ್ತು ಮಹಾಭಾರತದಲ್ಲಿ ಪಾಂಡವ ಯುದಿಷ್ಟರನಿಗೆ ಶ್ರೀಕೃಷ್ಣ ಗಯಾದಲ್ಲೆ ಪಿತೃತರ್ಪಣ ನೆರವೇರಿಸಲು ಮಾರ್ಗದರ್ಶನ ನೀಡುತ್ತಾನೆ ಆದ್ದರಿಂದ ಧರ್ಮರಾಯ ಗಯಾದಲ್ಲಿ ತನ್ನ ಅಗಲಿದ ಹಿರಿಯರಿಗೆ ಗಯಾದಲ್ಲಿ ಪಿತೃತರ್ಪಣ ಅರ್ಪಿಸುತ್ತಾನೆ.
ಗಯಾದಲ್ಲಿ ಪವಿತ್ರ ಫಲ್ಗು ನದಿ ಹರಿಯುತ್ತದೆ, ಗಯಾದ ಅಕ್ಷಯವತ್ ಎಂಬ ಪವಿತ್ರ ಅಂಜೂರದ ವೃಕ್ಷದ ಕೆಳಗೆ ಶ್ರೀರಾಮ ಪಿಂಡ ಪ್ರದಾನ ಮಾಡಿದ್ದರಿಂದ ಇದನ್ನ ಪೂಜಿಸುತ್ತಾರೆ.
ಇಲ್ಲಿನ ಪ್ರೇತ್ವಿಲಾ ಎಂಬ ಬೆಟ್ಟದಲ್ಲಿ ಧರ್ಮರಾಯ ಪಿಂಡ ಪ್ರಧಾನ ಮಾಡಿದ್ದರಿಂದ ಅಲ್ಲಿಗೂ ಭಕ್ತರು ಬೇಟಿ ನೀಡುತ್ತಾರೆ.
ಗಯಾದಲ್ಲಿನ ಫಲ್ಗು ನದಿಯಲ್ಲಿ ತರ್ಪಣೆ ಬಳಿಕ ಮೃತರು ಶಾಂತಿಯಿಂದ ನೆಲೆಸುವಂತೆ ಹಾಗೂ ಭವಿಷ್ಯದಲ್ಲಿ ಕುಟುಂಬಕ್ಕೆ ಯಾವುದೇ ರೀತಿಯಲ್ಲಿ ಹಾನಿ ಮಾಡದಂತೆ ಬೇಡಿ ಕೊಳ್ಳುತ್ತಾರೆ ಇದರಿಂದ ಪೂರ್ವಜರ ಆತ್ಮಕ್ಕೆ ಶಾಂತಿ ಲಭಿಸುತ್ತದೆ ಎಂಬ ನಂಬಿಕೆ ಹಿಂದೂ ದರ್ಮದಲ್ಲಿದೆ.
Comments
Post a Comment