https://maps.app.goo.gl/f1aYWaHbtsPBfQgz5
#ನಮ್ಮ_ಮಲ್ಲಿಕಾ_ವೆಜ್_ಹೊಸ_ತಿನಿಸುಗಳ_ಪ್ರಯೋಗಾಲಯ
#ತರಬೇತಿ_ನೀಡಲು_ಪರಿಣಿತರು_ಬರುತ್ತಿರುತ್ತಾರೆ
#ನಾವೆಲ್ಲ_ತರಬೇತಿ_ಪಡೆದು_ನಂತರ_ನಮ್ಮದೇ_ರೀತಿಯ_ಟ್ರಯಲ್_ಅಂಡ್_ಎರರ್_ಪರಿಶೀಲಿಸುತ್ತೇವೆ
#ನನ್ನ_ಎಲ್ಲಾ_ಪ್ರಯೋಗಗಳಿಗೆ_ನನ್ನೆಲ್ಲ_ಸಿಬ್ಬಂದಿ_ಸಹಕರಿಸುತ್ತಾರೆ.
#ಹೊಸ_ಸೇರ್ಪಡೆ_ಬಯಲು_ಸೀಮೆಯ_ತೋಯಿಸಿದ_ಮಂಡಕ್ಕಿ,
https://youtu.be/I2AhKaxszwA?feature=shared
ದಾವಣಗೆರೆಗೆ ಹೋಗುವಾಗೆಲ್ಲ ನಾನು ಮಲೆಬೆನ್ನೂರಿನಲ್ಲಿ ಸಿಗುವ ಪ್ರಸಿದ್ಧಿ ಪಡೆದ ತೋಯಿಸಿದ ಮಂಡಕ್ಕಿ -ಪ್ರೈಡ್ ಚಿಲ್ಲಿ ಮತ್ತು ಮಿರ್ಚಿ ಬೊಂಡ ತಿನ್ನದೆ ಹೋಗುವುದಿಲ್ಲ ಒಮ್ಮೆ ನಮ್ಮ ಗಾಡಿ ಚಾಲಕ ಇದನ್ನು ತಿಂದು ಚಿತ್ರನ್ನಾ ಚೆನ್ನಾಗಿತ್ತು ಅಂದಾಗಲೇ ಗೊತ್ತಾಯಿತು ಅವನಿಗೆ ಈ ತೋಯಿಸಿದ ಮಂಡಕ್ಕಿ ಹೊಸ ಪರಿಚಯ ಅಂತ.
ನಮ್ಮ #ಮಲ್ಲಿಕಾ_ವೆಜ್ ನಲ್ಲಿ ಕೊರಾನಾ ನಂತರದಿಂದ #ಗಿರ್ಮಿಟ್ ಮತ್ತು ಮಿರ್ಚಿ ಬೊಂಡ ನಿತ್ಯ ಗ್ರಾಹಕರಿಗೆ ಸಿಗುತ್ತದೆ ಇದನ್ನು ಹುಬ್ಬಳ್ಳಿಯ ಎಕ್ಸ್ಪರ್ಟ್ ಕರೆಸಿ ತರಬೇತಿ ಪಡೆದಿದ್ದೆವು.
ಇದರ ಜೊತೆ ಬಯಲು ಸೀಮೆಯಲ್ಲಿ ಪ್ರಸಿದ್ದಿ ಪಡೆದಿರುವ ತೋಯಿಸಿದ ಮಂಡಕ್ಕಿ ಅಂದರೆ ಗರಿಗರಿ ದಾವಣಗೆರೆ ಮಂಡಕ್ಕಿ ನೀರಲ್ಲಿ ನೆನೆಸಿ ಅದಕ್ಕೆ ರುಚಿ ರುಚಿಯಾದ ಒಗ್ಗರಣೆ ಹಾಕಿ ಅದರ ಜೊತೆಯಲ್ಲಿ ಎಣ್ಣೆಯಲ್ಲಿ ಪ್ರೈ ಮಾಡಿದ ಸೀಳಿದ ಹಸಿಮೆಣಸಿಗೆ ಉಪ್ಪು ಉದುರಿಸಿದ್ದು ಇಟ್ಟು ಗ್ರಾಹಕರಿಗೆ ನೀಡಬೇಕು.
ಇದರ ಜೊತೆ ಮಿರ್ಚಿ ಬೊಂಡವೂ ಅಪೇಕ್ಷೆ ಪಟ್ಟರೆ ಲಭ್ಯವಿದೆ, ನಮ್ಮ ಮಲ್ಲಿಕಾದಲ್ಲಿ ಮಂಡಕ್ಕಿ ಪಿಲ್ಟರ್ ನೀರಿನಲ್ಲೇ ತೋಯಿಸುವುದರಿಂದ ಗಂಟಲು ಸೊಂಕು ಆಗುವುದಿಲ್ಲ ಪ್ಲೇಟಿನಲ್ಲಿ ಬಾಳೆ ಎಲೆ ಇಟ್ಟು ಅದರಲ್ಲಿ ತೋಯಿಸಿದ ಮಂಡಕ್ಕಿ ಫ್ರೈಡ್ ಚಿಲ್ಲಿ ಜೊತೆ ಚಟ್ನಿ ಕೂಡ ನೀಡುವುದರಿಂದ ಗ್ರಾಹಕರಿಗೆ ಇದು ಶುಚಿ-ರುಚಿ ಜೊತೆ ಸಂತೃಪ್ತಿ ಕೂಡ ನೀಡುತ್ತದೆ.
ನಿತ್ಯ ಬೆಳಿಗ್ಗೆ 7 ರಿಂದ 12 ಮತ್ತು ಸಂಜೆ 5 ರಿಂದ 8 ರವರೆಗೆ ಈ ಹೊಸ ತಿನಿಸು ತೋಯಿಸಿದ ಮಂಡಕ್ಕಿ ಲಭ್ಯವಿದೆ.
ನಮ್ಮಲ್ಲಿ ಹಲಸಿನ ಎಲೆ ಕೊಟ್ಟೆ ಕಡಬು, ನೀರು ದೋಸೆ, ಗಿಣ್ಣ, ಗಿರ್ಮಿಟ್, ರಾಗಿರೊಟ್ಟಿ, ಅಕ್ಕಿರೊಟ್ಟಿಗಳು, ಕೋಕಂ ಜ್ಯೂಸ್ ನಿತ್ಯದ ತಿನಿಸುಗಳಾದ ಇಡ್ಲಿ-ವಡೆ, ತಟ್ಟೆ ಇಡ್ಲಿ, ಬನ್ಸ್, ಉಪ್ಪಿಟ್ಟು- ಅವಲಕ್ಕಿ_ಕೇಸರಿಬಾತ್_ಬಿಸಿಬೇಳೆಬಾತ್, ಪಲಾವ್, ದೋಸೆಗಳು, ಅವಲಕ್ಕಿ ಮೊಸರು, ಪಕೋಡ_ಮಿರ್ಚಿಬೊಂಡಾ, ಕೋಥಾಸ್ ಪಿಲ್ಟರ್ ಕಾಫಿ- ತ್ರಿರೋಸ್ ಚಹಾ, ಜಾಮೂನುಗಳ ಜೊತೆ ಮಧ್ಯಾಹ್ನ ದಕ್ಷಿಣ ಭಾರತೀಯ ಮತ್ತು ಉತ್ತರ ಭಾರತೀಯ ಥಾಲಿಗಳು, ವಿವಿಧ ಹಣ್ಣಿನ ಜ್ಯೂಸ್ - ಐಸ್ ಕ್ರೀಮ್, ತಂದೂರಿ ರೊಟ್ಟಿ- ಪನೀರ್ - ಮಶ್ರೂಂ ಹೀಗೆ ತರಹಾವಾರಿ ಶುಚಿ ರುಚಿಯ ಆಹಾರಗಳು ಟೇಸ್ಟಿಂಗ್ ಪೌಡರ್, ಕೃತಕ ಬಣ್ಣ ಬಳಸದೆ ಗ್ರಾಹಕರ ಆರ್ಡರ್ ಪಡೆದ ನಂತರವೇ ಪ್ರೆಶ್ ಆಗಿ ಬಿಸಿ ಬಿಸಿಯಾಗಿ ತಯಾರಿಸಿ ಗ್ರಾಹಕರನ್ನು ಕಳೆದ 15 ವರ್ಷದಿಂದ ಈ ಸಣ್ಣ ಹಳ್ಳಿಯಲ್ಲಿ ಸೆಳೆಯುವ ಕೆಲಸ ಮಾಡುತ್ತಿದ್ದೇವೆ.
Comments
Post a Comment