Blog number 1997. ಕಪ್ಪ- ಮರಗೆಣಸು - ಟ್ಯಾಪಿಯೋಕ ಎನ್ನುವ ಬ್ರಿಜಿಲ್ ಗೆಣಸು 1880 ರ ಬೀಕರ ಬರಗಾಲದಲ್ಲಿ ಕೇರಳಕ್ಕೆ ಪರಿಚಯಿಸಿದ ತ್ರಿವೆಂಕೂರ್ ರಾಜನ ಸಹೋದರ...ಈ ಮರ ಗೆಣಸು ನಮ್ಮ ಪ್ರೀತಿಯ ಶಂಭೂರಾಮನಿಗೂ ಇಷ್ಟವಾಯಿತು
#ನನ್ನ_ಪ್ರೀತಿಯ_ಶಂಭೂರಾಮ_ಮರಗೆಣಸು_ಸೇವಿಸುತ್ತಾನೆ
#ಕೇರಳಿಗರು_ಕಪ್ಪ_ಎನ್ನುವ_ಟ್ಯಾಪಿಯೋಕ
#ಕೇರಳದಲ್ಲಿ_ಬೀಕರ_ಬರಗಾಲ_ಬಂದಾಗ_1880ರಲ್ಲಿ_ತಿರುವಾಂಕೂರ್_ರಾಜರ
#ಕಿರಿಯ_ಸಹೋದರ_ವಿಶಾರಾಮ_ತಿರುಮಲ_ರಾಮವರ್ಮ_ರಾಜ್ಯಕ್ಕೆ_ಪರಿಚಯಿಸುತ್ತಾರೆ
#ಅನ್ನಕ್ಕೆ_ಪರ್ಯಾಯ_ಉಪ್ಪಿಟ್ಟು_ಚಿಪ್ಸ್
#ಸಾಮೆ_ಅಕ್ಕಿ_ಸ್ಟಾರ್ಚ್_ವೋಡ್ಕಾ_ತಯಾರಿಸುತ್ತಾರೆ
#ಬ್ರಿಜಿಲ್_ಮೂಲ
#ಎರಡನೆ_ಮಹಾಯುದ್ಧದಲ್ಲಿ_ಸೌತ್_ಈಸ್ಟ್_ಏಷಿಯಾದ_ಬಹಳಷ್ಟು_ನಿರಾಶ್ರಿತರು_ಇದರಿಂದ_ಬದುಕಿದರು.
https://youtu.be/cVQrIuQYc-s?feature=shared
ಮರಗೆಣಸು ಬೆಳೆದವರು ತಂದು ಕೊಟ್ಟಿದ್ದನ್ನು ಅದರ ಸಿಪ್ಪೆ ನಿವಾರಿಸಲು ಕುಳಿತಾಗ ತಟ್ಟೆ ಚಾಕು ಶಬ್ದ ಮತ್ತು ಅದರ ವಾಸನೆ ಗ್ರಹಿಸಿ ನನ್ನ ಪ್ರೀತಿಯ ಶಂಭೂರಾಮ ನನ್ನ ಬದಿಗೆ ಬಂದು ಕುಳಿತ.
ನಾವು ತಿನ್ನುವ ಎಲ್ಲಾ ತರಕಾರಿ ತಿನ್ನುವ ಈ ರಾಟ್ ವೀಲರ್ ಶಂಭೂರಾಮನಿಗೆ ಈವರೆಗೆ ಇದನ್ನು ಕೊಟ್ಟಿರಲಿಲ್ಲ, ನಾನು ಮಲೆಯಾಳಿ ಗೆಳೆಯ ಕುಟ್ಟೀಚನ್ ಹೇಳಿಕೊಟ್ಟ ಸುಲಭ ವಿಧದಲ್ಲಿ ಮರಗೆಣಸಿನ ದಪ್ಪ ಸಿಪ್ಪೆ ನಿವಾರಿಸಿ ತೆಗೆದ ನಂತರ ಶಂಭೂರಾಮನಿಗೆ ನೀಡಿದೆ.
ಕಟುಂ - ಕುಟುಂ ಅಂತ ಮರಗೆಣಸು ತನ್ನ ಬಲಿಷ್ಟ ದವಡೆಯಲ್ಲಿ ತುಂಡರಿಸಿ ಕರ0-ಕುರಂ ಅಂತ ಚಪ್ಪರಿಸಿ ನುಂಗಿ ರಿಪೀಟ್ ದಿ ಕೋರ್ಸ್ ಅಂದ!...
ಮರಗೆಣಿಸಿನ ಸುಲಭ ರುಚಿಕರ ಅಡುಗೆ ರೆಸಿಪಿಗಾಗಿ ಈ ಕೆಳಗಿನ ನನ್ನ ಬ್ಲಾಗ್ ಕ್ಲಿಕ್ ಮಾಡಿ https://arunprasadhombuja.blogspot.com/2023/07/blog-number-1636.html
ಕಪ್ಪಾ ಅಂತ ಕೇರಳದವರು ಕರೆಯುವ ಕನ್ನಡಿಗರ ಬಾಯಲ್ಲಿ ಮರಗೆಣಸು ಆಗಿರುವ ಇದರ ಮೂಲ ಬ್ರಿಜಿಲ್, ಅತಿ ಕಡಿಮೆ ಮಳೆ ಆಶ್ರಿತ ಬೆಳೆ, ಹೆಚ್ಚು ಪೈಬ್ರಾಯಿಡ್ ಹೊಂದಿದೆ.
1880 - 85 ರಲ್ಲಿ ದಕ್ಷಿಣ ಕೇರಳ ಟ್ರೂವೆಂಕೂರ್ ರಾಜ್ಯದಲ್ಲಿ ಬೀಕರ ಬರಗಾಲ ಬಂದಾಗ ಅಲ್ಲಿನ ರಾಜನ ಕಿರಿಯ ಸಹೋದರ ವಿಶಾ ರಾಮ್ ತಿರುಮಲ ರಾಮ ವಮಾ೯ ಇದನ್ನು ಕೇರಳಕ್ಕೆ ಪರಿಚಯಿಸುತ್ತಾರೆ ಸ್ವತಃ ಸಸ್ಯ ಶಾಸ್ತ್ರಜ್ಞರಾದ ಇವರು ರಾಜನಿಂದ ಸ್ಟತಃ ಅಡಿಗೆ ಮಾಡಿ ತಿಂದು ತೋರಿಸಿದ್ದರಿಂದ ಜನ ದೈಯ೯ದಿಂದ ಬೆಳೆದು ಬೆಳೆಸಿ ತಿನ್ನುತ್ತಾರಂತೆ.
ಹಾಗಾಗಿ ಕೇರಳದ ಮಲೆಯಾಳಿಗಳಿಗೆ ಈ ಮರಗೆಣಸು ಹೆಚ್ಚು ಪರಿಚಿತ ಆಹಾರ ಆಗಿದೆ ಆದರೆ ಇದರ ಇತಿಹಾಸ ಅವರಾರಿಗೂ ನೆನಪಿಲ್ಲ.
Comments
Post a Comment