Blog number 2012. ಕೊರಾನಾ ನೆನಪುಗಳ ಡೈರಿ ಭಾಗ 1 ಜನತಾ ಕರ್ಪ್ಯೂ ವಿಶ್ವದಾದ್ಯಂತ ಆರೋಗ್ಯ ಸಿಬ್ಬಂದಿಗಳಿಗೆ ನೈತಿಕ ದೈಯ೯ದ ಬೆಂಬಲ ಸಾಮೂಹಿಕ ಚಪ್ಪಾಳೆಗಳ ಮೂಲಕ
#ಮರೆತೆವೆಂದರೂ_ಮರೆಯಲಾರದ_ಕೊರಾನ_ಸಂಕಷ್ಟಗಳು
#ನಮ್ಮ_ದೇಶದಲ್ಲಿ_ಕೊರಾನಾ_ಸರಪಳಿ_ತುಂಡರಿಸುವ_ಮೊದಲ_ಪ್ರಯತ್ನ_ಜನತಾ_ಕಪ್ಯೂ೯
#ಮಾರ್ಚ್_22_2020ರ_ಬೆಳಿಗ್ಗೆಯಿಂದ_ರಾತ್ರಿ_9ರವರೆಗೆ
#ಇವತ್ತಿಗೆ_ನಾಲ್ಕು_ವರ್ಷ.
#ಆ ದಿನ ನಾನು ಬರೆದ ಲೇಖನ
#ಜನತಾಕಪ್ಯೂ೯ಗೆ ನಾನು ಬೆಂಬಲ ಸೂಚಿಸುತ್ತೇನೆ ಮತ್ತು ನಾಳೆ ಬೆಳಿಗ್ಗೆಯಿ೦ದ ರಾತ್ರಿ 9ರವರೆಗೆ ನಮ್ಮ ಸಂಸ್ಥೆಗೆ ಸಂಬಳ ಸಹಿತ ರಜೆ ನೀಡಲಾಗಿದೆ
https://arunprasadhombuja.blogspot.com/2023/03/blog-number-1322.html
ಇಡೀ ಪ್ರಪ೦ಚದ ಮಾನವ ಕುಲಕ್ಕೆ ಕ೦ಟಕ ಆಗಿರುವ ಕೆರೋನಾ ವೈರಸ್ ನಿಂದ ಚೀನಾ ಮತ್ತು ಇಟಲಿಯಲ್ಲಿ ಆಗಿರುವ ಸಾವು ನೋವು ನಮ್ಮ ಕಣ್ಣ ಎದುರಿಗಿದೆ.
ನಮ್ಮ ದೇಶದಲ್ಲಿ ಇದನ್ನ ನಿಯ೦ತ್ರಿಸಲು ಸಾವ೯ಜನಿಕರು ಒಂದಾಗಿ ಒಮ್ಮತದಿಂದ ಮುಂಜಾಗೃತ ಕ್ರಮಗಳನ್ನ ತಪ್ಪದೇ ಪಾಲಿಸುವುದು ನಮ್ಮ ಆದ್ಯ ಕತ೯ವ್ಯ ಕೂಡ.
ಇದರಲ್ಲಿ ಸಿನಿಕತನ ಕುಹಕತನ ತೋರ ಬಾರದಾಗಿ ನನ್ನ ವಿನಂತಿ.
ನಾಳೆ ಎಲ್ಲರೂ ಪ್ರದಾನ ಮOತ್ರಿಗಳ ವಿನಂತಿಯOತೆ ಬೆಳಿಗ್ಗೆ 7 ರಿಂದ ರಾತ್ರಿ 9ರವರೆಗೆ ಮನೆಯಲ್ಲೇ ಇರೋಣ.
ಕೊರಾನಾ ಸಾಂಕ್ರಮಿಕ ರೋಗದ ವಿರುದ್ದ ತಮ್ಮ ಜೀವಕ್ಕೆ ಪಣ ಇಟ್ಟು ಹೋರಾಡುತ್ತಿರುವ ಆರೋಗ್ಯ ಇಲಾಖೆಯ ನೌಕರರಿಗೆ ನೈತಿಕ ಬೆಂಬಲ ನೀಡಲು ವಿಶ್ವದಾದ್ಯಂತ ಅನೇಕ ದೇಶಗಳು ಚಪ್ಪಾಳೆ ಮೂಲಕ ಅವರಿಗೆ ಹುರಿದುಂಬಿಸಿ ಬೆಂಬಲ ನೀಡಿರುವ BBC ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
https://www.bbc.com/news/av/uk-52054745
Comments
Post a Comment