#ಡಿಜಿಟಲ್_ಮಾಧ್ಯಮ_ಕೇಳದ_ಕನ್ನಡಿಗರಿಲ್ಲ
#ನಂದಿನಿ_ಆಕರ್ಷ್_ದಂಪತಿಗಳು_ನನ್ನ_ಅತಿಥಿಗಳು
#ಇಲ್ಲಿ_ಬರುವ_ಪ್ರತಿ_ಪೋಸ್ಟ್_ಲಕ್ಷಾಂತರ_ಜನ_ವೀಕ್ಷಿಸುತ್ತಾರೆ
#ನರಹಂತಕ_ವೀರಪ್ಪನ್_ಸರಣಿಯಿಂದ_ಸಂಗೊಳ್ಳಿರಾಯಣ್ಣ_ಕನಕದಾಸ_ಸರ್ವಜ್ಞನ_ಮಾಸೂರು_ತನಕ
#ಕನ್ನಡಿಗರಿಗೆ_ಇತಿಹಾಸದ_ಚರಿತ್ರೆ_ಉಣಬಡಿಸುತ್ತಾರೆ
#Explore_ಶಿವಮೊಗ್ಗಕ್ಕಾಗಿ_ಶಿವಮೊಗ್ಗ_ಜಿಲ್ಲಾ_ಪ್ರವಾಸದಲ್ಲಿದ್ದಾರೆ.
ನಾನು ಈವರೆಗೆ ಬಂದಿರುವ ಎಲ್ಲಾ ವೀರಪ್ಪನ್ ಸಂಬದಿಸಿದ ಲೇಖನ ಪುಸ್ತಕ ಓದಿದವನು ಶಿವಸುಬ್ರಮಣ್ಯ ತೆಗೆದ ಮೊದಲ ವೀರಪ್ಪನ್ ಚಿತ್ರಗಳು ಭಾರತದ ಎಲ್ಲಾ ಪ್ರಸಿದ್ಧ ಇಂಗ್ಲೀಷ್ ಪತ್ರಿಕೆಗಳಲ್ಲಿ ಮುಖಪುಟಗಳಲ್ಲಿ ಪ್ರಕಟ ಆಗಿತ್ತು ಇತ್ತೀಚಿಗೆ ಪೋಲಿಸ್ ಅಧಿಕಾರಿ ವಿಜಯಕುಮಾರ್ ಬರೆದ ವೀರಪುನ್ ಅಸಾಸಿನೇಷನ್ ತನಕ ನನ್ನ ಸಂಗ್ರಹದಲ್ಲಿದೆ.
ಆದರೆ #ಡಿಜಿಟಲ್_ಮಾಧ್ಯಮದಲ್ಲಿ ಈ ಯುವ ದಂಪತಿಗಳು ಮಾಡಿದ 300 ಕ್ಕೂ ಹೆಚ್ಚಿನ ವೀರಪ್ಪನ್ ಸಹಚರರ ಅವನಿಂದ ಹತರಾದವರ ಅಪಹರಣಕ್ಕೆ ಒಳಗಾದವರ ಕುಟುಂಬದವರ ಸಂದರ್ಶನಗಳು ಮತ್ತು ನಟ ರಾಜಕುಮಾರರ ಬಿಡುಗಡೆಗೆ ಪ್ರಮುಖ ಕಾರಣ ಕರ್ತರ ಮುಖಾಮುಖಿ, ವೀರಪ್ಪನ್ ಸಮಾದಿ ತನಕ ಇವರ ಚಾನಲ್ ತೋರಿಸಿದ ಮಾಹಿತಿ ಅದ್ಭುತ.
ಅಲ್ಲಿಂದ ಮೊನ್ನೆಯ ಸರ್ವಜ್ಞನ ಮಾಸೂರು ತನಕ ನಮ್ಮ ನಾಡಿನ ಇತಿಹಾಸವನ್ನು ಜನ ಸಾಮಾನ್ಯರಿಗೆ ಅಥ೯ವಾಗುವಂತೆ ಬಿಡಿ ಬಿಡಿ ಆಗಿ ಮಾಹಿತಿ ನೀಡುವ ಈ ದಂಪತಿಗಳು ಇದಕ್ಕಾಗಿ ಹೆಚ್ಚು ಪೂರ್ವ ತಯಾರಿಯ ಓದು ಸ್ಥಳ ಪರಿಶೀಲನೆ, ಸ್ಥಳಿಯ ಜನಪದ ಇತ್ಯಾದಿ ತಿಳಿದೇ ನಂತರ ಪೋಸ್ಟ್ ಮಾಡುತ್ತಾರೆ ಆದ್ದರಿಂದ ಇವರಿಗೆ ಹೆಚ್ಚು ಶ್ರಮ ಹೆಚ್ಚು ಪ್ರಯಾಣ ಹೆಚ್ಚು ಹಣ ವ್ಯಯಿಸಬೇಕಾದ ಅನಿವಾರ್ಯತೆ ಇದೆ.
ಇಬ್ಬರೂ ಹೆಚ್ಚು ವಿದ್ಯಾಬ್ಯಾಸ ಮಾಡಿದವರು, ಉತ್ತಮ ಉದ್ಯೋಗದಲ್ಲಿದ್ದವರು ಅದನ್ನು ತೊರೆದು ಅವರ ಆಸಕ್ತಿಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡುತ್ತಿದ್ದಾರೆ ಇದರ ಜೊತೆ ಇವರ ಪೋಸ್ಟ್ ಗ್ರಾಜುಯೋಶನ್ ವ್ಯಾಸಂಗ ಕೂಡ ಮುಂದುವರಿಸಿದ್ದಾರೆ ಇವರಿಗೆ ಪುಟ್ಟ ಗಂಡು ಮಗು ಕೂಡ ಇದೆ.
ಶಿವಮೊಗ್ಗ ಜಿಲ್ಲೆಯ ಹತ್ತು ದಿನದ ಪ್ರವಾಸದಲ್ಲಿದ್ದಾರೆ ಇವರ ಡಿಜಿಟಲ್ ಮಾಧ್ಯಮದ #Explore_the_Shivamoga ಎಪಿಸೋಡಿಗಾಗಿ ಬಂದಿದ್ದಾರೆ ಅವರಿಗೆ ಬೇಕಾದ ಮಾಹಿತಿ ಸಹಾಯ ಸಹಕಾರ ಶಿವಮೊಗ್ಗ ಜಿಲ್ಲೆಯ ಸಹೃದಯರು ನೀಡಲು ವಿನಂತಿಸುತ್ತೇನೆ ಅವರ ವಾಟ್ಸಪ್ ಗೆ 9035313303 ಮಾಹಿತಿ ನಿಮ್ಮ ಸಂಪರ್ಕ ವಿವರ ಕಳಿಸಿ ಅವರ ಕೆಲಸದ ವಿರಾಮದಲ್ಲಿ ಅವರು ನಿಮಗೆ ಸಂಪರ್ಕಿಸುತ್ತಾರೆ.
ಶಿವಮೊಗ್ಗ ಜಿಲ್ಲೆಯ ವಿಶೇಷ ಸ್ಥಳ-ಸ್ಮಾರಕ - ವ್ಯಕ್ತಿ- ಉದ್ಯಮ-ಚರಿತ್ರೆ ಅವರ ಡಿಜಿಟಲ್ ಮಾಧ್ಯಮದಲ್ಲಿ ಹರಿದು ಬರಲಿ ಆ ಮೂಲಕ ಶಿವಮೊಗ್ಗ ಜಿಲ್ಲೆಯ ಮಾಹಿತಿ ಮುಂದಿನ ತಲೆಮಾರಿಗೆ ಹಸಿರಾಗಿ ಉಳಿಯಲಿ ಎಂದು ಹಾರೈಸುತ್ತೇನೆ.
Comments
Post a Comment