#ನಮ್ಮ_ಯಡೇಹಳ್ಳಿ_ಗ್ರಾಮಪಂಚಾಯತ್_ಉಪಾದ್ಯಕ್ಷರು
#ನಾರಿ_ಲೋಕಪ್ಪ_ಗೃಹ_ಪ್ರವೇಶದ_ಆಹ್ವಾನ_ಪತ್ರಿಕೆ_ನೀಡಲು_ಬಂದಿದ್ದರು
#ವಿಶೇಷ_ಅಂದರೆ_ಮೂವರು_ಸಹೋದರರ_ಮೂರು_ಮನೆ_ಗೃಹ_ಪ್ರವೇಶ
#ಇವರ_ತಂದೆ_ಯಡೇಹಳ್ಳಿ_ಮಂಡಲ್_ಪಂಚಾಯತ್_ಸದಸ್ಯರಾಗಿದ್ದರು
ಇವತ್ತು ನಮ್ಮ ಯಡೇಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ನಾರಿ ಲೋಕಪ್ಪ ಬಂದಿದ್ದರು ಅವರು ಅವರ ಊರಲ್ಲಿ ನಿರ್ಮಿಸಿರುವ ಮನೆ ಗೃಹ ಪ್ರವೇಶಕ್ಕೆ ಆಹ್ವಾನಿಸಲು ಬಂದಿದ್ದರು.
ವಿಶೇಷ ಅಂದರೆ ಮೂರು ಜನ ಸಹೋದರರ ಮೂರು ಮನೆಗಳನ್ನು ನಿರ್ಮಿಸಿದ್ದಾರೆ ಆ ಮೂರು ಮನೆ ಅವತ್ತೆ ಉದ್ಘಾಟನೆ ಮತ್ತು ಆ ಮೂರು ಮನೆಗಳ ಹೆಸರು ಒಂದೇ ಹೆಸರು #ಶ್ರೀಮಂಜುನಾಥ_ಸ್ವಾಮಿ
ಕಷ್ಟ ಪಟ್ಟು ಕೃಷಿ ವ್ಯವಹಾರ ಮಾಡುವ ಈ ಸಹೋದರಲ್ಲಿ ರಾಜಕೀಯ ಕ್ಷೇತ್ರದಲ್ಲಿ ಇರುವುದು ನಾರಿ ಲೋಕಪ್ಪ ಮಾತ್ರ ಈ ಹಿಂದೆಯೇ ಅನೇಕ ಬಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷ/ ಉಪಾಧ್ಯಕ್ಷರಾಗುವ ಅವಕಾಶಗಳಿಂದ ವಂಚಿತರಾಗಿದ್ದ ನಾರಿ ಲೋಕಪ್ಪ ಈ ಬಾರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿದ್ದಾರೆ.
ಇವರ ತಂದೆ ನಾರಿ ನಾರಾಯಣಪ್ಪ ಯಡೇಹಳ್ಳಿ ಮಂಡಲ್ ಪಂಚಾಯಿತಿ ಸದಸ್ಯರಾಗಿದ್ದಾಗ ಹೊಸಗುಂದದ ಕೋವಿ ನಾರಾಯಣಪ್ಪರ ಪ್ರಧಾನರನ್ನು ಮಾಡಲು ಪ್ರಮುಖ ಕಾರಣ ಕರ್ತರು ಅವತ್ತು ಎಲ್ಲರೂ ನಾರಿ ನಾರಾಯಣಪ್ಪರನ್ನೇ ಉಪ ಪ್ರದಾನರನ್ನಾಗಿ ಮಾಡಲು ಮುಂದಾಗಿದ್ದರೂ ನಾರಿ ನಾರಾಯಣಪ್ಪ ಪರಿಶಿಷ್ಟ ಜಾತಿಯ ಮುಗ್ದ ಕೊಲ್ಲಪ್ಪನನ್ನು ಉಪಪ್ರಧಾನರನ್ನಾಗಿ ಮಾಡಿದ್ದರು.
ತಂದೆಯಂತೆ ಸಮಾಜ ಸೇವೆ, ಕೃಷಿ ಮತ್ತು ವ್ಯವಹಾರದಲ್ಲಿ ಗೌರವ ಸ್ಥಾನ ಮಾನ ಉಳಿಸಿಕೊಂಡು ಬಂದಿರುವ ನಾರಿ ಲೋಕಪ್ಪನವರಿಗೆ ನಮ್ಮ ಸಂಸ್ಥೆವತಿಯಿಂದ ಗೌರವಿಸಿದೆವು.
Comments
Post a Comment