#ಕಳೆದ_ಲೋಕಸಭಾ_ಚುನಾವಣೆಯಲ್ಲಿ_ಹೆಚ್ಚು_ಪ್ರಚಾರವಾಗಿದ್ದ
#ಅಪಶಕುನದ_ಸುದ್ದಿಗಳು
#ಇದರಿಂದ_ಬಿಜೆಪಿ_ಅಭ್ಯರ್ಥಿ_ಸೋಲುತ್ತಾರೆಂಬ_ಸುದ್ದಿ
#ಪಲಿತಾಂಶ_ಬಂದಾಗ_ಬಿಜೆಪಿ_ಎರೆಡು_ಲಕ್ಷ_ಅಧಿಕ_ಮತಗಳಿಂದ_ವಿಜಯ_ಗಳಿಸಿತ್ತು.
2019ರ ಲೋಕ ಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥಿ೯ ಸಂಸದ ರಾಘವೇಂದ್ರ ದಿನಾಂಕ 28- ಮಾರ್ಚ್-2019 ರಂದು ನಾಮ ಪತ್ರ ಸಲ್ಲಿಸಿದ್ದರು.
ಕಾಲಕ್ಕೆ ತಕ್ಕ೦ತೆ ಬಾರೀ ಜನಸ್ತೋಮ ಸೇರಿಸಿದ್ದರು ಆದರೆ ಅವರ ತಂದೆ ಯಡೂರಪ್ಪನವರು, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮತ್ತು ಶ್ರೀನಿವಾಸರು ಬರಬೇಕಾಗಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಬೆಂಗಳೂರಿಂದ ಹಾರಲಿಲ್ಲ.
ಇದೇ ಸಂದರ್ಭದಲ್ಲಿ ರಾಘವೇಂದ್ರರ ನಾಮಪತ್ರದ ಅಜಿ೯ ಪಾರಂ ದೇವರ ಪೀಠದಿಂದ ಕೆಳಕ್ಕೆ ಉರುಳಿತು ಎಂಬ ವಿಚಾರ ವಿರೋದಿ ಪಾಳ್ಯವಾದ ಜೆಡಿಎಸ್ ಮತ್ತು ಕಾಂಗ್ರೇಸ್ ಪಕ್ಷದಲ್ಲಿ ಹೆಚ್ಚು ಸುದ್ದಿ ಮಾಡಿತ್ತು.
ಈ ವಿಚಾರ ಪೇಟೆ ಪ್ರದೇಶಕ್ಕಿಂತ ಹಳ್ಳಿಗಳಲ್ಲಿ ಹೆಚ್ಚು ಚಚೆ೯ ಆಗಿತ್ತು ಇದರ ಸಾರಾಂಶವಿಷ್ಟೆ ಬಿಜೆಪಿ ಅಭ್ಯರ್ಥಿ ರಾಘವೇಂದ್ರರಿಗೆ ಈ ಘಟನೆಗಳು ಶುಭ ಶಕುನವಾಗಿಲ್ಲ... ಇದು ಅಪಶಕುನ ಈ ಬಾರಿ ಬಿಜೆಪಿ ಗೆಲ್ಲುವುದಿಲ್ಲ ಎಂಬ ಸುದ್ದಿ ಜನರ ಮಧ್ಯ ಹಬ್ಬಿತ್ತು.
Comments
Post a Comment