Blog number 1984.ಕೆ.ಶಿವರಾಂ ನೆನಪುಗಳು ಭಾಗ-3. ಶಿವಮೊಗ್ಗ ಜಿಲ್ಲಾ ಪಂಚಾಯತಿನಲ್ಲಿದ್ದ ಸರ್ಕಾರದ ಕೋಟ್ಯಾಂತರ ರೂಪಾಯಿ ಗುಳುಂ ಮಾಡುತ್ತಿದ್ದ ಬೋರ್ ವೆಲ್ ಮಾಫಿಯಾಗೆ ಗುದ್ದು ನೀಡಿದ ಶಿವರಾಂ,
#ಕೆ_ಶಿವರಾಂ_ನೆನಪುಗಳು_ಬಾಗ_3.
#ಶಿವಮೊಗ್ಗ_ಜಿಲ್ಲಾ_ಪಂಚಾಯತ್_ಬೋರ್_ವೆಲ್_ಮಾಪಿಯಾಗೆ_ಬುದ್ಧಿಕಲಿಸಿದವರು
#ಶಿವರಾಂ_ಕಛೇರಿಗೆ_ನುಗ್ಗಿ_ದಾಂದಲೆ_ಮಾಡಿದ_ಬೋರ್_ವೆಲ್_ಗುತ್ತಿಗೆದಾರ
#ಆಗಿನ_ಮುಖ್ಯಮಂತ್ರಿ_ಜೆ_ಹೆಚ್_ಪಟೇಲರ_ಸಹೋದರರಿಂದ_ಶಿಪಾರಸ್ಸು
#ಪ್ರಬಾವಿ_ಗುತ್ತಿಗೆದಾರನನ್ನ_ಬಂದಿಸಿ_ಕೇಸ್_ದಾಖಲಿಸಿದ_ದಿಟ್ಟ_ಅಧಿಕಾರಿ_ಶಿವರಾಂ
#ಅದೇ_ಗುತ್ತಿಗೆದಾರರು_ಮುಂದೆ_ಶಾಸಕರು_ಮಂತ್ರಿಗಳಾದರು.
ಇದೇ ಸಂದರ್ಭದಲ್ಲಿ ನಾನು ಜಿಲ್ಲಾ ಪಂಚಾಯತ್ ನಲ್ಲಿ ಬೋರ್ವೆಲ್ ಬಾವಿ ನಿರ್ಮಾಣದ ದೊಡ್ಡ ಹಗರಣ ಬಯಲು ಮಾಡಿದ್ದೆ.
ಅದೇನೆಂದರೆ ಪ್ರತಿ ವರ್ಷ ಆರ್ಥಿಕ ವರ್ಷದ ಕೊನೆಯಲ್ಲಿ ಕೋಟ್ಯಾಂತರ ರೂಪಾಯಿ ಬೋರ್ವೆಲ್ ಹೊಡೆದಿದ್ದಾಗಿ ಬಿಲ್ ಆಗುತ್ತಿತ್ತು ಆದರೆ ವಾಸ್ತವವಾಗಿ ಅಲ್ಲಿ ಬೋರ್ ಹೊಡೆಯುತ್ತಿರಲಿಲ್ಲ, ಬೋರ್ ಪೇಲ್ ಆಯಿತು ಎಂಬ ಅಧಿಕಾರಿಗಳ ದೃಡೀಕರಣ ಇರುತ್ತಿತ್ತು.
ಅದಕ್ಕಾಗಿ ಎಲ್ಲಾ ಇಲಾಖೆಯವರು ಪಾಲುದಾರು ವಾಸ್ತವವಾಗಿ ಅಲ್ಲಿ ಬೋರ್ವೆಲ್ ಇರುತ್ತಿರಲಿಲ್ಲ ಈ ಹಗರಣ ಬಯಲು ಮಾಡಿದಾಗ ಅದು ಆ ವರ್ಷದ ಮಾರ್ಚ್ ತಿಂಗಳಾಗಿತ್ತು.
ಶಿವರಾಂ ಅವರು ತಕ್ಷಣ ಸದರಿ ಸಂಸ್ಥೆಗೆ ಹಣ ಬಿಡುಗಡೆ ಮಾಡಿದಂತೆ ತಡೆ ಹಿಡಿದರು ಇದರಿಂದ ಸಿಟ್ಟಾದ ಆಸಂಸ್ಥೆ ವ್ಯಕ್ತಿಗಳು ಆಗಿನ ಮುಖ್ಯಮಂತ್ರಿ ಜೆ ಹೆಚ್ ಪಟೇಲರ ಸಹೋದರರನ್ನು ಕರೆತಂದು ಶಿವರಾಂ ಅವರ ಛೇಂಬರ್ ನಲ್ಲಿ ಬೆದರಿಕೆ ಹಾಕಿದ್ದರು.
ಇದರಿಂದ ರೊಚ್ಚಿಗೆದ್ದ ಶಿವರಾಂ ಆ ಬೋರ್ ವೆಲ್ ಸಂಸ್ಥೆ ಮಾಲಿಕರನ್ನು ಪೋಲಿಸರ ಕರೆಸಿ ಆರೆಸ್ಟ್ ಮಾಡಿಸಿದ್ದರು ಅದರ ಮರುದಿನ ನನ್ನನ್ನು ಕರೆಸಿ ಸಂಪೂರ್ಣ ಮಾಹಿತಿ ಪಡೆದರು, ಜಿಲ್ಲಾ ಪಂಚಾಯತ್ ನ ವಿವಿಧ ಇಲಾಖೆಗಳಾದ ಅಭಿವೃದ್ದಿ, ಯೋಜನೆ, ಹಣಕಾಸು, ಇಂಜಿನಿಯರಿಂಗ್, ಅಂಕಿ ಅಂಶಗಳ ಮುಖ್ಯಸ್ಥರನ್ನ ಕರೆಸಿ ನನ್ನ ಸಮಕ್ಷಮ ಮಾತುಕತೆ ನಡೆಸಿದರು.
ಆಗ ಅವರಿಗೆ ದೊರೆತ ಮಾಹಿತಿ ಈ ಬೋರ್ ವೆಲ್ ಗುತ್ತಿಗೆದಾರರು ಪ್ರಭಾವಿಗಳು, ಆಗ ಅವಿಭಿಜಿತ ಶಿವಮೊಗ್ಗ ಜಿಲ್ಲೆಗೆ ಹೊನ್ನಾಳಿ ಚನ್ನಗಿರಿ ಸೇರಿತ್ತು ಈ ಗುತ್ತಿಗೆದಾರರು ಜಿಲ್ಲೆಗೆ ಮಂಜೂರಾದ ಬೋರ್ ವೆಲ್ ಸಂಖ್ಯೆಗಿಂತ ಎರಡು ಮೂರು ಪಟ್ಟು ಹೆಚ್ಚು ಅನುದಾನ ತರುತ್ತಿದ್ದರು ಮತ್ತು ಇದರಲ್ಲಿ ಶೇಖಡಾ 10% ಮಾತ್ರ ನಿಜವಾಗಿ ಕೊರೆಯುತ್ತಿದ್ದರು ಉಳಿದದ್ದೆಲ್ಲ ಬೋರ್ ಕೊರೆಯದೆ ಬಿಲ್ ಮಾಡಿಕೊಳ್ಳುತ್ತಿದ್ದರು.
ಇದಕ್ಕೆ ಸಂಬಂದ ಪಟ್ಟ ಇಂಜಿನಿಯರಿಂಗ್ ಇಲಾಖೆ ಆದೇಶ, ಪಾಯಿಂಟ್ ಮಾಡಿದ ಜಿಯೋಲಿಜಿಸ್ಟ್ ರಿಪೋರ್ಟ್, ಬೋರ್ ಪೇಲ್ ಆದ ಬಗ್ಗೆ ಸ್ಥಳಿಯ ಗ್ರಾಮ ಪಂಚಾಯತ್ ದೃಡೀಕರಣ ದಾಖಲೆ ಇರುತ್ತಿತ್ತು ಆದ್ದರಿಂದ ಅವರ ಸಂಸ್ಥೆಗೆ ಯಾವುದೇ ಖರ್ಚಿಲ್ಲದೆ ಕೋಟ್ಯಾಂತರ ರೂಪಾಯಿ ಪ್ರತಿ ವರ್ಷ ಮಾರ್ಚ್ ತಿಂಗಳ ಕೊನೆಯಲ್ಲಿ ಬಿಲ್ ಪಾವತಿ ಆಗುತ್ತಿತ್ತು.
ಈ ಸಂಸ್ಥೆಗೆ ಸಹಕರಿಸುವ ಎಲ್ಲರಿಗೂ ಪರ್ಸೆಂಟೇಜ್ ಸಂದಾಯ ಆಗದೇ ಇದು ಸಾಧ್ಯವಿಲ್ಲ ಎಲ್ಲಾ ಅಧಿಕಾರಿಗಳು ಹೊರಹೋದ ಮೇಲೆ ಪ್ಲಾನಿಂಗ್ ಉಪಕಾರ್ಯದರ್ಶಿ ಸೂರ್ಯನಾರಾಯಣ ಎಂಬ ಏಕೈಕ ಪ್ರಾಮಾಣಿಕ ಅಧಿಕಾರಿ ಶಿವರಾಂಗೆ "ಅರುಣ್ ಪ್ರಸಾದ್ ನೂರಕ್ಕೆ ನೂರು ಸರಿ ಹೇಳಿದ್ದಾರೆ" ಎಂದು ಹೇಳಿ ಹೋದರು.
ಅವತ್ತು ಶಿವರಾಂ ರಿಂದ ಕೇಸು ಹಾಕಿಸಿ ಕೊಂಡವರು ಮುಂದೆ ಬಿಜೆಪಿಯಿಂದ ಹೊನ್ನಾಳಿಯಿಂದ ಶಾಸಕರಾಗಿ ಮಂತ್ರಿಯೂ ಆದರು..
Comments
Post a Comment