Blog number 2023. ಶಿವಮೊಗ್ಗ ಜಿಲ್ಲೆಯ ಇತಿಹಾಸದ ಪುಟಗಳನ್ನು ಹುಡುಕಿ ತೆಗೆದು ರಾಜ್ಯದ ಜನರಿಗೆ ದೃಶ್ಯ ಮಾಧ್ಯಮದ ಮೂಲಕ ಡಿಜಿಟಲ್ ಮಾಧ್ಯಮ ಸಂಸ್ಥೆ ಅಲ್ಲಮ ಪ್ರಭು- ಅಕ್ಕಮಹಾದೇವಿ-ಶಾಂತಲಾ - ಕನ್ನಡದ ಮೊದಲ ಶಾಸನಗಳ ಮಾಹಿತಿ ಇತಿಹಾಸಕಾರರಾದ ರಮೇಶ್ ಹಿರೇಜಂಬೂರ್ ಮತ್ತು ನವೀನರಿಂದ ತಿಳಿಸುತ್ತಿದೆ.
#ಅಲ್ಲಮಪ್ರಭು_ಅಕ್ಕಮಹಾದೇವಿ_ಶಾಂತಲಾ_ಬಗ್ಗೆ
#ನೂರು_ಪುಸ್ತಕ_ಓದಿ_ತಿಳಿಯುವ_ಮಾಹಿತಿ
#ಈ_ಒಂದೊಂದು_ದೃಶ್ಯ_ಮಾಧ್ಯಮದ_ಕಂತುಗಳಿಂದ_ತಿಳಿಯಲು_ಸಾಧ್ಯವಿದೆ .
#ಡಿಜಿಟಲ್_ಮಾಧ್ಯಮದಲ್ಲಿ_ಶಿವಮೊಗ_ಜಿಲ್ಲೆ_ಇತಿಹಾಸ.
ನಾನು ನರಹಂತಕ ವೀರಪ್ಪನ್ ಸರಣಿ ಬಹುಶಃ 300 ಕ್ಕೂ ಹೆಚ್ಚು ಆ ಡಿಜಿಟಲ್ ಮಾಧ್ಯಮವನ್ನು ನಿರಂತರ ಹಿಂಬಾಲಿಸುವಂತಾಗಿತ್ತು....
ನಂತರ ಸಂಗೊಳ್ಳಿ ರಾಯಣ್ಣ,ಶಿಶುನಾಳ ಷರೀಪರು, ಕನಕದಾಸರು, ಸರ್ವಜ್ಞ ಹೀಗೆ ಸಾಲು ಸಾಲು ಇತಿಹಾಸದ ಪುಟಗಳನ್ನು ಸ್ಥಳಿಯರಿಂದ ಪ್ರಶ್ನೋತ್ತರದ ಮೂಲಕ ಜಗತ್ತಿಗೆ ತೆಗೆದಿರಿಸುವ ಡಿಜಿಟಲ್ ಮಾಧ್ಯಮದ ನಂದಿನಿ ಆಕರ್ಷ ದಂಪತಿಗಳ ಕೆಲಸ ಶ್ಲಾಘನೀಯವಾಗಿದೆ.
ಆದುನೀಕರಣದ ವೇಗದಲ್ಲಿ ಈಗಿನ ಹಳ್ಳಿಗಳು ಬದಲಾಗುತ್ತಿರುವ ಕಾಲ ಘಟ್ಟದಲ್ಲಿ ಇತಿಹಾಸದ ಕಥೆ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ, ಇತಿಹಾಸದ ಪುಸ್ತಕಗಳ ಓದುವವರೂ ಇಲ್ಲ.
ಒಂದು ಊರಿನ ದೇವಾಲಯ - ಕೋಟೆ - ಕೊಳದ ಎದರು ನಿಂತು ದೃಶ್ಯ ಮಾಧ್ಯಮದಲ್ಲಿ ಅದರ ವಿಶೇಷ ವಿವರಿಸುತ್ತಾ ಅದಕ್ಕೆ ಸಂಬಂದ ಪಟ್ಟ ಶಿಲಾಶಾಸನಗಳ ಉಲ್ಲೇಖಿಸುತ್ತಾ ಸ್ಥಳಿಯ ಜನಪದದಲ್ಲಿ ಉಳಿದು ಬಂದಿರುವ ಇದಕ್ಕೆ ಪೂರಕವಾದ ಮಾಹಿತಿ ಹಂಚುತ್ತಾ ಆಗಿನ ಆ ಸ್ಮಾರಕ ನಿರ್ಮಾಣ ಮಾಡಿದ ರಾಜ -ಸಾಮಂತ- ಸೈನ್ಯಾಧಿಕಾರಿ- ಮಾಂಡಳಿಕ-ದಾನಿಗಳ ವಿವರಿಸುತ್ತಾ ಹೋಗುವಾಗ ನಮ್ಮ ಊರಿನ, ಜಿಲ್ಲೆಯ ಹಾಗೂ ರಾಜ್ಯದ ಇತಿಹಾಸ ಕೇಳುವವರ ಮನದಲ್ಲಿ ಅಚ್ಚಳಿಯದೇ ಉಳಿಯುತ್ತದೆ.
ರಮೇಶ್ ಹಿರೇಜಂಬೂರ್ ಮತ್ತು ನವೀನ್ ರಂತಹ ಅಮೂಲ್ಯ ಇತಿಹಾಸದ ಸ್ಥಳೀಯ ಮಾಹಿತಿದಾರರು ಬೆಳಕಿಗೆ ಬರುತ್ತಾರೆ ಇವರೆಲ್ಲ ನಮ್ಮ ನಾಡು ನುಡಿಯ ಅಸಾಮಾನ್ಯ ಸಂಶೋದಕರು ಆಗಿದ್ದಾರೆ.
ಇತಿಹಾಸ ಸಂರಕ್ಷಣೆ ಅಂದರೆ ಈ ರೀತಿ ಜನರಿಗೆ ಪುನರ್ಮನನ ಮಾಡುವ ಇಂತಹ ಕಾರ್ಯಕ್ರಮ ಅನಿವಾಯ೯ವಾಗಿದೆ,ಇದೇ ದೊಡ್ಡ ಕಾರ್ಯವಾಗಿದೆ ಈ ರೀತಿ ಸ್ಥಳಿಯರಿಗೆ ಮಾಹಿತಿ ನೀಡುವ ಮೂಲಕ ನಮ್ಮ ಊರಿನ ಇತಿಹಾಸ ಜನಮಾನಸದಲ್ಲಿ ಶಾಶ್ವತವಾಗಿ ಉಳಿಸುವ ಕೆಲಸವಾಗಿದೆ.
ಶಿವಮೊಗ್ಗ ಜಿಲ್ಲೆಯ ಇತಿಹಾಸ ಬೆಳಕು ಚೆಲ್ಲುವ ಈ ಡಿಜಿಟಲ್ ಮಾಧ್ಯಮದ ಎಲ್ಲಾ ಕಂತುಗಳು ಪೇಸ್ ಬುಕ್, ಯೂ ಟ್ಯೂಬ್ ನಲ್ಲಿ ಲಭ್ಯವಿದೆ ವಿದ್ಯಾರ್ಥಿಗಳಿಗೆ ಶಾಲಾ ಮಕ್ಕಳಿಗೆ ಶಾಲಾ ಶಿಕ್ಷಕರು ಇದನ್ನು ತಲುಪಿಸಿದರೆ ಮುಂದಿನ 30 ವಷ೯ದ ತಲೆಮಾರು ಇತಿಹಾಸ ಅದಕ್ಕೆ ಸಂಬಂದ ಪಟ್ಟ ಸ್ಮಾರಕ ಹೆಚ್ಚಿನ ಸಂರಕ್ಷಣೆಗೆ ಕೊಡುಗೆ ನೀಡುವ ಕಾರ್ಯ ಮಾಡುತ್ತಾರೆ.
ದಯಮಾಡಿ ಎಲ್ಲರೂ ಶಿವಮೊಗ್ಗ ಜಿಲ್ಲೆಯ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಡಿಜಿಟಲ್ ಮಾಧ್ಯಮ ನಿರಂತರವಾಗಿ ವೀಕ್ಷಿಸಿ ನಮ್ಮ ಜಿಲ್ಲೆಯ ಇತಿಹಾಸ ತಿಳಿದುಕೊಳ್ಳಲು ವಿನಂತಿ.
ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಡಿಜಿಟಲ್ ಮಾಧ್ಯಮ ವೀಕ್ಷಿಸಿ
http//www.facebook.com/share/v/tgKQe6rdKijY5dqg/?mibextid=qi2Omg
Comments
Post a Comment