Blog number 2033. ನಮ್ಮ ಊರಿನ ಕ್ರೈಸ್ತ ಬಾಂದವರ ನೂತನ ಪ್ರಾರ್ಥನ ಮಂದಿರ ಸಂತ ಜೂದರ ದೇವಾಲಯ ದಿನಾಂಕ 11 - ಏಪ್ರಿಲ್- 2024ರ ಗುರುವಾರ ಬೆಳಿಗ್ಗೆ 10ಕ್ಕೆ ಲೋಕಾರ್ಪಣೆಗೊಳ್ಳಲಿದೆ.
#ನಮ್ಮೂರ_ನೂತನ_ಚರ್ಚ್_ಲೋಕರ್ಪಣೆಯ_ಆಹ್ವಾನ_ಪತ್ರಿಕೆ
#ಕರಾವಳಿ_ತೀರದಿಂದ_1930ರಲ್ಲಿ_ಬಂದು_ನೆಲಿಸಿದ_11_ಕ್ರೈಸ್ತ_ಕುಟುಂಬಗಳ_55_ಸದಸ್ಯರು
#ಆಗ_ಭಾನುವಾರದ_ಪ್ರಾರ್ಥನೆ_ಈಗಿನ_ಪ್ರವಾಸಿ_ಮಂದಿರದಲ್ಲಿ
#ನಂತರ_1962ರಲ್ಲಿ_ಚಿಕ್ಕ_ಚರ್ಚ್_ನಿರ್ಮಾಣವಾಯಿತು
#ದೊಡ್ಡ_ಚರ್ಚ್_ಸಂತ_ಜೂದರ_ತದೆಯಸರ_ಚರ್ಚ್_1974ರಲ್ಲಿ_ನಿಮಾ೯ಣವಾಗಿ_1999ರಲ್ಲಿ_ನವೀಕರಣ_ಆಗಿತ್ತು.
#ಇದೇ_ಜಾಗದಲ್ಲಿ_ನೂತನ_ಬೃಹತ್_ಕ್ರೈಸ್ತ_ದೇವಾಲಯ_ನಿರ್ಮಾಣವಾಗಿ_ಲೋಕರ್ಪಣೆ_ಆಗಲಿದೆ.
ನಮ್ಮ ಆನಂದಪುರಂನ ಯಡೇಹಳ್ಳಿಯ ಹೊಸನಗರ ರಸ್ತೆಯ ರೈಲ್ವೆ ಗೇಟ್ ಸಮೀಪದ ಕ್ರೈಸ್ತ ಬಾಂದವರ ಸಂತ ಜೂದರ ನೂತನ ದೇವಾಲಯ ದಿನಾಂಕ 11 ಏಪ್ರಿಲ್ 2024 ರಂದು ಉದ್ಘಾಟನೆಗೊಳ್ಳಲಿದೆ.
1974 ರಲ್ಲಿ ನಿರ್ಮಿಸಿ 1999ರಲ್ಲಿ ನವೀಕರಣಗೊಂಡಿದ್ದ ಹಳೆಯ ಚರ್ಚ್ ಶಿಥಿಲಗೊಂಡಿದ್ದರಿಂದ ಅದನ್ನು ತೆಗೆದು ದೊಡ್ಡದಾದ ಹೊಸ ಚರ್ಚ್ ನಿರ್ಮಿಸುವ ಸಂಕಲ್ಪ ಮಾಡಿ ಅದನ್ನು ಯಶಸ್ವಿಯಾಗಿ ಅವರ ಸಂಸ್ಥೆಯ,ಸ್ಥಳಿಯ ಕ್ರೈಸ್ತ ಬಾಂದವರ ಮತ್ತು ದಾನಿಗಳ ನೆರವಿನಿಂದ ಅನೂಷ್ಟಾನ ಮಾಡಿದವರು ಈಗಿನ ಪಾದರ್ ಮಿನಿನ್ ಆಲ್ಮೇಡಾ ಅವರನ್ನು ಸ್ಮರಿಸಲೇ ಬೇಕು.
ಶಿವಮೊಗ್ಗದ ದರ್ಮಾದ್ಯಕ್ಷರಾದ ಪರಮಪೂಜ್ಯ ಪ್ರಾನ್ಸಿಸ್ ಸೆರಾವೋ ಮತ್ತು ಕಾರವಾರದ ದರ್ಮಾದ್ಯಕ್ಷರಾದ ಪರಮ ಪೂಜ್ಯ ಡುಮಿಂಗ್ ಡಯಾಸ್ ನೂತನ ದೇವಾಲಯದ ಉದ್ಘಾಟನೆ - ಆಶೀರ್ವಚನ - ಮತ್ತು ಅಭಿಷೇಕೋತ್ಸವ ನೆರವೇರಿಸಲಿದ್ದಾರೆಂಬ ನಮ್ಮ ಊರಿನ ಚರ್ಚ್ ಪಾದರ್ ಮಿನಿನ್ ಆಲ್ಮೇಡಾ, ಪಾಲನಾ ಪರಿಷತ್ ಕಾರ್ಯದರ್ಶಿ ಶ್ರೀಮತಿ ರೋಸಲೀನ್ ಪನಾ೯ಂಡಿಸ್ ಮತ್ತು ಹಣಕಾಸು ಕಾರ್ಯದರ್ಶಿ ಅಂಥೋನಿ ಲೂಯಿಸರ ವಿನಂತಿಯ ಆಹ್ವಾನ ಪತ್ರಿಕೆ ಬಂದಿದೆ
1930 ರ ದಶಕದಲ್ಲಿ ಕರಾವಳಿ ತೀರದ ಬೈಂದೂರು ಭಾಗದಿಂದ ಕೆಲ ಕೊಂಕಣಿ ಬಾಷಾ ಕ್ರೈಸ್ತ ಧರ್ಮಿಯರು ಆನಂದಪುರಂಗೆ ಬಂದು ನೆಲೆಸುತ್ತಾರೆ, ಆನಂದಪುರಂ ನಲ್ಲಿ ನೈಸರ್ಗಿಕವಾಗಿ ದೊರೆಯುವ ಕೆಂಪು ಕಲ್ಲು ಜಂಬಿಟ್ಟಿಗೆ ತೆಗೆಯಲು ಬಂದವರಿವರು.
ಆಗ ಕೈಯಲ್ಲೇ ಕಲ್ಲು ತೆಗೆಯುವ ಕುಶಲ ಕರ್ಮಿಗಳಾದ ಇವರು ಬೈಂದೂರು ಭಟ್ಕಳಗಳಲ್ಲಿ ಇದೇ ವೃತ್ತಿ ಮಾಡಿದವರು, ಇಲ್ಲಿಗೆ ಬಂದ ಕೆಲ ಕುಟುಂಬ ಇಲ್ಲೇ ನೆಲೆಸಿದರು, ಇವರ ಸಂಪರ್ಕದಿಂದ ಬಂದ ಬೇರೆ ಕುಟುಂಬಗಳು ಕೃಷಿ ಕೆಲಸದಲ್ಲಿ ತೊಡಗಿದರು, ಜಂಬಿಟ್ಟಿಗೆ ಕಲ್ಲು ಕಟ್ಟುವ ಗಾರೆ ಕೆಲಸದವರೂ ಬಂದರೂ, ಸರ್ಕಾರಿ ಉದ್ಯೋಗ ಪಡೆದವರೂ ಆನಂದಪುರಂನ ಯಡೇಹಳ್ಳಿಯಲ್ಲಿಯೇ ಗುಂಪಾಗಿ ನೆಲೆಸಿದರು.
ಈ ಹನ್ನೊಂದು ಕ್ರೈಸ್ತ ಕುಟುಂಬಗಳ 55 ಜನರ ಪ್ರಾಥ೯ನೆ ಪೂಜೆಗಳು ಪ್ರತಿ ಭಾನುವಾರ ಯಡೇಹಳ್ಳಿಯ ಬ್ರಿಟೀಷ್ ಬಂಗ್ಲೆಯಲ್ಲಿ (ಈಗಿನ ಪ್ರವಾಸಿ ಮಂದಿರದಲ್ಲಿ) ನೆರವೇರುತ್ತಿತ್ತು, ಅಂದಿನ ಕ್ರೈಸ್ತ ಗುರುಗಳಾದ ವಂದನೀಯ ಸ್ವಾಮಿ ಜೆ.ಬಿ.ಡಿಸೋಜರಿಂದ ಈ ಭಾನುವಾರದ ಪ್ರಾರ್ಥನೆಗಳು ಪ್ರಾರಂಭವಾಯಿತು.
1962 ರಲ್ಲಿ ಮೈಸೂರಿನ ಕ್ರೈಸ್ತ ದರ್ಮ ಪ್ರಾಂತ್ಯದ ದರ್ಮಾದ್ಯಕ್ಷರಾದ ವಂ. ಸ್ವಾಮಿ ಪೂಜ್ಯರಾದ ಪಾಲ್ ರು ಸಂತ ಪಿಲೋಮಿನರಿಗೆ ಅರ್ಪಿತವಾದ ಸಣ್ಣ ದೇವಾಲಯ ನಿರ್ಮಿಸಲು ಒಪ್ಪಿಗೆ ನೀಡಿದಾಗ ಯಡೇಹಳ್ಳಿಯ ಹೊಸನಗರ ರಸ್ತೆಯ ಪ್ರವಾಸಿ ಮಂದಿರದ ಎದುರಿನ ರೈಲು ಮಾರ್ಗದ ಈ ಭಾಗದಲ್ಲಿ (ಈಗಿನ ಚರ್ಚ್ ಗಳಿರುವ ಜಾಗ) ಪಶ್ಚಿಮ ದಿಕ್ಕಿಗೆ ಮುಖವಾಗಿ ಸಣ್ಣ ಚರ್ಚ್ ನಿರ್ಮಿಸಿ ಪೂಜೆ ಪ್ರಾಥ೯ನೆ ಪ್ರಾರಂಬಿಸಲಾಯಿತು.
1974 ರಲ್ಲಿ ವಂ ಸ್ವಾಮಿ ಆಲ್ವೋನ್ಸ್ ಮತಿಯಾಸ್ ದರ್ಮಾದ್ಯಕ್ಷರು ಚಿಕ್ಕಮಗಳೂರು ಧರ್ಮ ಪ್ರಾಂತ್ಯ ಇವರ ಅನುಮತಿ,ಸಹಾಯ ಮತ್ತು ಸಹಕಾರದಿಂದ ಹೊಸದಾದ ದೊಡ್ಡದಾದ ಸಂತ ಜೂದ್ ತದೆಯಸರ ದೇವಾಲಯ ನಿರ್ಮಾಣವಾಯಿತು.
1989 ರಿಂದ 1990ರವರೆಗೆ ಈ ದೇವಾಲಯದ ಪ್ರಪ್ರಥಮ ದರ್ಮ ಕೇಂದ್ರದ ಗುರುವಾಗಿ ವಂ. ಸ್ವಾಮಿ ಎಸ್.ಆರ್. ಪೀಟರ್ ಅರುಳ್ ಕಾಯ೯ನಿರ್ವಹಿಸಿದರು.
1998 ರಲ್ಲಿ ಸಂತ ಜೋಸೆಪರ ಕನ್ಯಾಸ್ತ್ರಿ ಮಠ ಪ್ರಾರಂಭ ಆಯಿತು, 1999 ರಲ್ಲಿ ಈ ಚಚ್೯ ಪುನಃ ನವೀಕರಣಗೊಳಿಸಲಾಯಿತು.
ಕನ್ಯಾಸ್ತ್ರಿ ಮಠದಿಂದ ಸಮಾಜ ಸೇವಾ ಕೇಂದ್ರ, ಆರೋಗ್ಯ ಕೇಂದ್ರ,ನರ್ಸರಿ ಶಾಲೆ ನಡೆಯುತ್ತಿದೆ.
2003 ರಲ್ಲಿ ದೇವಾಲಯದ ಮುಂಬಾಗದಲ್ಲಿ ಅದ್ಭುತ ಮಾತಾ ಮಂದಿರವೂ ನಿರ್ಮಾಣ ಆಗಿದೆ.
ಈಗ ಸುಮಾರು 45 ಕುಟುಂಬಗಳ 200 ಜನ ಸಂಖ್ಯೆಯ ಈ ಚಚ್೯ 81 ವರ್ಷದ ಇತಿಹಾಸ ಹೊಂದಿದೆ.
2024ರ ಏಪ್ರಿಲ್ 11 ರ ಕ್ರೈಸ್ತ ಧರ್ಮಿಯರ ನೂತನ ಸಂತ ಜೂದರ ದೇವಾಲಯ ಲೋಕಾರ್ಪಣೆ ಆಗಲಿರುವ ಈ ಸಂದರ್ಭದಲ್ಲಿ ಹಿಂದೂ ಧರ್ಮಿಯರ ಹೊಸ ವರ್ಷಾಚಾರಣೆಯ ಯುಗಾದಿ ಮತ್ತು ಮುಸ್ಲಿಂ ಸಮುದಾಯದ ರಮ್ದಾನ್ ಹಬ್ಬದ ಆಚರಣೆ ಜೊತೆ ಜೊತೆಯಾಗಿ ಬಂದಿದ್ದರಿಂದ ನಮ್ಮ ಊರಿನ ಹಿಂದೂ - ಮುಸ್ಲಿಂ - ಕ್ರೈಸ್ತರೆಲ್ಲರಿಗೂ ಹಬ್ಬದ ಸಂಭ್ರಮ.
Comments
Post a Comment