#ಮಾವಿನ_ಮಿಡಿ_ಮಲೆನಾಡಿಗರಿಗೆ_ಪಂಚಪ್ರಾಣ
#ಕಳೆದ_ವರ್ಷ_ಮಾವಿನಮಿಡಿಗೆ_ಬರ_ಬಂದಿತ್ತು_ವಿಪರೀತ_ಇಬ್ಬನಿ
#ಈ_ವರ್ಷ_ವಿಪರೀತ_ಬಿಸಿಲು_ಮಲೆನಾಡಿನ_ಉಪ್ಪಿನಕಾಯಿ_ಬಳಕೆದಾರರ
#ಪ್ರಖ್ಯಾತ_ಬ್ರಾಂಡ್_ಅರಸಾಳು_ಅಪ್ಪೆಮಿಡಿ_ಈ_ವರ್ಷವೂ_ಕಷ್ಟ.
https://youtube.com/shorts/LAMU1ZaEakY?feature=shared
ಪಶ್ಚಿಮಘಟ್ಟದ ಮಲೆನಾಡು ಪರಿಸರ ನನ್ನ ಹುಟ್ಟೂರು ಆದ್ದರಿಂದ ನನಗೆ ಈ ಪ್ರದೇಶದಲ್ಲಿ ಕಾಲಕಾಲಕ್ಕೆ ಬರುವ ಕಣ್ಣು ಕಾಯಿ ಸವಿಯದಿದ್ದರೆ ಮನಸ್ಸು ಒಪ್ಪುವುದಿಲ್ಲ ಅದಕ್ಕಾಗಿ ಹೇಗಾದರೂ ಮಾಡಿ ಯಾರಿಂದಲಾದರೂ ಅವುಗಳನ್ನು ತರಿಸಿ ತಿನ್ನೋ ಬಯಕೆ ನನ್ನದು.
ಮಾವಿನ ಮರದಲ್ಲಿ ಹೂವು ಕಾಯಿ ಕಚ್ಚಿದಾಗ ಎಳೆಯದಾದ ಮಾವಿನ ಮಿಡಿಗಳನ್ನು ಕೆಜಿಗಟ್ಟಲೆ ತಿನ್ನುವುದು, ಸ್ವಲ್ಪ ಹುಳಿ ಬಂದಾಗ ಊಟದ ಜೊತೆ ಅನ್ನದ ಪ್ರಮಾಣ ಮೀರಿ ಮಾವಿನ ಮಿಡಿ ತಿನ್ನುವುದು, ಮಾವಿನ ಮಿಡಿ ಕಾಯಿ ಆಗಿ ಹುಳಿ ರೂಪ ಪಡೆದಾಗ ಉಪ್ಪು ಮೆಣಸಿನ ಪುಡಿಯೊಂದಿಗೆ ತಿನ್ನುವುದು ಆಗ ಊರಂಚಿನ ಮಾವಿನ ಮರಗಳನ್ನು ಎಡತಾಕುತ್ತಿದ್ದೆವು.
ಮಾವು ಹಣ್ಣು ಆದಾಗ ವಿಧವಿಧವಾದ ಹಣ್ಣಿನ ರಸ ಸ್ವಾದನೆಗಾಗಿ ಸಿರ್ಸಿ - ಕುಮುಟಾ -ಅಂಕೋಲಾ -ಕಾರವಾರದ ತನಕ ಹುಡುಕಿ ಹೋಗುವ ಪರಿಪಾಠ ಇತ್ತು.
ವರ್ಷ ಪೂರ್ತಿಉಪ್ಪಿನಕಾಯಿ ನನಗೆ ಬೇಕೇ ಬೇಕು ಅದು ಒಂದು ರೀತಿ ಅಲ್ಲ ಕನಿಷ್ಠ 15 ರಿಂದ 20 ರೀತಿ ಉಪ್ಪಿನಕಾಯಿ ನನಗೆ ಇಷ್ಟ.
ನಾನೊಬ್ಬನೇ ಅಲ್ಲ ನನ್ನಂತಹ ಉಪ್ಪಿನಕಾಯಿ ಪ್ರಿಯರು ಅನೇಕರು ನನ್ನ ಸಂಪರ್ಕದಲ್ಲಿದ್ದಾರೆ ಅವರಿಗೆಲ್ಲ ನಾನು ವಿಧವಿಧ ಉಪ್ಪಿನಕಾಯಿಯನ್ನು ಕಳಿಸಿಕೊಡುತ್ತೇನೆ.
2022ನೇ ಇಸವಿಯಲ್ಲಿ ಮಾವಿನ ಮಿಡಿ ಸಿಕ್ಕಿದಷ್ಟು ಕಳೆದ ವರ್ಷ 2023 ರಲ್ಲಿ ಇಬ್ಬನಿ ಕಾರಣದಿಂದ ಮಿಡಿಗಳು ಸಿಗಲಿಲ್ಲ, ಈ ವರ್ಷ ಫೆಬ್ರವರಿ ಕೊನೆಯಿಂದ ಮಾರ್ಚ್ ಕೊನೆಯವರೆಗೆ ಮಾವಿನ ಮಿಡಿಗಳು ಮಾರುಕಟ್ಟೆಗೆ ಬಂದೇ ಇಲ್ಲ... ಕಾರಣ ಈ ವರ್ಷದ ವಿಪರೀತ ಬಿಸಿಲು ಸೆಕೆ ಮಾವಿನ ಹೂವುಗಳನ್ನು ಮುರುಟಿಸುತ್ತಿರುವುದು ಸತ್ಯ.
ನಿನ್ನೆ ನನ್ನ ತಿನ್ನುವ ಬಯಕೆಗಾಗಿ ಅರಸಾಳಿನಿಂದ ಸ್ವಲ್ಪ ಇನ್ನೂ ಚಿಗುರದ ಇನ್ನೂ ಬೆಳೆಯದ ಅರೆ ಜೀರಿಗೆ ಸುವಾಸನೆಯ ಮಾವಿನ ಮಿಡಿ ನನ್ನ ಆಫೀಸಿನ ಟೇಬಲ್ ಮೇಲಕ್ಕೆ ಬಂತು ಅಷ್ಟರಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪನವರ ಸವಾರಿ ಆಗಮಿಸಿತ್ತು.
ಚಹಾ ಸೇವಿಸುವಾಗ ಅನೇಕರು ಮಾವಿನ ಮಿಡಿಯ ವಿಚಾರ ತೆಗೆದರು ತಮಗೂ ಮಾವಿನ ಮಿಡಿಬೇಕು ಕೊಡಿಸಿ ಅನ್ನುತ್ತಾ... ಆಗ ಅವರ ಕೈಗಳನ್ನು ನನ್ನ ಟೇಬಲ್ ಮೇಲಿದ್ದ ಮಾವಿನ ಮಿಡಿಗಳು ಇತ್ತು.
ಈಶ್ವರಪ್ಪನವರು ಈ ವರ್ಷದ ಮೊದಲ ಮಾವಿನ ಮಿಡಿ ನಾನು ನೋಡಿಲ್ಲ ಎಂದಾಗ ಅವರಿಗೂ ಆ ಮಾವಿನ ಮಿಡಿಗಳನ್ನು ತೋರಿಸಲಾಯಿತು...ಮಲೆನಾಡಿಗರಿಗೆ ಮಾವಿನ ಮಿಡಿಯ ಪರಿಚಯ, ಅದರ ಉಪ್ಪಿನಕಾಯಿಗಳು ಗೊತ್ತಿರುವಷ್ಟು ಬೇರೆ ಪ್ರದೇಶಗಳಲ್ಲಿ ಗೊತ್ತಿಲ್ಲ.
ಅತಿಥಿಗಳನ್ನು ಉಪಚರಿಸಿ ಬೀಳ್ಕೊಟ್ಟ ಮೇಲೆ ನನ್ನ ಆಫೀಸಿನ ಟೇಬಲ್ ಮೇಲೆ ಮಾವಿನ ಮಿಡಿತಂದಿದ್ದ ಖಾಲಿ ಕವರ್ ನನ್ನನ್ನು ಅಣುಕಿಸುತ್ತಿತ್ತು.
Comments
Post a Comment