Blog number 964. ಸಾಹಿತಿ ಮತ್ತು ಇತಿಹಾಸದ ಪ್ರಾಧ್ಯಾಪಕರಾದ ಡಾ.ರತ್ನಾಕರ್ ಸಿ. ಕುನುಗೋಡುರವರು ಬೆಸ್ತರ ರಾಣಿ ಚಂಪಕಾ ಬಗ್ಗೆ ಬರೆದ ವಿಮರ್ಶೆ
#ಇತಿಹಾಸ_ಓದಿ_ಇತಿಹಾಸ_ಬೋದಿಸುವ #ರತ್ನಾಕರ್_ಸಿ_ಕುನುಗೋಡು ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯ ಸಕಾ೯ರಿ ಪದವಿ ಕಾಲೇಜಿನ ಅಸಿಸ್ಟೆಂಟ್ ಪ್ರೋಪೆಸರ್. ಇವರು ಸಾಗರ ತಾಲ್ಲೂಕಿನ ತುಮರಿಯವರು ಕೆಲ ಕಾಲ ಆನಂದಪುರಂ ನಲ್ಲಿ ವಿದ್ಯಾಬ್ಯಾಸ ಮಾಡುವಾಗ ಓದಿನ ಏಕಾಂತಕ್ಕೆ ಚಂಪಕ ಸರಸ್ಸುವಿಗೆ ಹೋಗುತ್ತಿದ್ದ ನೆನಪಿಸಿ ಕೊಂಡಿದ್ದಾರೆ. ಬಿಡುವ ಮಾಡಿ ನನ್ನ ಕಾದಂಬರಿ ಓದಿ ವಸ್ತು ನಿಷ್ಟವಾಗಿ ಅವರು ಮಾಡಿದ ವಿಮಷೆ೯ ಇಲ್ಲಿದೆ. #ರಂಗೋಲಿಯ_ಹುಡುಗಿ_ಚಂಪಕಾ_ಳದುರಂತ_ಪ್ರೇಮ_ಕಥನ... ನೆನ್ನೆ ಹಿರಿಯರಾದ 'ಕೆ.ಅರುಣ್ ಪ್ರಸಾದ್' ಅವರ ಇತ್ತೀಚೆಗೆ ಬಿಡುಗಡೆಗೊಂಡ 'ಬೆಸ್ತರರಾಣಿ ಚಂಪಕಾ' ಕಾದಂಬರಿ ಕೈಸೇರಿತು. ಕೈಸೇರಿದ ಒಂದೇ ದಿನದಲ್ಲಿ ಪೂರ್ಣ ಓದಿಸಿಕೊಂಡು, ಮತ್ತೆ ಮತ್ತೆ ಕಾಡುತ್ತಿರುವ ಕಾರಣಕ್ಕಾಗಿ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸಿರುವೆ. ಸೌರವ್ಯೂಹದಲ್ಲಿ ಜೀವಿ ಗಳಿರುವ ಏಕೈಕ ಗ್ರಹ ಭೂಮಿ. ಅದಕ್ಕೆ ಕಾರಣ 'ಜಲ'. ಜಲ ಮೂಲದಿಂದಲೇ ಜೀವಾಂಕುರವಾಗಿ ಜೀವಜಗತ್ತು ಅಸ್ತಿತ್ವಕ್ಕೆ ಬಂದಿದ್ದು. ನಾಗರೀಕತೆ ವಿಕಾಸಗೊಂಡಿದ್ದು ನದಿಬಯಲಿನಲ್ಲೇ. ಈ ಜಲಮೂಲ ಪರಂಪರೆಯ ಇಂದಿನ ವಾರಸುದಾರರು 'ಬೆಸ್ತರು'. ನಮ್ಮೆಲ್ಲಾ ಮಹಾ ಪುರಾಣಗಳು ಜಲಪ್ರತೀಕವಾದ ಗಂಗೆಯಿಂದಲೇ ಆರಂಭಗೊಳ್ಳುತ್ತವೆ. ಇಂದಿಗೂ ನಮ್ಮೆಲ್ಲಾ ಆಚರಣೆ ಗಳಲ್ಲಿ ತುಂಬಿದಕೊಡದ ಕಳಸಕ್ಕೆ ಅಗ್ರಸ್ಥಾನ. ಇದು ಸೃಷ್ಟಿಯ ಮೂಲ ಜಲ ಪರಂಪರೆಯ ಸ್ಮರಣೆಯ ...